ಬಿಡುಗಡೆಗೆ ಸಜ್ಜಾಗಿದೆ ಫೋರ್ಡ್ ಮಸ್ತಾಂಗ್ ಎಲೆಕ್ಟ್ರಿಕ್ ಕಾರು!
ಫೋರ್ಡ್ ಮಸ್ತಾಂಗ್ ಹೊಸ ರೂಪದಲ್ಲಿ ಬಿಡುಗಡೆಯಾಗುತ್ತಿದೆ. ಸೂಪರ್ ಕಾರು ಇದೀಗ ಎಲೆಕ್ಟ್ರಿಕ್ ಕಾರಾಗಿ ಬಿಡುಗಡೆಯಾಗಲಿದೆ. ನೂತನ ಕಾರಿನ ವಿವರ ಇಲ್ಲಿದೆ.
ನವದೆಹಲಿ(ಡಿ.02): ಸೂಪರ್ ಕಾರು ವಿಭಾಗದಲ್ಲಿ ಫೋರ್ಡ್ ಮಸ್ತಾಂಗ್ ಅಗ್ರಸ್ಥಾನದಲ್ಲಿದೆ. ಆಕರ್ಷಕ ವಿನ್ಯಾಸ, ಎಂಜಿನ್, ಆಧುನಿಕ ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಇದೀಗ ಇದೇ ಕಾರು ಎಲೆಕ್ಟ್ರಿಕ್ ಕಾರಾಗಿ ಬಿಡುಗಡೆಯಾಗುತ್ತಿದೆ. ಫೋರ್ಡ್ ಮಸ್ತಾಂಗ್ ಮ್ಯಾಚ್ ಇ ಹೆಸರಿನಲ್ಲಿ ನೂತನ ಕಾರು ಭಾರತ ಪ್ರವೇಶಿಸಲು ಸಜ್ಜಾಗಿದೆ.
ಇದನ್ನೂ ಓದಿ: 2020ರಲ್ಲಿ ಬಿಡುಗಡೆಯಾಗಲಿರುವ ಎಲೆಕ್ಟ್ರಿಕ್ ಕಾರು ಪಟ್ಟಿ!
ಫೋರ್ಡ್ ಮಸ್ತಾಂಗ್ ಎಲೆಕ್ಟ್ರಿಕ್ ಕಾರಿನಲ್ಲಿ 75kWh ಬ್ಯಾಟರಿ ಹಾಗೂ 258hp ಮೋಟಾರ್ ಅಥವಾ 99kWh ಬ್ಯಾಟರಿ ಹಾಗೂ 289hp ಮೋಟಾರ್ ಬಳಸುವ ಸಾಧ್ಯತೆ ಇದೆ. ನೂತನ ಕಾರು 416Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 450 ಕಿ.ಮೀ ರಿಂದ 595 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: 21 ಸಾವಿರಕ್ಕೆ ಬುಕ್ ಮಾಡಿ ಟಾಟಾ ಅಲ್ಟ್ರೋಜ್ ಕಾರು!
ನೂತನ ಫೋರ್ಡ್ ಮಸ್ತಾಂಗ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ 2021ರಲ್ಲಿ ಬಿಡುಗಡೆಯಾಗಲಿದೆ. 1.5 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಮಸ್ತಾಂಗ್ ಕಾರಿಗೂ ಮೊದಲು ಜಾಗ್ವಾರ್ i ಫೇಸ್, ಆಡಿ ಇ ಟ್ರಾನ್ ಕಾರುಗಳು ಬಿಡುಗಡೆಯಾಗಲಿವೆ. ಈ ಕಾರುಗಳು ಬೆಲೆ ಕೂಡ ಸರಿಸುಮಾರು 1.5 ಕೋಟಿ ರೂಪಾಯಿ.