ಬ್ರೆಜಿಲ್(ನ.07): ಸುದೀರ್ಘ ವರ್ಷಗಳ ಬಳಿಕ ಫಿಯೆಟ್ ಕಂಪೆನಿ ಇದೀಗ ಹೊಚ್ಚ ಹೊಸ ಡಿಸೈನ್, ಆಕರ್ಷಕ SUV ಕಾನ್ಸೆಪ್ಟ್ ಕಾರು ಅನಾವರಣ ಮಾಡಿದೆ. ಬ್ರೆಜಿಲ್‌ನಲ್ಲಿ ನಡೆದ ಸಾವೋ ಪೌಲೋ ಮೋಟಾರ್ ಶೋನಲ್ಲಿ ಫಿಯೆಟ್ ಕಂಪೆನಿ ಫಾಸ್ಟ್‌ಬ್ಯಾಕ್ SUV ಕಾನ್ಸೆಪ್ಟ್ ಕಾರನ್ನ ಅನಾವರಣ ಮಾಡಿದೆ.

ನೂತನ ಕಾರು ಅನಾವರಣ ಮಾಡೋ ಮೂಲಕ, ಹ್ಯುಂಡೈ ಕ್ರೆಟಾ, ಟಾಟಾ ಹರಿಯರ್ ಹಾಗೂ ನಿಸಾನ್ ಕಿಕ್ಸ್‌ಗೆ ಪೈಪೋಟಿ ನೀಡಲು ಸಜ್ಜಾಗಿದೆ. SUV ಕಾರುಗಳ ಸಂಪ್ರಾದಯದ ಡಿಸೈನ್ ಬಿಟ್ಟು ಹೊಸ ಡಿಸೈನ್ ಮೂಲಕ ಫಾಸ್ಟ್‌ಬ್ಯಾಕ್ ಕಾರು ಅನಾವರಣವಾಗಿದೆ.

ಮುಂಭಾಗದ ಗ್ರಿಲ್, ಹೈಮೌಂಟೆಡ್ ನ್ಯಾರೋ ಎಲ್ಇಡಿ ಲೈಟ್, ಶಾರ್ಪ್ ಚಿನ್, ದುಬಾರಿ ಶೀಟ್ ಮೆಟಲ್, ರೂಫ್ ಲೈನ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಬ್ರೆಜಿಲ್  ವರ್ಶನ್ ಕಾರುಗಳು ನಿರ್ಮಾಮ ಕಾರ್ಯ ಆರಂಭಿಸಿದೆ. 2019ರಲ್ಲಿ ಈ ಕಾರು ಭಾರತ ಪ್ರವೇಶಿಸಲಿದೆ. ಆದರೆ ಸದ್ಯ ಅನಾವರಣಗೊಂಡಿರುವುದು ಕಾನ್ಸೆಪ್ಟ್. ವಿನ್ಯಾಸದಲ್ಲಿ, ಹಾಗೂ ಲುಕ್‌ನಲ್ಲೂ ಹಲವು ಬದಲಾವಣೆಗಳಾಗುವು ಸಾಧ್ಯತೆಗಳಿವೆ.