ದೇಶದ ಪ್ರಮುಖ ನಗರ ಹಾಗೂ ಅಲ್ಲಿನ ಜನರು ಯಾವ ವಿಚಾರದಲ್ಲಿ ಮುಂದಿದ್ದಾರೆ. ಈ ಕುರಿತ ಸಮೀಕ್ಷೆಯೊಂದು ಬಹಿರಂಗವಾಗಿದೆ. ಈ ಸಮೀಕ್ಷೆ ಪ್ರಕಾರ ಬೆಂಗಳೂರು ಜನ ಹಾಗೂ ಬೆಂಗಳೂರು ಯಾವುದರಲ್ಲಿ ಮುಂದಿದೆ? ಇಲ್ಲಿದೆ.
ಬೆಂಗಳೂರು(ನ.02): ದೇಶದ ಪ್ರಮುಖ 20 ನಗರಗಳಲ್ಲಿ ಸಾರಿಗೆ, ರಸ್ತೆ ಸೇರಿದಂತೆ ಹಲವು ವಿಚಾರಗಳು ಕುರಿತು ಸರ್ವೆ ಮಾಡಲಾಗಿದೆ. ಆಯಾ ನಗರಗಳನ್ನ ಜನರು ಯಾವುದರ ಮೊರೆ ಹೋಗುತ್ತಾರೆ ಅನ್ನೋ ವರದಿ ಬಿಡುಗಡೆಯಾಗಿದೆ.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಮೀಕ್ಷೆ ಬಿಡುಗಡೆ ಮಾಡಿದ್ದಾರೆ. ಈ ಸಮೀಕ್ಷೆ ಪ್ರಕಾರ ಮುಂಬೈ ನಗರದ ಜನರು ಖಾಸಗಿ ವಾಹನವಿದ್ದರೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನ ಬಳಸುತ್ತಾರೆ. ಇನ್ನು ದೆಹಲಿ ಅತ್ಯುತ್ತಮ ರಸ್ತೆಗೆ ಹೆಸರಾಗಿದೆ.
ಜೈಪುರದಲ್ಲಿ ಪಾದಾಚಾರಿಗಳ ರಸ್ತೆ ಅತ್ಯುತ್ತಮವಾಗಿದೆ. ಕೇರಳದ ಕೊಚ್ಚಿಯಲ್ಲಿ ಜನರು ಆಟೋ ರಿಕ್ಷಾ ಹೆಚ್ಚು ಬಳಕೆ ಮಾಡುತ್ತಾರೆ. ಕೋಲ್ಕತ್ತಾ ನಗರ ಅತೀ ಕಡಿಮೆ ಬೆಲೆಯಲ್ಲಿ ಪ್ರಯಾಣ ಮಾಡಬುಹುದಾಗಿದೆ.
ನಮ್ಮ ಬೆಂಗಳೂರು ಜನ ಡಿಜಿಟಲ್ ಟ್ರಾನ್ಸಾಕ್ಷನ್ ಹೆಚ್ಚು ಮಾಡುತ್ತಾರೆ. ಬ್ಯಾಂಕ್, ಬಿಲ್ ಪಾವತಿ, ಹಣ ವರ್ಗಾವಣೆ ಸೇರಿದಂತೆ ಯಾವುದೇ ಕೆಲಸವನ್ನ ಕುಳಿತಲ್ಲೇ ಡಿಜಿಟಲ್ ಮೂಲಕ ಮಾಡುತ್ತಾರೆ ಎಂದು ಸಮೀಕ್ಷೆ ಹೇಳುತ್ತಿದೆ.
ಸಿಲಿಕಾನ್ ಸಿಟಿ ಎಂದೇ ಹೆಸರಾಗಿರುವ ಬೆಂಗಳೂರು ತಂತ್ರಜ್ಞಾನದಲ್ಲಿ ಇತರ ನಗರಗಳಿಂದ ಬಹಳಷ್ಟು ಮುಂದಿದೆ. ಇಷ್ಟೇ ಅಲ್ಲ ಆ ತಂತ್ರಜ್ಞಾನವನ್ನ ಬಳಸುವ ಜನರು ಕೂಡ ಹೆಚ್ಚಿದ್ದಾರೆ. ಆದರೆ ಸಾರಿಗೆ, ರಸ್ತೆ, ಟ್ರಾಫಿಕ್ ವಿಚಾರದಲ್ಲಿ ಬೆಂಗಳೂರು ಇನ್ನೂ ಅಭಿವೃದ್ದಿಯಾಗಬೇಕಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 2, 2018, 9:03 PM IST