ಫಾಸ್ಟ್ಯಾಗ್‌ ಅಳವಡಿಸಲು ಇನ್ನು ಕೇವಲ 5 ದಿನ ಬಾಕಿ!

ಫಾಸ್ಟ್ಯಾಗ್ ಅಂತಿಮ ಗಡುವಿಗೆ ಇನ್ನು ಐದು ದಿನಗಳಷ್ಟೇ ಬಾಕಿ ಉಳಿದಿದ್ದು, ಅಷ್ಟರಲ್ಲೇ ಎಲ್ಲಾ ವಾಹನಗಳಿಗೂ ಅಳವಡಿಕೆ ಕಡ್ಡಾಯವಾಗಿದೆ.  ಜ.15 ಕ್ಕೆ ಅಂತಿಮ ಗಡುವು ಇದ್ದು,  ಇನ್ನು ಬಾಕಿ ಉಳಿದ ಐದು ದಿನಗಳಲ್ಲಿ ಶೇ.25ರಷ್ಟು(ಶೇ.15ರಷ್ಟುವಿಐಪಿ ವಾಹನಗಳಿಗೆ ವಿನಾಯ್ತಿಯಿದೆ) ವಾಹನಗಳು ಫಾಸ್ಟ್ಯಾಗ್‌ ಅಳವಡಿಸಿಕೊಳ್ಳುವುದು ಬಾಕಿಯಿದೆ.

FASTag mandatory for all vehicles from Jan 15

ಬೆಂಗಳೂರು [ಜ.11]:  ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಪ್ಲಾಜಾಗಳಲ್ಲಿ ಸಂಚರಿಸುವ ಶೇ.60ರಷ್ಟುವಾಹನಗಳು ಫಾಸ್ಟ್ಯಾಗ್‌ ಅಳವಡಿಸಿಕೊಂಡಿದ್ದು, ಅಂತಿಮ ಗಡುವಿಗೆ (ಜ.15) ಇನ್ನು ಬಾಕಿ ಉಳಿದ ಐದು ದಿನಗಳಲ್ಲಿ ಶೇ.25ರಷ್ಟು(ಶೇ.15ರಷ್ಟುವಿಐಪಿ ವಾಹನಗಳಿಗೆ ವಿನಾಯ್ತಿಯಿದೆ) ವಾಹನಗಳು ಫಾಸ್ಟ್ಯಾಗ್‌ ಅಳವಡಿಸಿಕೊಳ್ಳುವುದು ಬಾಕಿಯಿದೆ.

ಕೇಂದ್ರ ಸರ್ಕಾರ ಫಾಸ್ಟ್ಯಾಗ್‌ ಅಳವಡಿಕೆಗೆ ನೀಡಿದ್ದ ಗಡುವು ವಿಸ್ತರಣೆ ಇನ್ನು ಐದು ದಿನಗಳಲ್ಲಿ (ಜ.15) ಮುಕ್ತಾಯವಾಗಲಿದೆ. ಶೇ.15ರಷ್ಟುವಾಹನಗಳು (ತುರ್ತು ಸೇವಾ ವಾಹನಗಳು, ವಿಐಪಿ, ವಿವಿಐಪಿ) ಫಾಸ್ಟ್ಯಾಗ್‌ ಅಳವಡಿಕೆಯಿಂದ ವಿನಾಯ್ತಿ ಪಡೆದಿದ್ದು, ಉಳಿದ ಶೇ.25ರಷ್ಟುವಾಹನಗಳು ಇನ್ನುಳಿದಿರುವ ಐದು ದಿನಗಳಲ್ಲಿ ಫಾಸ್ಟ್ಯಾಗ್‌ ಅಳವಡಿಸಿಕೊಳ್ಳಬೇಕು. ಈ ಅವಧಿಯಲ್ಲಿ ಫಾಸ್ಟ್ಯಾಗ್‌ ಅಳವಡಿಸಿಕೊಳ್ಳದಿದ್ದರೆ ಜ.15ರಿಂದ ಕ್ಯಾಶ್‌ ಲೈನ್‌ನಲ್ಲಿ ಮಾತ್ರ ಸಂಚರಿಸಬೇಕು. ಫಾಸ್ಟ್ಯಾಗ್‌ ಲೈನ್‌ನಲ್ಲಿ ಸಂಚರಿಸುವುದಾದರೆ ಕಡ್ಡಾಯವಾಗಿ ದುಪ್ಪಟ್ಟು ಶುಲ್ಕ ಪಾವತಿಸಬೇಕು.

