Asianet Suvarna News Asianet Suvarna News

ಫೋರ್ಡ್ ಇಕೋಸ್ಪೋರ್ಟ್ ಟೈಟಾನಿಯಂ AT ಕಾರು ಬಿಡುಗಡೆ!

ಭಾರತದಲ್ಲಿ SUV ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರ ಜೊತೆಗೆ ಪೈಪೋಟಿ ಕೂಡ ಹೆಚ್ಚಾಗಿದೆ. ಪ್ರತಿ ಆಟೋಮೊಬೈಲ್ ಕಂಪನಿಗಳು ಸಬ್ ಕಾಂಪಾಕ್ಟ್ SUV ಬಿಡುಗಡೆ ಮಾಡುತ್ತಿದೆ. ಭಾರತದಲ್ಲಿ ತನ್ನ ಇಕೋ ಸ್ಪೋರ್ಟ್ SUV ಕಾರಿನ ಮೂಲಕ ಮೋಡಿ ಮಾಡಿರುವ ಫೋರ್ಡ್ ಇದೀಗ ಇಕೋಸ್ಪೋರ್ಟ್ ಟೈಟಾನಿಯಂ AT ಕಾರು ಬಿಡುಗಡೆ ಮಾಡಿದೆ.

Ford India lunched ecosport Titanium AT SUV car
Author
Bengaluru, First Published Jul 19, 2020, 10:28 PM IST

ನವೆದಹಲಿ(ಜು.19): ಫೋರ್ಡ್ ಇಕೋಸ್ಪೋರ್ಟ್ ಕಾರಿನಲ್ಲಿ ಲಭ್ಯವಿರುವ ಕಡಿಮೆ ಬೆಲೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕಾರು ಬಿಡುಗಡೆಯಾಗಿದೆ. ಫೋರ್ಡ್ ಇಕೋಸ್ಪೋರ್ಟ್ ಟೈಟಾನಿಯಂ AT ಕಾರು ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ನೂತನ ಕಾರಿನ ಬೆಲೆ 10.66 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 

ನ್ಯೂ ಎಂಡವರ್‌! 10 ಸ್ಪೀಡ್ ಆಟೋ ಮತ್ತು ಸೆಲೆಕ್ಟ್ ಶಿಫ್ಟ್ ತಂತ್ರಜ್ಞಾನದ ವಿಶ್ವದ ಮೊದಲ ಕಾರ್

ಈಗಾಗಲೇ ಮಾರುಕಟ್ಟೆಯಲ್ಲಿದ್ದ ಫೋರ್ಡ್ ಇಕೋಸ್ಪೋರ್ಟ್ ಟೈಟಾನಿಯಂ+  AT ಕಾರಿಗಿಂತ 90,000 ರೂಪಾಯಿ ಕಡಿಮೆಗೆ ನೂತನ ಇಕೋಸ್ಪೋರ್ಟ್ ಟೈಟಾನಿಯಂ AT ಲಭ್ಯವಿದೆ. BS6 ಎಂಜಿನ್ ಹೊಂದಿರುವ ನೂತನ ಕಾರು 1.5 ಲೀಟರ್ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್‌ಗಳಲ್ಲಿ ಲಭ್ಯವಿದೆ.

1.5 ಲೀಟರ್ Ti-VCT ಪೆಟ್ರೋಲ್ ಎಂಜಿನ್  122PS ಪವರ್ ಹಾಗೂ  149Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  5 ಸ್ಪೀಡ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ  6 ಸ್ಪೀಡ್ ಆಟೋ ಟ್ರಾನ್ಸ್‌ಮಿಶನ್ ಹೊಂದಿದೆ.  1.5- ಲೀಟರ್ TDCi ಡೀಸೆಲ್ ಎಂಜಿನ್ 100PS ಪವರ್ ಹಾಗೂ  215Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಡೀಸೆಲ್ ವೇರಿಯೆಂಟ್‌ನಲ್ಲಿ ಕೇವಲ 5 ಸ್ಪೀಡ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ. 

ಪೆಟ್ರೋಲ್ ಮ್ಯಾನ್ಯುಯೆಲ್ ಕಾರು ಪ್ರತಿ ಲೀಟರ್‌ಗೆ 15.9 ಕಿಲೋಮೀಟರ್ ಮೈಲೇಜ್, ಆಟೋಮ್ಯಾಟಿಕ್ ಕಾರು 14.7 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಡೀಸೆಲ್ ಕಾರು ಪ್ರತಿ ಲೀಟರ್‌ಗೆ 21.7 ಕಿಲೋಮೀಟರ್ ಮೈಲೇಜ್ ನೀಡಲಿದೆ. ABS, EBD, ಹೈ ಸ್ಪೀಡ್ ಅಲರ್ಟ್ ಸಿಸ್ಟಮ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ರೇರ್ ಕ್ಯಾಮರ, ಏರ್‌ಬ್ಯಾಗ್, ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಹೊಂದಿದೆ.

Follow Us:
Download App:
  • android
  • ios