ಬೆಂಗಳೂರು(ನ.02): ದಹೆಲಿ ಮಾಲಿನ್ಯ ತಡೆಗಟ್ಟಲು ಖಾಸಿಗಿ(ಪ್ರೈವೇಟ್)ವಾಹನ ಬಳಕೆ ನಿರ್ಬಂಧ ಮಾಡಲು ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ ಮುಂದಾಗಿದೆ. ದೆಹಲಿಯಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಪರ ವಿರೋಧಗಳು ವ್ಯಕ್ತವಾಗಿದೆ. ಆದರೆ ನಗರದೊಳಗೆ ಈ ರೀತಿ ಖಾಸಗಿ ವಾಹನ್ನಗಳನ್ನ ನಿರ್ಬಂಧಿಸಿರೋದು ದೆಹಲಿಯಲ್ಲಿ ಮಾತ್ರವಲ್ಲ.

ದೆಹಲಿಗಿಂತ ಮೊದಲು ಹಲವು ನಗರಗಳಲ್ಲಿ ಖಾಸಗಿ ವಾಹನ ಬಳಕೆಯನ್ನ ನಿಷೇಧಿಸಲಾಗಿದೆ. ಖಾಸಿಗಿ ವಾಹನ ನಿಷೇಧದಿಂದ ಸಾರ್ವಜನಿಕ ಸಾರಿಗೆ ವಾಹನಗಳನ್ನ ಬಳಸಬೇಕಾದ ಅನಿವಾರ್ಯತೆ ಇದೆ. ಇದರಿಂದ ನಗರ ಮಾಲಿನ್ಯ ಮಾತ್ರವಲ್ಲ ವಾಹನ ದಟ್ಟಣೆ ಕೂಡ ಕಡಿಮೆಯಾಗಲಿದೆ. ದೆಹಲಿಗಿಂತ ಮೊದಲು ಖಾಸಗಿ ವಾಹನಗಳಿಗೆ ನಿಷೇಧ ಹೇರಿದ ನಗರಗಳ ವಿವರ ಇಲ್ಲಿದೆ.

ಒಸ್ಲೋ, ನಾರ್ವೆ
ಮಾಲಿನ್ಯ ನಿಯಂತ್ರಿಸಲು ನಾರ್ವೆ ದೇಶದ ಒಸ್ಲೋ ನಗರ ಜನವರಿ 17, 2017ರಲ್ಲಿ ಡೀಸೆಲ್ ಕಾರುಗಳನ್ನ ನಿಷೇಧಿಸಿತು. ಇದರಿದಂ ನಗದಲ್ಲಿ ಟ್ರಾಫಿಕ್ ಸಮಸ್ಯೆ ಶೇಕಡಾ 30 ರಷ್ಟು ಇಳಿಕೆಯಾದರೆ, ಮಾಲಿನ್ಯ ಶೇಕಡಾ 25 ರಷ್ಟು ಕಡಿಯಾಗಿದೆ. 2019ರಿಂದ ಎಲ್ಲಾ ಖಾಸಗಿ ಕಾರು ಬಳಕೆ ಹಾಗೂ ನಗರದಲ್ಲಿ ಕಾರು ಪಾರ್ಕಿಂಗ್ ಕೂಡ ನಿಷೇಧಿಸಲು ಒಸ್ಲೋ ನಗರ ಮುಂದಾಗಿದೆ. 

ಮೆಕ್ಸಿಕೋ ಸಿಟಿ, ಮೆಕ್ಸಿಕೋ
2016ರ ಮೇ ತಿಂಗಳಲ್ಲಿ ಮೆಕ್ಸಿಕೋ ನಗರದಲ್ಲಿನ ಶೇಕಡಾ 40 ರಷ್ಟು ವಾಹನಗಳಿಗೆ ನಿಷೇಧ ಹೇರಲಾಯಿತು. ಇನ್ನು ನಗರದಲ್ಲಿನ ಕೈಗಾರಿಗಳ ಹೊಗೆ ತಗ್ಗಿಸಲು ಹಲವು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಯಿತು. ಆದರೆ ಮೆಕ್ಸಿಕೋ ನಗರದ ಮಾಲಿನ್ಯ ತಗ್ಗಲಿಲ್ಲ. ಹೀಗಾಗಿ 2019ರಿಂದ  ಖಾಸಗಿ ಹಾಗೂ ಹಳೆ ವಾಹನಗಳಿಗೆ ನಿಷೇಧಕ್ಕೆ ಮುಂದಾಗಿದೆ.

