ಅಪಘಾತಕ್ಕೀಡಾಗಿ ಹೊತ್ತಿ ಉರಿದಿದ್ದ ಪೆರಾರಿ ರೇಸ್ ಕಾರ್ ಭರ್ಜರಿ ಮೊತ್ತಕ್ಕೆ ಸೇಲ್
ಇಲ್ಲೊಂದು ಕಡೆ ರೇಸ್‌ನಲ್ಲಿ ಭಾಗಿಯಾಗಿ ಅಪಘಾತಕ್ಕೀಡಾದ, ತುಕ್ಕು ಹಿಡಿದು ಯಾಕೂ ಬೇಡದ ಸ್ಥಿತಿಯಲ್ಲಿದ್ದ ಕಾರೊಂದು ಬರೋಬ್ಬರಿ ಬೆಲೆಗೆ ಮಾರಾಟವಾಗಿ ಅಚ್ಚರಿ ಮೂಡಿಸಿದೆ.
ಕ್ಯಾಲಿಫೋರ್ನಿಯಾ: ಒಮ್ಮೆ ಕಾರು ಅಪಘಾತಕ್ಕೀಡಾಯಿತು ಎಂದರೆ ಅದರ ಕತೆ ಮುಗಿದೆ ಹೋಯ್ತು, ಯಾರೊಬ್ಬರು ಆ ಕಾರನ್ನು ಕನಿಷ್ಠ ಅರ್ಧ ಬೆಲೆಗೂ ಕೊಳ್ಳುವವರಿರುವುದಿಲ್ಲ, ಅಪಘಾತಕೀಡಾದ ಅಥವಾ ಅಗ್ನಿ ಅವಘಡಕ್ಕೀಡಾದ ಕಾರಿನ ಮಾಲೀಕ ನಷ್ಟ ತುಂಬಿಕೊಳ್ಳಲು ಇನ್ಶ್ಯೂರೆನ್ಸ್ ಸಂಸ್ಥೆ ಮೊರೆ ಹೋಗಬೇಕಷ್ಟೆ ಆದರೆ ಇಲ್ಲೊಂದು ಕಡೆ ರೇಸ್‌ನಲ್ಲಿ ಭಾಗಿಯಾಗಿ ಅಪಘಾತಕ್ಕೀಡಾದ, ತುಕ್ಕು ಹಿಡಿದು ಯಾಕೂ ಬೇಡದ ಸ್ಥಿತಿಯಲ್ಲಿದ್ದ ಕಾರೊಂದು ಬರೋಬ್ಬರಿ ಬೆಲೆಗೆ ಮಾರಾಟವಾಗಿ ಅಚ್ಚರಿ ಮೂಡಿಸಿದೆ.
ಅಚ್ಚರಿ ಎನಿಸಿದರು ಇದು ಸತ್ಯ 1960ರಲ್ಲಿ ರೇಸೊಂದರಲ್ಲಿ ಭಾಗಿಯಾಗಿ ನಂತರ ಅಪಘಾತಕ್ಕೀಡಾಗಿ ತುಕ್ಕು ಹಿಡಿದ ಸ್ಥಿತಿಯಲ್ಲಿದ್ದ 1954ರಲ್ಲಿ ನಿರ್ಮಾಣವಾದ ಕಾರೊಂದು ಬರೋಬ್ಬರಿ ದಾಖಲೆಯ ಅಂದರೆ £ 1.5 ಮಿಲಿಯನ್ ಪೌಂಡ್ ಅಂದರೆ 15,88,38,060 ರೂಪಾಯಿಗೆ ಮಾರಾಟವಾಗಿದ್ದು, ಅಚ್ಚರಿ ಮೂಡಿಸಿದೆ. ಪಿನಿನ್ ಫರೀನಾ ಕಾರು ಡಿಸೈನ್ ಸಂಸ್ಥೆಗೆ (ಪ್ರಸ್ತುತ ಈ ಸಂಸ್ಥೆ ಮಹೀಂದ್ರಾ ಗ್ರೂಪ್ ಮಾಲೀಕತ್ವದಲ್ಲಿದೆ) ಸೇರಿದ 500 ಮೊಂಡಿಯಲ್ ಸ್ಪೈಡರ್ ಸರಣಿ I ಕಾರು ಇದಾಗಿದ್ದು, ಪಿನಿನ್ ಫರೀನಾ ಸಂಸ್ಥೆಯ 13 ಕಾರುಗಳಲ್ಲಿ ಇದು ಒಂದಾಗಿತ್ತು. ಈ ಕಾರನ್ನು ಮಾಜಿ-ಸ್ಕುಡೆರಿಯಾ ಫೆರಾರಿ ತಂಡದ ಚಾಲಕ ಫ್ರಾಂಕೊ ಕೊರ್ಟೆಸ್ ಅವರು ವಿಶ್ವ ಪ್ರಸಿದ್ಧ ಕಾರು ರೇಸಾಗಿದ್ದ ಮಿಲ್ಲೆ ಮಿಗ್ಲಿಯಾದಲ್ಲಿ ಮುನ್ನಡೆಸಿದ್ದರು.
ಬರೋಬ್ಬರಿ 9.20 ಲಕ್ಷ ಬೆಲೆಗೆ ತಮಿಳುನಾಡಿಗೆ ಮಾರಾಟವಾದ ಮಂಡ್ಯದ ಒಂಟಿ ಎತ್ತು!