ಈಗಾಗಲೇ ರಾಜ್ಯದಲ್ಲಿ ಫಾಸ್ಟ್ಯಾಗ್‌ಗೆ ಬೇಡಿಕೆ ಕಡಿಮೆಯಾಗಿದೆ. ಟೋಲ್‌ ಪ್ಲಾಜಾಗಳಲ್ಲಿ ತೆರೆದಿರುವ ಫಾಸ್ಟ್ಯಾಗ್‌ ಸೆಂಟರ್‌ಗಳು, ಬ್ಯಾಂಕ್‌ಗಳು, ಆನ್‌ಲೈನ್‌ ಮಾರುಕಟ್ಟೆಯಲ್ಲಿ ಫಾಸ್ಟ್ಯಾಗ್‌ಗಳಿಗೆ ಬೇಡಿಕೆ ಇಳಿಮುಖವಾಗಿದೆ. ಡಿ.15ರ ವೇಳೆಗೆ ರಾಜ್ಯದಲ್ಲಿ ಶೇ.40ರಷ್ಟಿದ್ದ ಫಾಸ್ಟ್ಯಾಗ್‌ ಅಳವಡಿಕೆ ಪ್ರಮಾಣ ಕಳೆದ 25 ದಿನಗಳಲ್ಲಿ ಶೇ.20ರಷ್ಟುಹೆಚ್ಚಳವಾಗಿದೆ. ಅಂದರೆ, ಈವರೆಗೆ ರಾಜ್ಯದಲ್ಲಿ ಒಟ್ಟು ಶೇ.60ರಷ್ಟುವಾಹನಗಳು ಫಾಸ್ಟ್ಯಾಗ್‌ ಅಳವಡಿಸಿಕೊಂಡಿವೆ.

ಫಾಸ್ಟ್ಯಾಗ್‌ ಸ್ಕ್ಯಾನರ್ ಕೆಟ್ಟಿದ್ದರೆ ಟೋಲ್‌ ಕಟ್ಟಬೇಕಿಲ್ಲ...

ವಿನಾಯಿತಿ ಪಡೆದ ವಾಹನಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ಇನ್ನೂ ಶೇ.25ರಷ್ಟುವಾಹನಗಳು ಫಾಸ್ಟ್ಯಾಗ್‌ ಅಳವಡಿಸಿಕೊಳ್ಳುವುದು ಬಾಕಿ ಇದೆ. ಕೇಂದ್ರ ಸರ್ಕಾರ ಫಾಸ್ಟ್ಯಾಗ್‌ ಅಳವಡಿಕೆಗೆ ನೀಡಿದ್ದ ಗಡುವು ವಿಸ್ತರಣೆ ಇನ್ನು ಕೇವಲ ಐದು ದಿನಗಳಲ್ಲಿ ಮುಕ್ತಾಯವಾಗುವುದರಿಂದ ಈ ಅವಧಿಯಲ್ಲಿ ಶೇ.5ರಿಂದ ಶೇ.10ರಷ್ಟುವಾಹನಗಳು ಫಾಸ್ಟ್ಯಾಗ್‌ ಅಳವಡಿಸಿಕೊಳ್ಳುವ ನಿರೀಕ್ಷೆಯಿದೆ.

ಈಗಾಗಲೇ ಮೀಸಲು ಜಾರಿ:

ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್‌ ಲೈನ್‌, ಕ್ಯಾಶ್‌ ಲೈನ್‌ ಹಾಗೂ ವಿವಿಐಪಿ ಲೈನ್‌ ಎಂದು ಮೀಸಲಿರಿಸಲಾಗಿದೆ. ಈ ಮೀಸಲಿಗೆ ಅನುಗುಣವಾಗಿ ವಾಹನಗಳಿಗೆ ಆಯಾಯ ಲೈನ್‌ಗಳಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಕ್ಯಾಶ್‌ ಲೈನ್‌ನಲ್ಲಿ ಬರುವ ವಾಹನಗಳಿಗೆ ಅಲ್ಲಿನ ದಟ್ಟಣೆಗೆ ಅನುಗುಣವಾಗಿ ಫಾಸ್ಟ್ಯಾಗ್‌ ಲೈನ್‌ಗಳಲ್ಲೂ ಅವಕಾಶ ನೀಡಲಾಗುತ್ತಿದೆ. ಜ.15ರ ಬಳಿಕ ಇದು ಕೂಡ ಸ್ಥಗಿತವಾಗಲಿದೆ. ಅಂದರೆ, ಮೀಸಲು ಲೈನ್‌ಗಳಿಗೆ ಅನುಗುಣವಾಗಿಯೇ ವಾಹನಗಳು ಕಡ್ಡಾಯವಾಗಿ ಸಂಚರಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿಯ ಅಧಿಕಾರಿಯೊಬ್ಬರು ಹೇಳಿದರು.

