ದೆಹಲಿ(ಮಾ.09):  ಅದು ದೆಹಲಿಯ ತಾಜ್‌ ಪ್ಯಾಲೆಸ್‌. ಜಗಮಗಿಸುವ ವೇದಿಕೆ. ಆಗಷ್ಟೇ ಬಣ್ಣದ ಲೋಕಕ್ಕೆ ಬಂದ ಸಿನಿಮಾ ನಟಿಯಂತೆ ತಳಕು ಬಳುಕಿನ ವಯ್ಯಾರ ತೋರುತ್ತಿದ್ದ ಬೆಳಕು. ವೇದಿಕೆ ಮುಂದಿದ್ದವರ ದೃಷ್ಟಿಬೃಹತ್‌ ಎಲ್‌ಇಡಿಯತ್ತ ನೆಟ್ಟಿತ್ತು. ಎಲ್ಲರಲ್ಲೂ ಕುತೂಹಲ. ಮಾರುಕಟ್ಟೆಯ ಲೆಕ್ಕಾಚಾರಗಳು, ಹೊತಸವನ್ನು ಆಹ್ವಾನಿಸುವ ಸಂಭ್ರಮ. ಜೋರಾದ ಮ್ಯೂಸಿಕ್‌. ಆ ರಂಗುರಂಗಿನ ಸಂಭ್ರಮದ ವೇದಿಕೆಯ ಮೇಲಿನ ತೆರೆ ಮೇಲೆ ‘ಎಪಿಕ್‌ ಈಸ್‌ ಬ್ಯಾಕ್‌’ ಎನ್ನುತ್ತ ದರ್ಶನ ಕೊಟ್ಟಿದ್ದು ಹೋಂಡಾ ಎನ್ನುವ ಬ್ರಾಂಡ್‌ ನೇಮ್‌. ಕಾರುಗಳ ಜಗತ್ತಿನ ಪ್ರತಿಷ್ಠಿತ ಕಂಪನಿ ಅದು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಇದನ್ನೂ ಓದಿ: TATA ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರಿನ ಬೆಲೆ ಬಹಿರಂಗ- i20,ಬಲೆನೋಗಿಂತ ಕಡಿಮೆ!

ಎಪಿಕ್‌ ಈಸ್‌ ಬ್ಯಾಕ್‌... ಹೀಗೊಂದು ಜೋಶ್‌ಫುಲ್ಲಾದ ಪ್ರಕಟಣೆಯೊಂದಿಗೆ ಹೋಂಡಾ ಕಂಪನಿ, ಮಾರುಕಟ್ಟೆಗೆ ತನ್ನ ಹೊಸ ಕಾರನ್ನು ಪರಿಚಯಿಸಿತು. 1972-1979 ರಿಂದ ಕಾರು ಜಗತ್ತಿನಲ್ಲಿ ದೊಡ್ಡ ಕಾರುಬಾರು ಮಾಡಿಕೊಂಡೇ ಇಲ್ಲಿವರೆಗೂ 9 ಜನರೇಷನ್‌ ಕಾರುಗಳನ್ನು ಮಾರುಕಟ್ಟೆಗೆ ಬಿಟ್ಟು ಈಗ 10ನೇ ಜನರೇಷನ್‌ಗೊಂದು ಹೊಸತನದಿಂದ ಕೂಡಿದ ಅತ್ಯಾಧುನಿಕ ಸೌಲಭ್ಯಗಳಿರುವ ಕಾರು ಪರಿಚಯಿಸುತ್ತಿದೆ. ಅಂದಹಾಗೆ ಹೋಂಡಾ ಕಂಪನಿ ಈಗಷ್ಟೆಮಾರುಕಟ್ಟೆಗೆ ಬಿಟ್ಟಿರುವ ಸಿವಿಕ್‌ ಗ್ರಾಹಕರ ಪಾಲಿನ ಐಕಾನ್‌ ಎಂದು ಹೇಳಲಾಗುತ್ತಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಅದ್ದೂರಿಯಾಗಿ, ಜಗಮಗಿಸುವ ವೇದಿಕೆಯಲ್ಲಿ ಹಾಲಿವುಡ್‌ ನಟಿಯಂತೆ ಹೊಳಪು ಸೂಚಿಸುತ್ತ ಪರಿಚಯಗೊಂಡ ಹೋಂಡಾ ಸಿವಿಕ್‌, ದೇಶದ ಎಲ್ಲ ನಗರಗಳಲ್ಲೂ ಐದು ಬಣ್ಣಗಳಲ್ಲಿ ಲಭ್ಯವಿದೆ.