ಬೊಗೊಟಾ, ಕೊಲಂಬಿಯಾ
ಸದಾ ವಾಹನಗಳಿಂದ ಗಿಜಿಗಿಡುತ್ತಿದ್ದ ಕೊಲಂಬಿಯಾದ ಬೊಗೊಟಾ ನಗರದಲ್ಲಿ ಸಂಪೂರ್ಣವಾಗಿ ಖಾಸಗಿ ಕಾರು ಬಳಕೆ ನಿಷೇಧಿಸಿಲ್ಲ, ಪ್ರತಿ ಭಾನುವಾರ ಬೆಳಗ್ಗೆ 7 ರಿಂದ 2 ಗಂಟೆ ವರೆಗೆ ನಗರದ ಹಲವು ರಸ್ತೆಗಳಲ್ಲಿ ಖಾಸಗಿ ವಾಹನ್ನಗಳನ್ನ ನಿಷೇಧಿಸಿದೆ. 

ಬೀಜಿಂಗ್, ಚೀನಾ
2015ರಲ್ಲೇ ಚೀನಾದ ಬೀಜಿಂಗ್ ನಗರ ಮಾಲಿನ್ಯ ತಗ್ಗಿಸಲು ವಾಹನ ನಿಷೇಧಕ್ಕೆ ಮುಂದಾಗಿತ್ತು. ಆದರೆ ಹಲವು ವಿರೋಧಗಳಿಂದ ನಿಯದಲ್ಲಿ ಕೆಲ ಬದಲಾವಣೆ ಮಾಡಿತು. ಖಾಸಗಿ ಕಾರುಗಳನ್ನ ನಿಗಧಿತ ದಿನಗಳಲ್ಲಿ ಮಾತ್ರ ರಸ್ತೆಗಳಿಯಲು ಅವಕಾಶ ಮಾಡಿದೆ. 

ಹಂಬರ್ಗ್, ಜರ್ಮನಿ
ಹಂಬರ್ಗ್‌ ನಗರದಲ್ಲಿ ಡೀಸೆಲ್ ಕಾರುಗಳನ್ನ ನಿಷೇಧಿಸಲಾಗಿದೆ. ಇನ್ನು ಸಾರ್ವಜನಿಕರ ಪ್ರಯಾಣಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಲಾಗಿದೆ. ಇಷ್ಟೇ ಅಲ್ಲ ಇದೀಗ ಖಾಸಿಗಿ ಕಾರು ಬಳಕೆ ಸಂಪೂರ್ಣ ನಿಷೇಧಕ್ಕೆ ಮುಂದಾಗಿದೆ. ಬಳಿಕ ಉಚಿತ ಸಾರಿಗ ವ್ಯವಸ್ಥೆ ಮಾಡಲು ಜರ್ಮನಿ ಎಲ್ಲಾ ತಯಾರಿ ಮಾಡಿಕೊಂಡಿದೆ.

ಇದರೊಂದಿಗೆ ಹಲವು ನಗರಗಳು ಖಾಸಗಿ ಕಾರು, ಹಳೇ ಕಾರು ಬಳಕೆ ನಿಷೇಧಿಸಲು ಮುಂದಾಗಿದೆ. ದಹೆಲಿ ಕೂಡ ಈ ನಿಯಮ ಜಾರಿಗೆ ತರುತ್ತಿದೆ. ಇದು ಮಾಲಿನ್ಯ ತಡೆಗಟ್ಟಲು ಸಹಕಾರಿಯಾದರೆ, ಭಾರತದ ಇತರ ಪ್ರಮುಖ ನಗರಗಳು ಇದನ್ನ ಅಳವಡಿಸಿಕೊಳ್ಳೋ ಸಾಧ್ಯತೆ ಇದೆ.