ಅಹಮ್ಮದಾಬಾದ್(ಡಿ.06): ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಬಳಿಕ ಟ್ರಾಫಿಕ್ ನಿಯಮ ಕಟ್ಟುನಿಟ್ಟಾಗಿದೆ. ಸಿಗ್ನಲ್ ಜಂಪ್, ಹೆಲ್ಮೆಟ್, ಸೀಟ್ ಬೆಲ್ಟ್ ನಿಯಮ ಉಲ್ಲಂಘನೆಗೆ ದುಬಾರಿ ದಂಡ ಪಾವತಿಸಬೇಕು. ಇದೀಗ ಗುಜರಾತ್‌ನ ಸಾರಿಗೆ ಸಚಿವರು ಹೆಲ್ಮೆಟ್ ಕಡ್ಡಾಯವಲ್ಲ ಎಂದಿದ್ದಾರೆ. ಈ ಮೂಲಕ ಕೇಂದ್ರದ ಮಹತ್ವದ ಯೋಜನೆ ಜಾರಿಗೆ ಬಂದ 3 ತಿಂಗಳ ಬಳಿಕ ಉಲ್ಟಾ ಹೊಡೆದಿದ್ದಾರೆ.

ಇದನ್ನೂ ಓದಿ: ಹೆಲ್ಮೆಟ್ ಹಾಕದ ಬೈಕ್ ಸವಾರನಿಗೆ ಫೈನ್; ನಡುರಸ್ತೆಯಲ್ಲಿ ಬೈಕ್ ಪುಡಿ ಪುಡಿ!

ಗುಜರಾತ್ ಸಾರಿಗೆ ಸಚಿವ ಆರ್‌ಸಿ ಫಾಲ್ದು ಘೋಷಣೆ ದೇಶದಲ್ಲಿ ಭಾರಿ ಸಂಚಲನ ಮೂಡಿಸಿದೆ. ನಗರ ಪ್ರದೇಶಗಳಲ್ಲಿ ಮಾತ್ರ ಹೆಲ್ಮೆಟ್ ಕಡ್ಡಾಯವಲ್ಲ ಎಂದಿದ್ದಾರೆ. ಮುನ್ಸಿಪಲ್ ಕಾರ್ಪೋರೇಶನ್ ವ್ಯಾಪ್ತಿಯಲ್ಲಿ ಹೆಲ್ಮೆಟ್ ಕಡ್ಡಾಯವಲ್ಲ. ಆದರೆ ಹೆದ್ದಾರಿ, ಗ್ರಾಮ, ಜಿಲ್ಲೆಗಳ ರಸ್ತೆಗಳಲ್ಲಿ ಹೆಲ್ಮೆಟ್ ಕಡ್ಡಾಯ ಎಂದಿದ್ದಾರೆ.

ಇದನ್ನೂ ಓದಿ: ರೊಚ್ಚಿಗೆದ್ದ ಗ್ರಾಹಕನಿಂದ ಕತ್ತೆ ವಾಹನ ಬೋರ್ಡ್; ಕೋರ್ಟ್ ಮೆಟ್ಟಿಲೇರಿದ MG !

ನಗರ ಪ್ರದೇಶಗಲ್ಲಿ ಹೆಲ್ಮೆಟ್ ಕಡ್ಡಾಯ ನಿಯಮದ ವಿರುದ್ಧ ಹಲವು ದೂರುಗಳು ಬಂದಿವೆ. ಹೀಗಾಗಿ ನಗರ ಪ್ರದೇಶಗಳಲ್ಲಿ ಹೆಲ್ಮೆಟ್ ಕಡ್ಡಾಯ ನಿಯಮವನ್ನು ತೆಗೆದುಹಾಕಲಾಗಿದೆ ಎಂದು ಫಾಲ್ದು ಹೇಳಿದ್ದಾರೆ. ಇದೀಗ ಗುಜರಾತ್‌ನ ನಗರ ಪ್ರದೇಶಗಲ್ಲಿ ಹೆಲ್ಮೆಟ್ ಹಾಕಿಲ್ಲ ಎಂದು ಪೊಲೀಸರು ನಿಲ್ಲಿಸುವಂತಿಲ್ಲ. ಸಾರಿಗೆ ಸಚಿವರ ಹೊಸ ಘೋಷಣೆಗೆ ವಿರೋಧಗಳು ವ್ಯಕ್ತವಾಗಿದೆ.