ಇದನ್ನೂ ಓದಿ: ನಡು ರಸ್ತೆಯಲ್ಲಿ ಮಹಿಳೆ ಹೆಲ್ಮೆಟ್ ಪುಡಿ ಮಾಡಿ ಸರ್ಪ್ರೈಸ್ ನೀಡಿದ ಪೊಲೀಸ್!

ಇದರ ಆರಂಭದ ಬೆಲೆ ಮಧ್ಯಮ ವರ್ಗಕ್ಕೆ ಕೊಂಚ ದುಬಾರಿ ಅನಿಸಿದರೂ, ಸಿವಿಕ್‌ನ ಅತ್ಯಾಧುನಿಕ ವಿನ್ಯಾಸ, ಡಿಜಿಟಲ್‌ಗೆ ಕೊಟ್ಟಿರುವ ಮಹತ್ವ, ನೋಡಲಿಕ್ಕೆ ಸುಂದರವಾಗಿ ಕಾಣುವ ಮತ್ತು ಅತಿ ಹೆಚ್ಚು ಮೈಲೇಜ್‌ ಕೊಡಬಲ್ಲ ಕಾರಣಕ್ಕೆ ದುಬಾರಿ ಬೆಲೆ ಸೈ ಎನ್ನಬಹುದು ಎಂಬುದು ಮಾರುಕಟ್ಟೆದಿಗ್ಗಜರ ಅಭಿಮತ. ಆದರೆ, ದೆಹಲಿ ಶೋ ರೂಮ್‌ನಲ್ಲಿ ಪೆಟ್ರೋಲ್‌ ಇಂಜಿನ್‌ ಹೊಂದಿರುವ ಹೋಂಡಾ ಸಿವಿಕ್‌ನ ಪ್ರಾರಂಭಿಕ ಬೆಲೆ ರೂ.17,69,900 ದಿಂದ ಶುರುವಾಗಿ ರೂ.20,99,900 ವರೆಗು ಇದೆ. ಇನ್ನೂ ಡೀಸಲ್‌ ಸಿವಿಕ್‌ನ ಪ್ರಾರಂಭದ ಬೆಲೆ ರೂ.20,49,900 ರಿಂದ ರೂ.22,29,900 ಲಕ್ಷದವರೆಗೂ ಇದೆ. ಹೋಂಡಾ ಕಂಪನಿಯ ಭಾರತೀಯ ವಿಭಾಗದ ಸಿಇಓ ಗಾಕು ನಾಕನಿಶಿ ಹಾಗೂ ರಾಜೇಶ್‌ ... ಅವರು ಹೊಸ ಹೋಂಡಾ ಸಿವಿಕ್‌ನ ಐದು ಮಾದರಿಗಳನ್ನು ಪರಿಚಯಿಸಿದರು.

ಇದನ್ನೂ ಓದಿ: ಎಲೆಕ್ಟ್ರಿಕ್ ಕಾರು ಖರೀದಿ ಗ್ರಾಹಕರಿಗೆ ಬಂಪರ್ ಕೊಡುಗೆ- 2.5 ಲಕ್ಷ ರೂ ಸಬ್ಸಡಿ!

