ನವದೆಹಲಿ(ಮೇ.13): ಫೋರ್ಡ್ ಇಂಡಿಯಾ ಇದೀಗ 2 ಹೊಸ SUV ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಮಾರುತಿ ಬ್ರೆಜಾ ಪ್ರತಿಸ್ಪರ್ಧಿ ಸಬ್‌ ಕಾಂಪಾಕ್ಟ್ ಕಾರು ಹಾಗೂ  ಹ್ಯುಂಡೈ ಕ್ರೆಟಾ ಪ್ರತಿಸ್ಪರ್ದಿ SUV ಕಾರು ಬಿಡುಗಡೆ ಮಾಡಲು ಫೋರ್ಡ್ ಇಂಡಿಯಾ ತಯಾರಿ ಆರಂಭಿಸಿದೆ.  ಸದ್ಯ ಮಹೀಂದ್ರ ಜೊತೆಗೂಡಿ ಹೊಸ ಇನ್ನಿಂಗ್ಸ್ ಆರಂಭಿಸಿರುವ ಫೋರ್ಡ್ ನೂತನ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ.

ಇದನ್ನೂ ಓದಿ: ಕಡಿತವಾಗಲಿದೆ ಒಲಾ ಕ್ಯಾಬ್ ದರ-10ಸಾವಿರ ಎಲೆಕ್ಟ್ರಿಕ್ ವಾಹನ ಸೇರ್ಪಡೆ!

ಸದ್ಯ ಭಾರತದ ಕಾರು ಮಾರುಕಟ್ಟೆಯಲ್ಲಿ SUV ಕಾರುಗಳಿಗೆ ಭಾರಿ ಬೇಡಿಕೆ ಇದೆ. ಮಾರುತಿ ಬ್ರೆಜಾ ಕಾರು ಬೇಡಿಕೆಗೆ ಅನುಗುಣವಾಗಿ ಕಾರು ಪೂರೈಸುತ್ತಿದೆ. ಇದಕ್ಕೆ ಪೈಪೋಟಿ ನೀಡಲು ಫೋರ್ಡ್, ಮಹೀಂದ್ರ, ಟಾಟಾ, ಹ್ಯುಂಡೈ ಸೇರಿದಂತೆ ಹಲವು ಕಂಪನಿಗಳು SUV ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಮಾರುತಿ ಬ್ರೆಜಾ ಪೈಪೋಟಿಯಾಗಿ ಫೋರ್ಡ್ ಇಕೋಸ್ಪೋರ್ಟ್ ಈಗಾಗಲೇ ಮಾರುಕಟ್ಟೆಯಲ್ಲಿದೆ. 

ಇದನ್ನೂ ಓದಿ: ಶೀಘ್ರದಲ್ಲೇ ಪೆಟ್ರೋಲ್ ಮಾರುತಿ ಬ್ರೆಜಾ ಬಿಡುಗಡೆ- ಡೀಸೆಲ್ ಕಾರಿಗಿಂತ ಕಡಿಮೆ ಬೆಲೆ!

ಫೋರ್ಡ್ ಇಂಡಿಯಾ ಇದೀಗ ಮತ್ತೆರಡು SUV ಬಿಡುಗಡೆ ಮಾಡಿ ಭಾರತ ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಸಜ್ಜಾಗಿದೆ. BX744 ಕಾರು ಹಾಗೂ BX745 ಅನ್ನೋ ಹೆಸರಿನಲ್ಲಿ 2 ಕಾರುಗಳನ್ನು ಫೋರ್ಡ್ ಬಿಡುಗಡೆ ಮಾಡಲಿದೆ. ನೂತನ ಕಾರಿನ ಎಂಜಿನ್, ಮೈಲೇಜ್ ಹಾಗೂ ಬೆಲೆ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ನೂತನ ಕಾರಿನ ಕುರಿತ ಅಪ್‌ಡೇಟ್‌ಗಾಗಿ ಸುವರ್ಣನ್ಯಾಸ್.ಕಾಂ ಕ್ಲಿಕ್ ಮಾಡಿ.