ನವದೆಹಲಿ(ಫೆ.05): ಗ್ರೇಟರ್ ನೋಯ್ಡಾದಲ್ಲಿನ ಅಟೋ ಎಕ್ಸ್ಪೋ 2020ರಲ್ಲಿ ಹಿರೋ ಎಲೆಕ್ಟ್ರಿಕ್ ನೂತನ ಬೈಕ್ ಬಿಡುಗಡೆ ಮಾಡಿದೆ. ನೂತನ ಹಿರೋ AE-47 ಎಲೆಕ್ಟ್ರಿಕ್ ಬೈಕ್ ಆಕರ್ಷಕ ವಿನ್ಯಾಸ ಹೊಂದಿದೆ. ಇದು ಕಂಪನಿಯ ಮೊದಲ ಎಲೆಕ್ಟ್ರಿಕ್ ಬೈಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ TVS ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದ ಗಡ್ಕರಿ!

 ಹಿರೋ AE-47 ಎಲೆಕ್ಟ್ರಿಕ್ ಬೈಕ್ ಸಂಪೂರ್ಣವಾಗಿ ಭಾರತದಲ್ಲಿ ತಯಾರಾಗಿಲ್ಲ. ಆಟೋ ಎಕ್ಸ್ಪೋದಲ್ಲಿ ಅನಾವರಣ ಮಾಡಿರುವ ನೂತನ  ಹಿರೋ AE-47 ಎಲೆಕ್ಟ್ರಿಕ್ ಬೈಕ್ ಬೆಲೆ 1.25 ಲಕ್ಷ ರೂಪಾಯಿಂದ 1.50 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್; ಇಲ್ಲಿದೆ ಬೆಲೆ, ವಿಶೇಷತೆ!

ಹೈ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಬೈಕ್ ಆಗಿರುವ  ಹಿರೋ AE-47 ಗರಿಷ್ಠ ವೇಗ 100 ಕಿ.ಮೀ ಪ್ರತಿ ಗಂಟೆಗೆ ನೀಡಲಿದೆ. ನೂತನ ಬೈಕ್ 4,000 W ಎಲೆಕ್ಟ್ರಿಕ್ ಮೋಟಾರ್ ಬಳಸಲಾಗಿದೆ.  ಹಗುರವಾದ ಲಿಥಿಯಂ ಐಯಾನ್ 48V/3.5 kWh ಬ್ಯಾಟರಿ ಹೊಂದಿರುವ ಹಿರೋ AE-47 ಬೈಕ್, ಸಂಪೂರ್ಣ ಚಾರ್ಜ್‌ಗೆ 4 ಗಂಟೆ ಸಮಯ ತೆಗೆದುಕೊಳ್ಳಲಿದೆ. ಸಂಪೂರ್ಣ ಚಾರ್ಜ್‌ನಲ್ಲಿ 160 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ.