ಹೊಂಡಾ ಆಕ್ಟೀವಾ ಹಿಂದಿಕ್ಕಿ ಮತ್ತೆ ನಂ.1 ಸ್ಥಾನಕ್ಕೇರಿದ ಹೀರೋ ಸ್ಪ್ಲೆಂಡರ್!

ಭಾರತದಲ್ಲಿ ಹಲವು ದ್ವಿಚಕ್ರವಾಹನಗಳು ಲಭ್ಯವಿದೆ. ಕಡಿಮೆ ಬೆಲೆ, ಗರಿಷ್ಠ ಮೈಲೇಜ್, ಗರಿಷ್ಠ ಸಿಸಿ ಎಂಜಿನ್, ಗರಿಷ್ಠ ಪವರ್ ಸೇರಿದಂತೆ ಹಲವು ವಿಧದ ದ್ವಿಚಕ್ರ ವಾಹನ ಲಭ್ಯವಿದೆ. ಇದರಲ್ಲಿ ಭಾರತದ ನಂ.1 ದ್ವಿಚಕ್ರ  ವಾಹನಕ್ಕಾಗಿ ತೀವ್ರ ಪೈಪೋಟಿ ಇದ್ದೇ ಇರುತ್ತೆ. ಕಳೆದ 6 ತಿಂಗಳಲ್ಲಿ ಇದೀಗ ಹೊಂಡಾ ಆಕ್ಟೀವಾ ಹಿಂದಿಕ್ಕಿ ಹೀರೋ ಸ್ಪ್ಲೆಂಡರ್ ಮೊದಲ ಸ್ಥಾನ ಆಕ್ರಮಿಸಿಕೊಂಡಿದೆ. ಗರಿಷ್ಠ ಮಾರಾಟವಾದ ದ್ವಿಚಕ್ರವಾಹನ ವಿವರ ಇಲ್ಲಿವೆ.

Hero Splendor beaten Honda Activa to become the most selling two-wheeler in India ckm

ನವದೆಹಲಿ(ನ.13):  ಭಾರತದ ನಂ. 1 ದ್ವಿಚಕ್ರ ವಾಹನ ಯಾವುದು? ಪ್ರತಿ ತಿಂಗಳ ಎರಡು ದ್ವಿಚಕ್ರ ವಾಹನಗಳು  ಮೊದಲ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸುತ್ತದೆ. ಇದರಲ್ಲಿ ಹೀರೋ ಸ್ಪ್ಲೆಂಡರ್ ಹಾಗೂ ಹೊಂಡಾ ಆ್ಯಕ್ಟೀವಾ ಪ್ರಮುಖ ದ್ವಿಚಕ್ರವಾಹನಗಳಾಗಿವೆ. ಕಳೆದ 6 ತಿಂಗಳಲ್ಲಿ ಹೀರೋ ಸ್ಪ್ಲೆಂಡರ್ ಗರಿಷ್ಠ ಮಾರಾಟವಾಗೋ ಮೂಲಕ ಭಾರತದ ನಂ.1 ದ್ವಿಚಕ್ರವಾಹನ ಅನ್ನೋ ಹಗ್ಗಳಿಕೆಗೆ ಪಾತ್ರವಾಗಿದೆ.

ಹಬ್ಬದ ಸಂಭ್ರಮ ಡಬಲ್ ; ಹೊಚ್ಚ ಹೊಸ ಹೀರೋ ಸ್ಪ್ಲೆಂಡರ್+ ಬ್ಲಾಕ್ ಮತ್ತು ಆಕ್ಸೆಂಟ್ ಲಾಂಚ್!

ಎಪ್ರಿಲ್ 2020, ರಿಂದ ಸೆಪ್ಟೆಂಬರ್ 2020ರ 6 ತಿಂಗಳ ಅವಧಿಯಲ್ಲಿ ಹೀರೋ ಸ್ಪ್ಲೆಂಡರ್ ಮೊದಲ ಸ್ಥಾನ ಅಲಂಕರಿಸಿದೆ. ಇತ್ತ ಮೊದಲ ಸ್ಥಾನದಲ್ಲಿದ್ದ ಹೊಂಡಾ ಆ್ಯಕ್ಟೀವಾ 2ನೇ ಸ್ಥಾನಕ್ಕೆ ಜಾರಿದೆ. ಕಳೆದ 6 ತಿಂಗಳಲ್ಲಿ ಭಾರತದಲ್ಲಿ 2,378,109 ದ್ವಿಚಕ್ರ ವಾಹನ ಮಾರಾಟವಾಗಿದೆ. ಇದರಲ್ಲಿ ಹೀರೋ ಸ್ಪ್ಲೆಂಡರ್ ಪಾಲು  9,48,228 ಬೈಕ್. ಇನ್ನು 2ನೇ ಸ್ಥಾನಕ್ಕೆ ಕುಸಿದಿರುವ ಹೊಂಡಾ ಆ್ಯಕ್ಟೀವಾ 7,19,914 ಸ್ಕೂಟರ್ ಮಾರಾಟವಾಗಿದೆ.

BS6 ಹೀರೋ ಸ್ಪ್ಲೆಂಡರ್ ಲಾಂಚ್, ಕಡಿಮೆ ಬೆಲೆ!

ಸ್ಪ್ಲೆಂಡರ್ ಇತ್ತೀಚೆಗೆ ಬ್ಲಾಕ್ ಹಾಗೂ ಆಕ್ಸೆಂಟ್ ಎಡಿಶನ್ ಬೈಕ್ ಬಿಡುಗಡೆ ಮಾಡಿತ್ತು. ದೀಪಾವಳಿ ಹಬ್ಬಕ್ಕೆ ಕೆಲ ಆಫರ್ ಕೂಡ ನೀಡಲಾಗಿದೆ. ಹೀಗಾಗಿ ಮುಂದಿನ 6 ತಿಂಗಳು ಕೂಡ ಹೀರೋ ಸ್ಪ್ಲೆಂಡರ್ ಅಗ್ರಸ್ಥಾನದಲ್ಲೇ ಉಳಿಯುವ ಸಾಧ್ಯತೆ ಹೆಚ್ಚಿದೆ.

ಸ್ಕೂಟರ್ ವಿಭಾಗದಲ್ಲಿ ಆ್ಯಕ್ಟೀವಾ ಮೊದಲ ಸ್ಥಾನದಲ್ಲೇ ವಿರಾಜಮಾನವಾಗಿದೆ. ಆ್ಯಕ್ಟೀವಾಗೆ ಪ್ರತಿಸ್ಪರ್ಧಿಯಾಗಿರುವ ಜುಪಿಟರ್ ಕಳೆದ 6 ತಿಂಗಳಲ್ಲಿ 2,03,899 ಸ್ಕೂಟರ್ ಮಾತ್ರ ಮಾರಾಟವಾಗಿದೆ. 

Latest Videos
Follow Us:
Download App:
  • android
  • ios