ನವದೆಹಲಿ(ಅ.27): ಮಾರಾಟ ಚೇತರಿಕೆ ಕಾಣುತ್ತಿದ್ದ ಬೆನ್ನಲ್ಲೇ ಫೋರ್ಡ್ ಇಂಡಿಯಾ ತನ್ನ ಇಕೋಸ್ಪೋರ್ಟ್ ಕಾರಿನ ಬೆಲೆ ಹೆಚ್ಚಿಸಿದೆ. ಇಕೋ ಸ್ಪೋರ್ಟ್ ಎಲ್ಲಾ ವೇರಿಯೆಂಟ್ ಕಾರಿನ ಬೆಲೆಯನ್ನು ಗರಿಷ್ಠ 1,500 ರೂಪಾಯಿ ಹೆಚ್ಚಿಸಿದೆ. ಅಕ್ಟೋಬರ್ 1 ರಿಂದ ಪರಿಷ್ಕೃತ ಬೆಲೆ ಜಾರಿಗೆ ಬರಲಿದೆ. ಕೊರೋನಾ ವಕ್ಕರಿಸಿದ ಬಳಿಕ ಫೋರ್ಡ್ 2ನೇ ಬಾರಿಗೆ ಬೆಲೆ ಹೆಚ್ಚಳ ಮಾಡುತ್ತಿದೆ.

ಸ್ಪೊರ್ಟಿ ಲುಕ್, 6 ಏರ್‌ಬ್ಯಾಗ್; ಫೋರ್ಡ್ ಫ್ರೀ ಸ್ಟೈಲ್ ಫ್ಲೇರ್ ಎಡಿಶನ್ ಕಾರು ಬಿಡುಗಡೆ!.

ಜುಲೈ 2020ರಲ್ಲಿ ಫೋರ್ಡ್ ಗರಿಷ್ಠ 13,500 ರೂಪಾಯಿ ಹೆಚ್ಚಳ ಮಾಡಿತ್ತು. ಇದೀಗ ಫೋರ್ಡ್ ಇಕೋಸ್ಪೋರ್ಟ್ ಕಾರಿನ ಮೇಲೆ 1,500 ರೂಪಾಯಿ ಬೆಲೆ ಹೆಚ್ಚಳ ಮಾಡಿದೆ.

ಫೋರ್ಡ್ ಇಕೋಸ್ಪೋರ್ಟ್ ಪೆಟ್ರೋಲ್ ಕಾರಿನ ನೂತನ ಬೆಲೆ(ಎಕ್ಸ್ ಶೋ ರೂಂ)
ಆ್ಯಂಬಿಯೆಂಟ್ =8.19 ಲಕ್ಷ ರೂಪಾಯಿ
ಟ್ರೆಂಡ್ = 8.99 ಲಕ್ಷ ರೂಪಾಯಿ
ಟೈಟಾನಿಯಂ = 9.78 ಲಕ್ಷ ರೂಪಾಯಿ
ಟೈಟಾನಿಯಂ AT= 10.68 ಲಕ್ಷ ರೂಪಾಯಿ
ಥಂಡರ್ = 10.68 ಲಕ್ಷ ರೂಪಾಯಿ
ಟೈಟಾನಿಯಂ + = 10.68 ಲಕ್ಷ ರೂಪಾಯಿ
ಸ್ಪೋರ್ಟ್ಸ್ = 11.23 ಲಕ್ಷ ರೂಪಾಯ
ಟೈಟಾನಿಯಂ + AT = 11.58 ಲಕ್ಷ ರೂಪಾಯಿ

ನ್ಯೂ ಎಂಡವರ್‌! 10 ಸ್ಪೀಡ್ ಆಟೋ ಮತ್ತು ಸೆಲೆಕ್ಟ್ ಶಿಫ್ಟ್ ತಂತ್ರಜ್ಞಾನದ ವಿಶ್ವದ ಮೊದಲ ಕಾರ್

ಫೋರ್ಡ್ ಇಕೋಸ್ಪೋರ್ಟ್ ಡೀಸೆಲ್ ಕಾರಿನ ನೂತನ ಬೆಲೆ(ಎಕ್ಸ್ ಶೋ ರೂಂ)
ಆ್ಯಂಬಿಯೆಂಟ್ = 8.69 ಲಕ್ಷ ರೂಪಾಯಿ
ಟ್ರೆಂಡ್ = 9.49 ಲಕ್ಷ ರೂಪಾಯಿ
ಟೈಟಾನಿಯಂ = 10 ಲಕ್ಷ ರೂಪಾಯಿ
ಥಂಡರ್ = 11.18 ಲಕ್ಷ ರೂಪಾಯಿ
ಟೈಟಾನಿಯಂ + = 11.18 ಲಕ್ಷ ರೂಪಾಯಿ 
ಸ್ಪೋರ್ಟ್ಸ್ = 11. 73 ಲಕ್ಷ ರೂಪಾಯಿ

ಕಾರು ತಯಾರಿಕೆ ಬೆಲೆ ಹೆಚ್ಚಾಗುತ್ತಿದೆ. ಕಚ್ಚಾ ವಸ್ತುಗಳ ಬೆಲೆ ಹೆಚ್ಚಾಗಿದೆ. ಆಮದು ಸುಂಕ ಸೇರಿದಂತೆ ಹಲವು ಕಾರಣಗಳಿಂದ ಬೆಲೆ ಏರಿಕೆ ಮಾಡಲಾಗಿದೆ. 1.5 ಲೀಟರ್, 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹಾಗೂ 1.4 ಲೀಟರ್, 4 ಸಿಲಿಂಡರ್ ಡೀಸೆಲ್ ಎಂಜಿನ್ ವೇರಿಯೆಂಟ್ ಹೊಂದಿದೆ.