ಅಂದು ರೇಸ್‌ನಲ್ಲಿ ಅಪಘಾತಕ್ಕೀಡಾಗಿ ಸುಟ್ಟು ಹೋಗಿ ತುಕ್ಕು ಹಿಡಿದಂತಾಗಿರುವ ಈ ಕಾರು ಈಗ ದಾಖಲೆಯ 1. 5 ಮಿಲಿಯನ್ ಪೌಂಡ್‌ಗೆ ಮಾರಾಟವಾಗಿದ್ದು, ಈ ಆಟೋಮೊಬೈಲ್ ಲೋಕದಲ್ಲಿ ಅಚ್ಚರಿ ಮೂಡಿಸಿದೆ. 1960ಕ್ಕೂ ಮೊದಲು ಈ ಮೊಂಡಿಯಲ್ (Mondial) ಕಾರು ಅಮೆರಿಕಾದ ರೇಸೊಂದರಲ್ಲಿ ಭಾಗಿಯಾಗಿ 147 ಎಂಪಿಹೆಚ್ ವೇಗದಲ್ಲಿ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿತ್ತು. ಇದರ ಅವಶೇಷಗಳನ್ನು ಅದೇ ಹಾನಿಗೊಳಗಾದ ಸ್ಥಿತಿಯಲ್ಲೇ ಸಂರಕ್ಷಿಸಿಡಲಾಗಿತ್ತು. ಇದು ಫ್ಲೋರಿಡಾದ ರಿಯಲ್ ಎಸ್ಟೇಟ್ ಡೆವಲಪರ್ ದಿವಂಗತ ವಾಲ್ಟರ್ ಮೆಡ್ಲಿನ್ ಅವರ ಎಸ್ಟೇಟ್‌ನಲ್ಲಿ ಇಡಲಾಗಿತ್ತು.
ಡೆವಲಪರ್ ವಾಲ್ಟರ್ ಮೆಡ್ಲಿನ್ (Walter Medlin) ಅವರು ಇದನ್ನು 1978 ರಲ್ಲಿ ಖರೀದಿಸಿದ್ದರು. ಆದರೆ ಕಳೆದ ವರ್ಷ ಅವರು ಮೃತಪಟ್ಟ ನಂತರ ಈ ಪೆರಾರಿ ಕಾರಿನ ಅವಶೇಷ ಬೆಳಕಿಗೆ ಬಂದಿತ್ತು. ಇದರ ಜೊತೆ ಅವರ ಸಂಗ್ರಹದಲ್ಲಿದ್ದ ಇನ್ನು 20 ಫೆರಾರಿ ಕಾರು ಬೆಳಕಿಗೆ ಬಂದಿತ್ತು. ನಂತರ ಈ ಕಾರಿನ ಅವಶೇಷವನ್ನು ಕ್ಯಾಲಿಫೋರ್ನಿಯಾದಲ್ಲಿರುವ (California) ಪ್ರಸಿದ್ಧ ಹರಾಜು ಸಂಸ್ಥೆಯಾದ ಆರ್‌ಎಂ ಸೋಥೆಬಿಯಾ (RM Sotheby) ತನ್ನ ಸುಪರ್ದಿಗೆ ಪಡೆದಿತ್ತು.
ಇಲ್ಲಿದೆ ವಿಶ್ವದ ಅತ್ಯಂತ 10 ದುಬಾರಿ ವಾಚ್-ಒಂದು ವಾಚ್ ಬೆಲೆ 405 ಕೋಟಿ!
ಈ ಕಾರು ಪ್ರಸಿದ್ಧ ರೇಸ್‌ಗಳಾದ ಮಿಲ್ಲೆ ಮಿಗ್ಲಿಯಾ, ಟಾರ್ಗಾ ಫ್ಲೋರಿಯೊ, ಮತ್ತು ಇಮೋಲಾ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಇದು ಆ ಅವಧಿಯಲ್ಲಿ ವ್ಯಾಪಕವಾಗಿ ರೇಸ್‌ನಲ್ಲಿ ಭಾಗಿಯಾದ ಖ್ಯಾತಿ ಗಳಿಸಿತ್ತು. ಆದರೆ ಅಪಘಾತವಾದ ನಂತರ 50 ವರ್ಷಗಳ ನಂತರ ಇದಕ್ಕೆ ಶುಕ್ರದೆಸೆ ಬಂದಿದ್ದು, ಬರೋಬ್ಬರಿ ಬೆಲೆಗೆ ಖರೀದಿಯಾಗಿದೆ. ಇದನ್ನು ನವೀಕರಿಸಿದ ನಂತರ ಹಲವು ಕಾರು ರೇಸ್‌ಗಳ ಗೆಲುವಿಗೆ ಕಾರಣವಾಗಿರುವ ಈ ಕಾರು ರೋಮಾಂಚಕ ಚಾಲನಾ ಅನುಭವ ನೀಡುವ ಭರವಸೆಯಲ್ಲಿದ್ದಾರೆ ಖರೀದಿದಾರರು. ಆದರೆ ಈಗ ಹೊಸದಾಗಿ ಇಷ್ಟು ಹಣ ನೀಡಿ ಕಾರು ಖರೀದಿಸಿದ ಹೊಸ ಮಾಲೀಕರ ವಿವರವನ್ನು ಸಂಸ್ಥೆ ನೀಡಿಲ್ಲ.