Asianet Suvarna News Asianet Suvarna News

ನ್ಯೂ ಎಂಡವರ್‌! 10 ಸ್ಪೀಡ್ ಆಟೋ ಮತ್ತು ಸೆಲೆಕ್ಟ್ ಶಿಫ್ಟ್ ತಂತ್ರಜ್ಞಾನದ ವಿಶ್ವದ ಮೊದಲ ಕಾರ್

ಎಂಡವರ್ ಕಾರ್ ಅಭಿಮಾನಿಗಳಿಗೆ ಇದೀಗ ಫೋರ್ಡ್‌ ಕಂಪನಿ ಸಿಹಿ ಸುದ್ದಿ ನೀಡಿದೆ. ಹೊಸ ತಲೆಮಾರಿನ ಎಂಡವರ್ ಕಾರು ಜನರಿಗೆ ಪರಿಚಯಿಸಿದೆ. ಈ ಕಾರಿನ ವಿಶೇಷತೆಗಳೇನು? ಹೊಸ ಫೀಚರ್ಸ್ ಗಳೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

New generation Ford Endeavour car launched in India
Author
Bengaluru, First Published Mar 18, 2020, 4:48 PM IST

-ಜಿಎಸ್‌ಬಿ ಅಗ್ನಿಹೋತ್ರಿ

ಎಸ್‌ಯುವಿ ಸೆಗ್ಮೆಂಟ್‌ ಕಾರುಗಳ ಬೇಡಿಕೆ ಕುಸಿದ ದಿನಗಳಿಲ್ಲ. ಕಳೆದ ನಾಲ್ಕಾರು ವರ್ಷಗಳಿಂದೀಚೆ ಬೇಡಿಕೆ ದ್ವಿಗುಣಗೊಂಡಿದೆ. ಹಾಗೆ ನೋಡಿದರೆ, ಎಸ್‌ಯುವಿ ಕಾರುಗಳು ತಂತ್ರಜ್ಞಾನ ಅಳವಡಿಕೆಯೊಂದಿಗೆ ಆಟೋಮೊಬೈಲ್‌ ಕ್ಷೇತ್ರದಲ್ಲಿ ಒಂದು ರೀತಿಯ ಕ್ರಾಂತಿಯನ್ನೇ ನಡೆಸಿವೆ.

ಆದರೆ, ಫ್ಯಾಮಿಲಿ ಮಂದಿಗೂ ಹಾಗೂ ವಾಹನ ಕ್ರೇಜಿಗಳನ್ನೂ ತನ್ನತ್ತ ಸೆಳೆದು ಜನಪ್ರಿಯತೆ ಉಳಿಸಿಕೊಂಡಿರುವ ಕಾರುಗಳು ಬೆರಳೆಣಿಕೆಯಷ್ಟು ಮಾತ್ರ. ಈ ಎರಡೂ ಕ್ಯಾಟಗರಿಯ ಮಂದಿಯನ್ನು ಆರ್ಕರ್ಷಿಸುವಂತೆ ನೋಡಿಕೊಳ್ಳುವಲ್ಲಿ ಅನೇಕ ಎಸ್‌ಯುವಿಗಳು ಫಲವಾಗಿವೆ. ಕೆಲವೇ ಕೆಲವು ಎಸ್‌ಯುವಿ ಕಾರುಗಳು ಇಂದಿಗೂ ತನ್ನದೇ ಆದ ಒಂದು ವರ್ಗ ಸೃಷ್ಟಿಸಿಕೊಳ್ಳುವಲ್ಲಿ ಯಶಸ್ಸು ಸಾಧಿಸಿವೆ. ಇಂತಹ ಕಾರುಗಳ ಸಾಲಿಗೆ ಸೇರಿದ ಎಸ್‌ಯುವಿ ‘ಫೋರ್ಡ್‌ ಎಂಡವರ್‌’.

300 ರೂಪಾಯಿಗೆ 312 ಕಿ.ಮೀ ಮೈಲೇಜ್,ಇದು ಟಾಟಾ ನೆಕ್ಸಾನ್EV ಕಾರು ಬಾರು!

