Fact Check : ಬಿಸಿಲಿನ ಶಾಖಕ್ಕೆ ಕರಗಿಹೋದ ಕಾರುಗಳು!
ಬಿಸಿಲಿನ ಝಳ ಎಷ್ಟಿದೆ ಎಂದರೆ ಮನೆ ಹೊರಗೆ ನಿಲ್ಲಿಸಿರುವ ಕಾರುಗಳು ತನ್ನಿಂದ ತಾನೆ ಕರಗುತ್ತಿವೆ. ಹೌದೆ ಹಾಗಾದರೆ ಎಲ್ಲಿ, ಎಲ್ಲಿಂದ ಇಂಥ ಆತಂಕಕಾರಿ ಸುದ್ದಿ ಬಂದಿದೆ. ಹಾಗಾದರೆ ಈ ಸುದ್ದಿಯ ಸತ್ಯಾಸತ್ಯತೆ ಏನು?
ನವದೆಹಲಿ(ಜೂ. 11) ಸೌದಿ ಅರೇಬಿಯಾದಲ್ಲಿ ಹೆಚ್ಚಿದ ಅತಿಯಾದ ಉಷ್ಣತೆ ಕಾರುಗಳನ್ನು ಸುಡಿಉತ್ತಿದೆ! ಹೌದು ಹೀಗೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸದ್ದು ಮಾಡುತ್ತಿದೆ.
ಹಿಂಬದಿ ಸುಟ್ಟು ಹೋದ ಎರಡು ಕಾರುಗಳ ಪೋಟೋ ವೈರಲ್ ಆಗಿವೆ. ಸೌದಿ ಅರೇಬಿಯಾದಲ್ಲಿ ಉಷ್ಣತೆ 52 ಡಿಗ್ರಿ ಸೆಲ್ಸಿಯಸ್ ಗೆ ತಲುಪಿದ್ದು ಜೂನ್ 5 ರಂದು ಎರಡು ಕಾರುಗಳು ಕರಕಲಾಗಿವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಕಾರು ಡ್ರೈವಿಂಗ್ ವೇಳೆ ಗಮನದಲ್ಲಿರಲಿ 5 ಅಂಶ - ನಿರ್ಲಕ್ಷ್ಯಿಸಿದರೆ ಅಪಾಯ!
ಆದರೆ ಇದರ ಅಸಲಿ ಕತೆ ಬೇರೆಯೇ ಇದೆ. ಇದು ಬೆಂಕಿ ಅವಘಡದಲ್ಲಿ ಸುಟ್ಟ ಕಾರುಗಳ ಚಿತ್ರ. ಯುಎಸ್ ಎನ ಅರಿಜೋನಾದಲ್ಲಿ ಬೆಂಕಿಗೆ ಆಹುತಿಯಾದ ಚಿತ್ರಗಳನ್ನು ಹರಿಯಬಿಡಲಾಗಿದೆ. ಜೂನ್ 19, 2018 ರಲ್ಲಿ ನಡೆದ ಘಟನೆ ಈಗ ಮತ್ತೆ ಸುದ್ದಿಯಾಗುವಂತೆ ಸೋಶಿಯಲ್ ಮೀಡಿಯಾ ಮಾಡಿದೆ.