ನವದೆಹಲಿ(ಅ.04): ದೀಪಾವಳಿ ಹಬ್ಬಕ್ಕೆ ಗ್ರಾಹಕರನ್ನು ಸೆಳೆಯಲು ಆಟೋಮೊಬೈಲ್ ಕಂಪನಿಗಳು ಸಜ್ಜಾಗಿವೆ. ಇದೀಗ ಹೀರೋ ಮೋಟಾರ್ಸ್ ದೀಪಾವಳಿ ಹಬ್ಬಕ್ಕೆ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ರಿಯಾಯಿತಿ ನೀಡಿದೆ. ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ದೀಪಾವಳಿ ಆಫರ್ ಮೂಲಕ ಕಡಿಮೆ ಬೆಲೆಗೆ ದ್ವಿಚಕ್ರ ವಾಹನ ಖರೀದಿಸಬಹುದು.

ಇದನ್ನೂ ಓದಿ: ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ; ಕಡಿಮೆ ಬೆಲೆ, 100 ಕಿ.ಮೀ ಮೈಲೇಜ್!

ಹೀರೋ ಮೋಟಾರ್ಸ್ ಆಗಸ್ಟ್ ತಿಂಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿತ್ತು. ಹೀರೋ ಆಪ್ಟಿಮಾ ER ಹಾಗೂ NYX ER ಎರಡು ಇ ಸ್ಕೂಟರ್ ಬಿಡುಗಡೆ ಮಾಡಿತ್ತು. ಇದೀಗ ದೀಪಾವಳಿ ಹಬ್ಬಕ್ಕೆ 3,000 ರೂಪಾಯಿ ಕ್ಯಾಶ್ ಡಿಸ್ಕೌಂಟ್ ನೀಡಲಾಗಿದೆ.

ಇದನ್ನೂ ಓದಿ: ಆ್ಯಕ್ಟೀವಾ ಅಲ್ಲ, ಹೀರೋ ಸ್ಪ್ಲೆಂಡರ್ ಭಾರತದ ನಂ.1 ದ್ವಿಚಕ್ರ ವಾಹನ!

ಹೀರೋ ಆಪ್ಟಿಮಾ ER ಸ್ಕೂಟರ್ ಬೆಲೆ 68,721 ರೂಪಾಯಿ. ಇನ್ನು  NYX ER ಸ್ಕೂಟರ್ ಬೆಲೆ 69,754 ರೂಪಾಯಿ. ಭಾರತದಲ್ಲಿ ಅತೀ ದೊಡ್ಡ ಎಲೆಕ್ಟ್ರಿಕ್ ಮೋಟಾರ್ ಉತ್ಪಾದಕ ಕಂಪನಿ ಅನ್ನೋ ಹೆಗ್ಗಳಿಕೆ ಹೊಂದಿರುವ ಹೀರೋ ಇದೀ ಆಫರ್ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ.

ಇದನ್ನೂ ಓದಿ: ಕಡಿಮೆ ಬೆಲೆಗೆ ಬಂತು ಹೀರೋ ಪ್ಲೆಶರ್ ಪ್ಲಸ್ 110 ಸ್ಕೂಟರ್!

ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಒಂದು ಬಾರಿ  ಚಾರ್ಜ್ ಮಾಡಿದರೆ 100 ಕಿ.ಮಿ ಪ್ರಯಾಣ ನೀಡಲಿದೆ. ಸಂಪೂರ್ಣ ಚಾರ್ಜ್‌ಗೆ 4 ಗಂಟೆ ಸಮಯ ತೆಗೆದುಕೊಳ್ಳಲಿದೆ. ಭಾರತದಲ್ಲಿ ಒಟ್ಟಿು 615 ಔಟ್‌ಲೆಟ್ ಹಾಗೂ ಸರ್ವೀಸ್ ಸೆಂಟ್ ಹೊಂದಿರುವ ಹೀರೋ ಎಲೆಕ್ಟ್ರಿಕ್ ಇದೀಗ ವಿಸ್ತರಣೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.