ಎಂಡವರ್‌ ಎಂದಾಕ್ಷಣ ಒಮ್ಮೆ ರೋಮಾಂಚನಗೊಳ್ಳುವ ಅಭಿಮಾನಿ ವರ್ಗಕ್ಕೆ ಇದೀಗ ಫೋರ್ಡ್‌ ಕಂಪನಿ ಸಿಹಿ ಸುದ್ದಿ ನೀಡಿದೆ. ಅನೇಕ ಬದಲಾವಣೆಯೊಂದಿಗೆ ಹೊಸ ಎಂಡವರ್‌ ವೇರಿಯಂಟ್‌ ಪರಿಚಯಿಸಿದೆ. ಮಾರುಕಟ್ಟೆಯಲ್ಲಿ ಇನ್ನೊಮ್ಮೆ ಹೊಸ ಸಂಚಲನ ಮೂಡಿಸುವ ನಿರೀಕ್ಷೆಯಲ್ಲಿ ಫೋರ್ಡ್‌ ಕಂಪನಿಯಿದ್ದು, ಈಗಾಗಲೇ ಭಾರತವೂ ಸೇರಿ ಇನ್ನೂ ಕೆಲವು ದೇಶಗಳಲ್ಲಿ ತನ್ನ ಹೊಚ್ಚಹೊಸ ಎಂಡವರ್‌ ಕಾರುಗಳ ಸಾಮರ್ಥ್ಯ ಹಾಗೂ ಹೊಸ ಫೀಚರ್‌ಗಳನ್ನು ಗೊತ್ತು ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಕಳೆದವಾರ ಬೆಂಗಳೂರಿನಲ್ಲಿಯೂ ಗ್ರೇಟ್‌ ಫೋರ್ಡ್‌ ಎಂಡವರ್‌ ಡ್ರೈವ್‌’ ಆಫ್‌ರೋಡ್‌ ಚಾಲನೆಗೆ ಅವಕಾಶ ಕಲ್ಪಿಸಲಾಗಿತ್ತು.

ಮಾರುಕಟ್ಟೆಯಲ್ಲಿ ಹೊಸ ಕಾರು ಬಾರು; ನಿಮ್ಮ ಆಯ್ಕೆ ಯಾವುದು?

ಏಪ್ರಿಲ್‌ 30ರ ಒಳಗೆ ಬುಕ್‌ ಮಾಡುವ ಗ್ರಾಹಕರು ವಿಶೇಷ ರಿಯಾಯತಿ ದರದಲ್ಲಿ ಖರೀದಿಸುವ ಆಫರ್‌ನ ಲಾಭ ಪಡೆದುಕೊಳ್ಳಲಿದ್ದಾರೆ ಎಂದು ಕಂಪನಿ ಹೇಳಿಕೊಂಡಿದೆ. ಹೊಚ್ಚ ಹೊಸ ಎಂಡವರ್‌ನ ಬೆಲೆಯನ್ನು ಮೇ ತಿಂಗಳಲ್ಲಿ ಪ್ರಕಟಿಸುವ ಲೆಕ್ಕಾಚಾರದಲ್ಲಿ ಕಂಪನಿ ಇದೆ.

ಎಂಜಿನ್‌ ವೈಶಿಷ್ಟ್ಯ:

ನ್ಯೂ ಎಂಡವರ್‌ ಕಾರಿನ ಎಂಜಿನ್‌ ಈ ಮೊದಲಿಗಿಂಥ ಉತ್ತಮಗೊಳಿಸುವಲ್ಲಿ ಫೋರ್ಡ್‌ ಯಶಸ್ಸು ಸಾಧಿಸಿದೆ. ಸರಿಸಾಟಿ ಇಲ್ಲದ ರೀತಿಯಲ್ಲಿ 2.0 ಲೀಟರ್‌ ಇಕೋಬ್ಲ್ಯೂ ಡೀಸೆಲ್‌ ಎಂಜಿನ್‌ ಅಭಿವೃದ್ಧಿಪಡಿಸಿ ಎಂಡವರ್‌ನಲ್ಲಿ ಅಳವಡಿಸಿದೆ. ಇದರಿಂದಾಗಿ ಇಂಧನ ಕ್ಷಮತೆಯ ಜೊತೆಗೆ ಅತ್ಯುತ್ತಮ ಪರ್ಫಾರ್ಮೆನ್ಸ್‌ ಮತ್ತು ರಿಫೈನ್‌ಮೆಂಟ್‌ ನಿರೀಕ್ಷಿಸಬಹುದಾಗಿದೆ. 170 ಪಿಎಸ್‌ ಗರಿಷ್ಠ ಸಾಮರ್ಥ್ಯ ಮತ್ತು 420 ಎನ್‌ಎಂ ಗರಿಷ್ಠ ಟಾರ್ಕ್ ಸಾಮರ್ಥ್ಯ ಇದರದ್ದಾಗಿದೆ. ಭಾರತ್‌ ಸ್ಟೇಜ್‌ 6ಗೆ ಅನುಗುಣವಾಗಿ ಇಂಧನ ಕ್ಷಮತೆ ವೃದ್ದಿಸುವಂತೆ ವಿನ್ಯಾಸಗೊಳಿಸಲಾಗಿದೆ.  12.4 ಕಿಲೋಮೀಟರ್‌ ಮೈಲೇಜ್‌ ಇರುವುದಾಗಿ ಕಂಪನಿ ಹೇಳಿಕೊಂಡಿದೆ. ಈ ಮೊದಲಿಗಿಂತಲೂ ಶೇ.14ರಷ್ಟುಇಂಧನ ಉಳಿತಾಯ ಸಾಧ್ಯ ಎಂದಿದೆ.

