Asianet Suvarna News Asianet Suvarna News

ವಿಜಯ್ ಮಲ್ಯ ಲಂಡನ್ ಕಾರುಗಳು ಹರಾಜು-4 ಕೋಟಿಯಿಂದ ಆರಂಭ!

ವಂಚನೆ ಆರೋಪ ಎದುರಿಸುತ್ತಿರುವ ಭಾರತೀಯ ಉದ್ಯಮಿ ವಿಜಯ್ ಮಲ್ಯಗೆ ಮತ್ತೆ ಹಿನ್ನಡೆಯಾಗಿದೆ. ಲಂಡನ್‌ನಲ್ಲಿರುವ ಮಲ್ಯ ಕಾರುಗಳನ್ನ ಹರಾಜು ಹಾಕಲು ಕೋರ್ಟ್ ಸೂಚಿಸಿದೆ. ಇದೀಗ ಲಂಡನ್‌ ದುಬಾರಿ ಕಾರುಗಳು ಹರಾಜು ನಡೆಯಲಿದೆ.

Court Order Vijay Mallya laxury Cars In The UK To Be Auctioned
Author
Bengaluru, First Published Oct 20, 2018, 8:09 PM IST
  • Facebook
  • Twitter
  • Whatsapp

ಲಂಡನ್(ಅ.20): ಭಾರತೀಯ ಬ್ಯಾಂಕ್‌ಗಳಿಗೆ ವಂಚಿಸಿ ಲಂಡನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಸಾಲ ವಸೂಲಾತಿಗೆ ಲಂಡನ್‌ನಲ್ಲಿರುವ ವಿಜಯ್ ಮಲ್ಯ ದುಬಾರಿ ಕಾರುಗಳನ್ನ ಹರಾಜು ಹಾಕಲು ಲಂಡನ್ ಹೈಕೋರ್ಟ್ ಆದೇಶಿಸಿದೆ.

ಲಂಡನ್‌ನಲ್ಲಿ ವಿಜಯ್ ಮಲ್ಯ ಬಳಿ 15 ಕ್ಕೂ ಹೆಚ್ಚು ಕಾರುಗಳಿವೆ. ಇದರಲ್ಲಿ 6 ದುಬಾರಿ ಕಾರುಗಳನ್ನ  ಹರಾಜು ಹಾಕಲು ಕೋರ್ಟ್ ಸೂಚಿಸಿದೆ. ಕೋರ್ಟ್ ಆದೇಶದ ಪ್ರಕಾರ, 2016 ಮಿನಿ ಕೂಪರ್, 2012 ಮೇಬ್ಯಾಚ್ 62, 2006 ಫೆರಾರಿF430, ಲ್ಯಾಂಡ್ ರೋವರ್ ರೇಂಜ್ ರೋವರ್ ಹಾಗೂ ಪೋರ್ಶೆ ಕಾರನ್ನ ಹರಾಜಿಗೆ ಇಡಲಾಗಿದೆ.

ಮಲ್ಯರ ಬಹುತೇಕ ಕಾರುಗಳನ್ನ ಕಸ್ಟಮೈಸ್ ಮಾಡಲಾಗಿದೆ. ಕೋಟಿ ಕೋಟಿ ಹಣ ಸುರಿದು ಫ್ಯಾನ್ಸಿ ನಂಬರ್ ಕೂಡ ಮಾಡಿಸಿದ್ದಾರೆ.  ಮೇಬ್ಯಾಚ್ 62 ಕಾರಿನ ನಂಬರ್ VJM1, ಫೆರಾರಿF430 ಕಾರಿನ ನಂಬರ್ BO55 VJM(ಅರ್ಥ: ಬಾಸ್ ವಿಜಯ್ ಮಲ್ಯ), ರೇಂಜ್ ರೋವರ್ ನಂಬರ್ F1VJM(ಅರ್ಥ :ಫಾರ್ಮುಲಾ ಒನ್ ವಿಜಯ್ ಮಲ್ಯ) ಪೊರ್ಶೆ ಕಾರಿನ ನಂಬರ್ 0007 VJM(ಅರ್ಥ: ಜೇಮ್ಸ್ ಬಾಂಡ್ ಮೂವಿ)

ಮಲ್ಯ ಕಾರಿನ ಹರಾಜು ಮೌಲ್ಯ 4 ಕೋಟಿಯಿಂದ ಆರಂಭವಾಗಲಿದೆ. ಶೀಘ್ರದಲ್ಲೇ ಹರಾಜು ಪ್ರಕ್ರಿಯೆ ಮುಗಿಸಲು ಕೋರ್ಟ್ ಸೂಚಿಸಿದೆ. ಈಗಾಗಲೇ ಭಾರತದಲ್ಲಿನ ದುಬಾರಿ ಕಾರುಗಳನ್ನ ಹರಾಜು ಮಾಡಲಾಗಿದೆ. ಇದೀಗ ಲಂಡನ್‌ನಲ್ಲೂ ಮಲ್ಯ ಕಾರುಗಳು ಹರಾಜಾಗಲಿದೆ.

Follow Us:
Download App:
  • android
  • ios