ಕೇಂದ್ರ ಸರ್ಕಾರ ಡಿ.1ರಿಂದ ಫಾಸ್ಟ್ಯಾಗ್‌ ಅಳವಡಿಕೆ ಕಡ್ಡಾಯಗೊಳಿಸಿತ್ತು. ಏಕಾಏಕಿ ಫಾಸ್ಟ್ಯಾಗ್‌ಗಳಿಗೆ ಬೇಡಿಕೆ ಬಂದಿದ್ದರಿಂದ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಈ ಹಿನ್ನೆಲೆಯಲ್ಲಿ ವಾಹನ ಮಾಲಿಕರು, ಸಾರಿಗೆ ನಿಗಮಗಳು, ಟ್ರಾವೆಲ್ಸ್‌ ಅಸೋಸಿಯೇಷನ್‌ಗಳು ಫಾಸ್ಟ್ಯಾಗ್‌ ಅಳವಡಿಕೆಗೆ ಗುಡುವು ವಿಸ್ತರಿಸುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಈ ಮನವಿ ಪುರಸ್ಕರಿಸಿದ್ದ ಕೇಂದ್ರ ಸರ್ಕಾರ ಡಿ.15ರ ವರೆಗೆ ಗಡುವು ವಿಸ್ತರಿಸಿತ್ತು. ಈ ಅವಧಿಯಲ್ಲೂ ಫಾಸ್ಟ್ಯಾಗ್‌ ಪೂರೈಕೆ ಸಮಸ್ಯೆ, ತಾಂತ್ರಿಕ ಸಮಸ್ಯೆಗಳಿಂದ ಫಾಸ್ಟ್ಯಾಗ್‌ ಅಳವಡಿಕೆ ಪ್ರಮಾಣ ಇಳಿಮುಖವಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರ ಎರಡನೇ ಬಾರಿಗೆ ಅಂದರೆ ಜ.15ರ ವರೆಗೂ ಗಡುವು ವಿಸ್ತರಿಸಿತ್ತು.

ರಾಜ್ಯದಲ್ಲಿ ಈವರೆಗೆ ಶೇ.60ರಷ್ಟುವಾಹನಗಳು ಫಾಸ್ಟ್ಯಾಗ್‌ ಅಳವಡಿಸಿಕೊಂಡಿವೆ. ಫಾಸ್ಟ್ಯಾಗ್‌ ಅಳವಡಿಸಿಕೊಳ್ಳದ ವಾಹನಗಳು ಜ.15ರಿಂದ ಫಾಸ್ಟ್ಯಾಗ್‌ ಲೈನ್‌ನಲ್ಲಿ ಸಂಚರಿಸಿದರೆ ದುಪ್ಪಟ್ಟು ಶುಲ್ಕ ಪಾವತಿ ಕಡ್ಡಾಯ. ಕೇಂದ್ರ ಸರ್ಕಾರ ಮತ್ತೊಮ್ಮೆ ಫಾಸ್ಟ್ಯಾಗ್‌ ಅಳವಡಿಕೆಗೆ ಗಡುವು ವಿಸ್ತರಿಸುವ ಕುರಿತಂತೆ ಯಾವುದೇ ಮಾಹಿತಿ ಇಲ್ಲ.

- ಶ್ರೀಧರ್‌, ಪ್ರಧಾನ ವ್ಯವಸ್ಥಾಪಕ, ಎನ್‌ಎಚ್‌ಎಐ ಪ್ರಾದೇಶಿಕ ಕಚೇರಿ

Latest Videos
Follow Us:
Download App:
  • android
  • ios