10 ಸ್ಟೀಡ್‌ ಗೇರ್‌ ಹೊಸ ಅಧ್ಯಾಯ!

ಹೊಸ ಎಂಡವರ್‌ನ ಹೊಸ ಫೀಚರ್‌ ಇದು. ವಿಶ್ವದ ಯಾವುದೇ ಎಸ್‌ಯುವಿ ಸೆಗ್ಮೆಂಟ್‌ ಕಾರುಗಳಲ್ಲಿಯೂ ಇಂಥದ್ದೊಂದು ಫೀಚರ್‌ ಬಳಕೆ ಆಗಿದ್ದಿಲ್ಲ. 10 ಸ್ಪೀಡ್‌ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಜೊತೆಗೆ ‘ಸೆಲೆಕ್ಟ್ ಶಿಫ್ಟ್‌’ ಆಪ್ಶನ್‌ ಇರುವುದು ಇದೇ ಮೊದಲು. ಈ ಮೂಲಕ ಆಟೋಮೊಬೈಲ್‌ ಕ್ಷೇತ್ರದಲ್ಲಿ ಫೋರ್ಡ್‌ ಹೊಸ ಕ್ರಾಂತಿಗೆ ನಾಂದಿ ಹಾಡಿದೆ. ಈ ಫೀಚರ್‌, ಲಾಂಗ್‌ ಡ್ರೈವ್‌ನಲ್ಲಿ ಚಾಲಕ ಸ್ನೇಹಿ ಹಾಗೂ ಐಷಾರಾಮಿ ಪ್ರಯಾಣ ಬಯಸುವವರಿಗೂ ಹೊಸದೊಂದು ಅನುಭವ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದರಿಂದ ಆಕ್ಸ್‌ಲರೇಷನ್‌ ಬಳಕೆಯಲ್ಲಿ ನಯವಾದ ಅನುಭವ ಸಾಧ್ಯ. ಗೇರ್‌ ಬದಲಾವಣೆ ಕೂಡ ಯಾವುದೇ ಸಂದರ್ಭದಲ್ಲಿ ಅನುಭವಕ್ಕೆ ಬಾರದಂತೆ ವಿನ್ಯಾಸಗೊಳಿಸಿರುವುದು ಒಂದು ವಿಶೇಷ. ಚಾಲಕ ಡ್ರೈವ್‌ ಆರಂಭಿಸುವುದಕ್ಕೂ ಮೊದಲು ಗೇರ್‌ ಸ್ಪೀಡ್‌ ಆಯ್ಕೆ ಮಾಡಿಟ್ಟುಕೊಳ್ಳುವ ಅರ್ಥಾತ್‌ 3 ಸ್ಪೀಡ್‌ನಲ್ಲೂ, 4 ಸ್ಪೀಡ್‌ನಲ್ಲೂ ಅಥವಾ 10 ಸ್ಪೀಡ್‌ನಲ್ಲೂ ಓಡಿಸುವ ಆಯ್ಕೆ ಚಾಲಕ ಮಾಡಿಕೊಳ್ಳಬಹುದು.

ಸೆಲೆಕ್ಸ್‌ ಶಿಫ್ಟ್‌ ಸಿಸ್ಟಮ್‌!:

ಸೆಲೆಕ್ಟ್ ಶಿಫ್ಟ್‌ ಮಗದೊಂದು ವಿಶೇಷ ಫೀಚರ್‌. ಪೊ›ಗ್ರೆಸ್ಸೀವ್‌ ರೇಂಜ್‌ ಆಯ್ಕೆ ಮಾಡಿಕೊಳ್ಳುವಂತಹ ಅವಕಾಶ ನ್ಯೂ ಎಂಡವರ್‌ನಲ್ಲಿದೆ. ಗೇರ್‌ಗಳನ್ನು ನಮ್ಮ ಆಯ್ಕೆಗೆ ತಕ್ಕಂತೆ ಅದರದೇ ಪ್ರಮಾಣದಲ್ಲಿ ಹಿಡಿದಿಡುವ, ಅಂದರೆ ಲಾಕ್‌ ಮಾಡಿಕೊಳ್ಳುವ ಅವಕಾಶ ಇದೆ. ಈ ತಂತ್ರಜ್ಞಾನದಿಂದ ಆಫ್‌ ರೋಡ್‌ ಡ್ರೈವ್‌ ವೇಳೆ ಇಳಿಜಾರಿನಲ್ಲಿ ಅಥವಾ ಟಯರ್‌ಗಳು ಸ್ಕಿಡ್‌ ಆಗುವಂತಹ ರಸ್ತೆಗಳಲ್ಲಿ ಅಚ್ಚರಿಯ ಅನುಭವ ನೀಡುತ್ತದೆ. ಡ್ರೈವ್‌ ವೇಳೆ ಸುರಕ್ಷತೆ ಬಯಸುವ ಚಾಲಕರು ಮೆಚ್ಚಿಕೊಳ್ಳುವಂತಹ ಫೀಚರ್‌ ಇದಾಗಿದೆ.

ಫೋರ್ಡ್‌ಪಾಸ್‌ ಅಪ್ಲಿಕೇಷನ್‌(ಆ್ಯಪ್‌):

ತಂತ್ರಜ್ಞಾನದ ಮುಂದುವರಿದ ಭಾಗ ಎನ್ನುವುದಕ್ಕಿಂತ ಗ್ರಾಹಕ ಸ್ನೇಹಿ ವ್ಯವಸ್ಥೆ ಇದು. ಕಾರಿನ ಅನೇಕ ಸಮಸ್ಯೆಗಳಿಗೆ ಚಾಲಕನಿಗೆ ಅನುಕೋಲವಾಗುವಂತೆ ಫೋರ್ಡ್‌ಪಾಸ್‌ ಅಪ್ಲಿಕೇಷನ್‌ ಅಭಿವೃದ್ಧಿ ಪಡಿಸಲಾಗಿದೆ. ಇದರಿಂದ ಚಾಲಕ ಮೂಲಭೂತವಾದ ಒಂದಿಷ್ಟುಮಾತಿಗಳನ್ನು ತಿಳಿದುಕೊಳ್ಳಬಹುದು. 2020ರ ಎಂಡವರ್‌ನ ಎಲ್ಲಾ ವೇರಿಯಂಟ್‌ಗಳೂ ಕ್ಲೌಡ್‌ ಸಂಪರ್ಕಿತ ವಿನ್ಯಾಸದಿಂದ ಒಳಗೊಂಡಿದ್ದು, ಈ ತಂತ್ರಜ್ಞಾನದಿಂದಾಗಿ ಸಮಸ್ಯೆ ಎದುರಾದ ಕ್ಷಣದಲ್ಲಿಯೇ ಪರಿಹಾರ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗಲಿದೆ. ತಜ್ಞರಿಂದಲೇ ನಿಮ್ಮ ಸಮಸ್ಯೆಗೆ ಆ್ಯಪ್‌ನಲ್ಲಿ ಉತ್ತರ ಸಿಗಲಿದೆ.

ಇನ್ನಷ್ಟು ವಿಶೇಷ

- ಸಮಕಾಲೀನ ವಿನ್ಯಾಸದ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಅಳವಡಿಸಲಾಗಿದ್ದು, ಈ ಹಿಂದಿಗಿಂತಲೂ ಶೇ.20ರಷ್ಟುಹೆಚ್ಚಿನ ಬೆಳಕು ನಿರೀಕ್ಷಿಸಬಹುದು.

- ಚಾಲಕ ಸೇರಿ ಏಳು ಸೀಟರ್‌ ವಾಹನ ಇದಾಗಿದ್ದು, ಒಟ್ಟು ಏಳು ಏರ್‌ ಬ್ಯಾಗ್‌ಗಳನ್ನು ಹೊಂದಿದೆ.

