ಪೊಲೀಸರ ಮುಂದೆ ಸ್ಟಂಟ್, ಫೆರಾರಿ ಕಾರು ಸೀಝ್ !
ಸಾರ್ವಜನಿಕ ಪ್ರದೇಶದಲ್ಲಿ ಕಾರು ಚಲಾಯಿಸವಾಗ ನಿಯಮಗಳನ್ನು ಪಾಲಿಸಲೇಬೇಕು. ಆದರೆ ಸೂಪರ್ ಕಾರು ಮಾಲೀಕರು ನಿಯಮಗಳನ್ನು ಗಾಳಿಗೆ ತೂರಿ ಸ್ಟಂಟ್ ಮಾಡುವುದು ಹಚ್ಚಾಗುತ್ತಿದೆ. ಹೀಗೆ ಪೊಲೀಸರ ಮುಂದೆ ಸ್ಟಂಟ್ ಮಾಡಿ ಜನರ ಚಪ್ಪಾಳೆ ಗಿಟ್ಟಿಸಿದ ಫೆರಾರಿ ಕ್ಯಾಲಿಫೋರ್ನಿಯಾ ಸೂಪರ್ ಕಾರು ಮಾಲೀಕನಿಗೆ ಪೊಲೀಸರು ಸರಿಯಾಗಿ ತಿರುಗೇಟು ನೀಡಿದ್ದಾರೆ.
ಕಾನ್ಪುರ(ಆ.18): ಭಾರತದಲ್ಲಿ ಸೂಪರ್ ಕಾರುಗಳ ಸಂಖ್ಯೆ ಹೆಚ್ಚೇ ಇದೆ. ನಗರ ಪ್ರದೇಶಗಳಲ್ಲಿ ಸೂಪರ್ ಕಾರುಗಳು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಸೂಪರ್ ಕಾರು ಮಾಲೀಕರು ಎಚ್ಚರ ವಹಿಸಬೇಕಾದ ಅಗತ್ಯ ಇದೆ. ಕಾರಣ ವಿದೇಶದಲ್ಲಿ ಸೂಪರ್ ಕಾರು ಚಲಾಯಿಸಿದಂತೆ ಭಾರತದಲ್ಲಿ ಸಾಧ್ಯವಿಲ್ಲ. ರಾಷ್ಟ್ರೀಯ ಹೆದ್ದಾರಿಯಾಗಿದ್ದರೂ, ವೇಗಕ್ಕೆ ಮಿತಿ ಇದ್ದೆ ಇದೆ. ಹೀಗೆ ಹತ್ತು ಹಲವು ನಿಯಮಗಳನ್ನು ಪಾಲಿಸಲೇಬೇಕು. ಆದರೆ ಹಲವು ಸೂಪರ್ ಕಾರು ಮಾಲೀಕರು ತಾವು ದುಬಾರಿ ಹಾಗೂ ಐಷಾರಾಮಿ ಕಾರು ಖರೀದಿಸಿದ್ದೇವೆ ಅನ್ನೋ ಅಹಂ ನಿಂದ ಕಾರು ಚಲಾಯಿಸಿ ಪೇಚಿಗೆ ಸಿಲುಕಿದ ಊದಾಹರಣೆ ಸಾಕಷ್ಟಿವೆ. ಹೀಗೆ ಫೆರಾರಿ ಸೂಪರ್ ಕಾರು ಮಾಲೀಕ ಇದೀಗ ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ.
ಸಿಂಘಂ ಸಿನಿಮಾ ಸೀನ್ ಮರುಸೃಷ್ಟಿ ಮಾಡಿದ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಬಿತ್ತು ಬರೆ!
ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದೆ. ಗುಟ್ಕಾ ಕಂಪನಿ ಮಾಲೀಕ ತನ್ನ ಫೆರಾರಿ ಕ್ಯಾಲಿಫೋರ್ನಿಯಾ GT ಕಾರಿನಲ್ಲಿ ಬಂದು ಗಂಗಾ ಬ್ಯಾರೇಜ್ ಪ್ರದೇಶದಲ್ಲಿ ಸ್ಟಂಟ್ ಆರಂಭಿಸಿದ್ದಾನೆ. ಗಿಜಿ ಗಿಡುತ್ತಿರುವ ರಸ್ತೆಯಲ್ಲಿ ತನ್ನ ಸೂಪರ್ ಕಾರು ಮೂಲಕ ಸ್ಟಂಟ್ ಮಾಡಿದ್ದಾನೆ. ಕಾರಿನ ಮೂಲಕ 0 ಕಟ್ ಮಾಡಲು ಕಸರತ್ತು ನಡೆಸಿದ್ದಾನೆ. ಆದರೆ ಸ್ಥಳಾವಕಾಶ ಕೊರತೆ ಕಾರಣ ಸಂಪೂರ್ಣ ಯಶಸ್ಸು ಸಿಕ್ಕಿಲ್ಲ.
ಶಾಲಾ ಪ್ರವಾಸಕ್ಕೂ ಮೊದಲು ಚಾಲಕನ ಸಾಹಸ; ಬಸ್ ವಶಕ್ಕೆ, ಲೆಸೆನ್ಸ್ ರದ್ದು!
ಒಂದೆರೆಡು ಸುತ್ತು ಹಾಕಿದ್ದಾನೆ. ಈತ ಇಷ್ಟೆಲ್ಲಾ ಕಸರತ್ತು ಮಾಡಿದ್ದು ಪೊಲೀಸರ ಮುಂದೆ. ಜನರು ಈತನ ಸ್ಟಂಟ್ ನೋಡುತ್ತಿದ್ದರೆ, ಇತ್ತ ಪೊಲೀಸ್ ಕೂಡ ಮೂಕ ಪ್ರೇಕ್ಷಕರಾಗಿ ನೋಡಿದ್ದಾರೆ. ಈ ವೇಳೆ ಈತನ ಸ್ಟಂಟ್ ನಿಲ್ಲಿಸುವ ಪ್ರಯತ್ನಕ್ಕೂ ಕೈಹಾಕಿಲ್ಲ. ಆದರೆ ಈ ಕಸರತ್ತು ನೋಡುತ್ತಿದ್ದ ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇಷ್ಟೇ ಅಲ್ಲ ಪೊಲೀಸರ ವಿರುದ್ಧ ಆಕ್ರೋಶ ಕೇಳಿ ಬಂದಿತ್ತು.
ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಎಚ್ಚೆತ್ತಕೊಂಡಿದ್ದಾರೆ. ಫೆರಾರಿ ಕಾರಿನ ನಂಬರ್ ಪರಿಶೀಲಿಸಿ ಕಾರನ್ನು ಸೀಝ್ ಮಾಡಿದ್ದಾರೆ. ಇಷ್ಟೇ ಮಾಲೀಕನ ಮೇಲೆ ದುಬಾರಿ ದಂಡ ಹಾಕಲಾಗಿದೆ. ಇದರ ಜೊತೆಗೆ ಸಾರ್ವಜನಿಕ ರಸ್ತೆ ಹಾಗೂ ಸ್ಥಳಗಳಲ್ಲಿ ಸ್ಟಂಟ್ ಮಾಡಿದರೆ ಕಠಿಣ ಶಿಕ್ಷೆ ನೀಡಲಾಗುವುದು. ಇದು ಎಚ್ಚರಿಕೆ ಎಂಬ ಸಂದೇಶವನ್ನು ಪೊಲೀಸರು ಸಾರಿದ್ದಾರೆ.