ಪೆಟ್ರೋಲ್‌ ಬಳಕೆಯಲ್ಲಿ ಮೂರು ಹಾಗೂ ಡೀಸಲ್‌ ಬಳಕೆಯಲ್ಲಿ ಎರಡು ಮಾಧರಿಗಳಲ್ಲಿ ಸಿವಿಕ್‌ ಲಭ್ಯವಿದೆ. ಇನ್ನೂ ಇದರ ಇಂಜನ್‌ ಸಾಮರ್ಥವೂ ಕೂಡ ಅದ್ಭುತವಾಗಿದ್ದು, ಪೆಟ್ರೋಲ್‌ ಸಿವಿಕ್‌ 141 ಪಿಎಸ್‌, 174 ಎನ್‌ಎಂ ಟಾರ್ಕ್ ಸಾಮರ್ಥ್ಯದ ಇಂಜಿನ್‌ ಹೊಂದಿದೆ. ಇದು 16.5 ಕಿ.ಮೀ ಮೈಲೇಜ್‌ ಕೊಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಹಾಗೆ ಡೀಸಲ್‌ ಸಿವಿಕ್‌ 120 ಪಿಎಸ್‌, 300 ಎನ್‌ಎಂ ಟಾರ್ಕ್ ಸಾಮರ್ಥ್ಯದ ಇಂಜಿನ್‌ ಹೊಂದಿದ್ದು, 26.8 ಕಿ.ಮೀ ಮೈಲೇಜ್‌ ಕೊಡಲಿದೆ ಎಂಬುದು ಹೋಂಡಾ ಕಂಪನಿಯ ಪ್ರಕಟಣೆ.

ಇದನ್ನೂ ಓದಿ: ಆ್ಯಂಬುಲೆನ್ಸ್ ಬಂದಾಗ ಪಾಲಿಸಬೇಕು ಹಲವು ನಿಯಮ - ಉಲ್ಲಂಘಿಸಿದರೆ ಕಠಿಣ ಶಿಕ್ಷೆ!

ಹೋಂಡಾ ಸಿವಿಕ್‌ನ ಹೊಸತನಗಳು
- ಇದು ಡೀಸಲ್‌ ಹಾಗೂ ಪೆಟ್ರೋಲ್‌ನ 10ನೇ ಜನರೇಷನ್‌ನ ಕನಸಿನ ಕಾರು.
- ಸ್ಟೈಲಿಶ್‌ ವಿನ್ಯಾಸ. ಬೋಲ್ಡ್‌ ಆಂಡ್‌ ಬ್ಯೂಟಿಫುಲ್‌ ಲುಕ್‌.
- ಅದ್ಭುತವಾದ ಒಳ ವಿನ್ಯಾಸ ಮತ್ತು ವಿಶಾಲವಾದ ಜಾಗ. ಲಕ್ಸುರಿ ಅನುಭವ ನೀಡುವ ಆರಾಮದಾಯಕ ಸೀಟ್‌ಗಳು.
- ಫ್ರಂಟ್‌ ಪ್ಯೂವ್‌ ಮತ್ತು ಡಿಜಿಟಲ್‌ ಲೈಟಿಂಗ್‌. 17.7 ಇಂಚಿನ ಅಡ್ವಾನ್ಸ್‌ ಟಚ್‌ ಸ್ಕ್ರೀನ್‌.
- ಮಲ್ಟಿಪಂಕ್ಷನಿಂಗ್‌ ಸ್ಟೇರಿಂಗ್‌ ವೀಲ್‌. ಡ್ಯೂಯಲ್‌ ಜೋನ್‌ ಏರ್‌ ಕಂಡಿಷನ್‌ ಸಿಸ್ಟಮ್‌, ಅತ್ಯಾಧುನಿಕ ಪುಶ್‌ ಸ್ಟಾರ್ಟ್‌ ಬಟನ್‌.
- 6 ಏರ್‌ ಬ್ಯಾಗ್ಸ್‌ ಮೂಲಕ ಗರಿಷ್ಠ ಸುರಕ್ಷತೆ
- ಕೆಂಪು, ಪ್ಲಾಟಿನಮ್‌ ವೈಟ್‌, ಮಾಡ್ರನ್‌ ಸ್ಟೀಲ್‌, ಗೋಲ್ಡನ್‌ ಬ್ರೌನ್‌, ಲೂನರ್‌ ಸಿಲ್ವರ್‌ ಹೀಗೆ ಐದು ಬಣ್ಣಗಳಲ್ಲಿ ಲಭ್ಯ.
- ಪೆಟ್ರೋಲ್‌ ಹೋಂಡಾ ಸಿವಿಕ್‌ ಮೈಲೇಜು 16.5 ಕಿ.ಮೀ. ಡೀಸೆಲ್‌ ಸಿವಿಕ್‌ ಮೈಲೇಜು 26.8 ಕಿ.ಮೀ.

ಆರ್‌ ಕೇಶವಮೂರ್ತಿ