- ಟೆರೈನ್‌ ಮ್ಯಾನೇಜ್‌ಮೆಂಟ್‌ ವ್ಯವಸ್ಥೆ ಅಳವಡಿಕೆಯ ಮೊದಲ ಎಸ್‌ಯುವಿ ಸೆಗ್ಮೆಂಟ್‌ ಕಾರು ಇದಾಗಿದ್ದು, ಒಟ್ಟು ನಾಲ್ಕು ಮೋಡ್‌ಗಳನ್ನು ನೀಡಲಾಗಿದೆ. ಸಾಮಾನ್ಯ ರಸ್ತೆಗಳಾಗಿದ್ದಲ್ಲಿ, ಮಂಜುಗವಿದ, ಅರಲು ಅಥವಾ ಹುಲ್ಲುಗಳೇ ಇರುವ ರಸ್ತೆಗಳಲ್ಲಿ, ಮರಳು ತುಂಬಿದ ರಸ್ತೆಗಳಲ್ಲಿ ಹಾಗೂ ಕಲ್ಲುಗಳೇ ತುಂಬಿರುವ ರಸ್ತೆಗಳಲ್ಲಿ ಅದಕ್ಕೆ ತಕ್ಕುದಾದ ಮೋಡ್‌ನಲ್ಲಿ ಚಾಲನೆ ಮಾಡಬಹುದು. ಥ್ರಾಟಲ್‌ ರೆಸ್ಪಾನ್ಸ್‌, ಟ್ರಾಕ್ಷನ್‌ ಕಂಟ್ರೋಲ್‌, ಫೋರ್‌ ವೀಲ್‌ ಸಿಸ್ಟಂ ಮತ್ತು ಟ್ರಾನ್ಸ್‌ಮಿಷನ್‌ ಮಾರ್ಪಡಿಸಿಕೊಳ್ಳುವ ಆಯ್ಕೆ ವ್ಯವಸ್ಥೆ ಇದೆ.

- ಅತಿ ಎಚ್ಚು ಗ್ರೌಂಡ್‌ ಕ್ಲಿಯರೆನ್ಸ್‌ ಜೊತೆಗೆ 800 ಎಂಎಂ ವಾಟರ್‌ ವೇಡಿಂಗ್‌ ವ್ಯವಸ್ಥೆ ಹೊಂದಿದೆ.

- ವೈಸ್‌ ಎನೇಬಲ್ಡ್‌ ಮತ್ತು ಇನ್‌ ಕಾರ್‌ ಕನೆಕ್ಟಿವಿಟಿಯ ಎಸ್‌ವೈಎನ್‌ಸಿ 3 ತಂತ್ರಜ್ಞಾನದ 8 ಇಂಚಿನ ಟಚ್‌ ಸ್ಕ್ರೀನ್‌, ಆ್ಯಪಲ್‌ ಕಾರ್‌ ಪ್ಲೇ ಅಳವಡಿಸಲಾಗಿದೆ.

- ಮೇಲ್ಚಾವಣಿಯ ಶೇ.50ರಷ್ಟುತೆರೆದುಕೊಳ್ಳುವ ‘ಸನ್‌ ರೂಫ್‌’ ವ್ಯವಸ್ಥೆ ಇದೆ.

- ಒಂದೊಮ್ಮೆ ಲಗೇಜ್‌ ಹೆಚ್ಚು ಇದ್ದಲ್ಲಿ ಆಗ 2010 ಲೀಟರ್‌ನಷ್ಟುಬೂಟ್‌ ಸ್ಪೇಸ್‌ಗೆ ಅವಕಾಶ ಮಾಡಿಕೊಳ್ಳಬಹುದು.

- ಪುಶ್‌ ಸ್ಟಾರ್ಟ್‌ ಬಟನ್‌, ಹಿಂಭಾಗ ಕೇಂದ್ರಿತ ಹ್ಯಾಂಡ್‌ ಫ್ರೀ ಪವರ್‌ ಲಿಫ್ಟ್‌ ಗೇಟ್‌, ಹಿಂಭಾಗ ಮತ್ತು ಮುಂಭಾಗದಲ್ಲಿ ಸೆನ್ಸಾರ್‌, ಹಿಂಭಾಗದಲ್ಲಿ ಪಾರ್ಕಿಂಗ್‌ ಕ್ಯಾಮರಾ, ಸೆಮಿ ಆಟೋ ಪ್ಯಾರಲಲ್‌ ಪಾರ್ಕ್ ಅಸಿಸ್ಟ್‌, ಆಟೋ ವೈಫರ್‌, ಆಟೋ ಕ್ಲೈಮೇಟ್‌ ಕಂಟ್ರೋಲ್‌ ಇಂದಿನ ಬಹುತೇಕ ಹೈಎಂಡ್‌ ಕಾರುಗಳಲ್ಲಿ ಇರುವಂತೆ ಇದರಲ್ಲಿಯೂ ಲಭ್ಯ.

Follow Us:
Download App:
  • android
  • ios