ಮುಂಬೈ(ಜ.30): ಬಜಾಜ್ ಬೈಕ್ ಕಂಪೆನಿ ಶೀಘ್ರದಲ್ಲೇ 2019ರ ಡೊಮಿನಾರ್ 400 ಬಿಡುಗಡೆ ಮಾಡಲಿದೆ.  ಡೊಮಿನಾರ್ ಇದೀಗ ಕೆಲ ಬದಲಾವಣೆಗಳೊಂದಿಗೆ ಮತ್ತೆ ಬಿಡುಗಡೆಯಾಗುತ್ತಿದೆ. ಕವಾಸಕಿ ನಿಂಜಾ ಬೈಕ್‌ಗೆ ಪೈಪೋಟಿ ನೀಡಲು ಇದೀಗ ಹಸಿರು ಬಣ್ಣದಲ್ಲೂ ಡೊಮಿನಾರ್ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: ಜಾವಾ ಪೆರಾಕ್ ಬಾಬರ್ ಬೈಕ್ ಬುಕಿಂಗ್ ದಿನಾಂಕ ಬಹಿರಂಗ!

ಬಜಾಜ್ ಡೊಮಿನಾರ್ ಮೊದಲ ಬಾರಿಗೆ 2016ರಲ್ಲಿ ಮಾರುಕಟ್ಟೆ ಪ್ರವೇಶಿಸಿತ್ತು. ಸ್ಪೋರ್ಟ್ಸ್ ಬೈಕ್ ಪ್ರೀಯರ ನೆಚ್ಚಿನ ಬೈಕಾಗಿ ಬದಲಾಗಿರುವ ಡೊಮಿನಾರ್ ಇದೀಗ ಕೆಲ ಬದಲಾವಣೆಯೊಂದಿಗೆ ರಸ್ತೆಗಳಿಯುತ್ತಿದೆ. ಉತ್ತಮ ರೈಡ್, ಸ್ಮೂತ್ ಇಂಜಿನ್ ಹೆಚ್ಚು ಆರಾಮದಾಯಕ ಪ್ರಯಾಣಕ್ಕಾಗಿ ಡೊಮಿನಾರ್ ಇಂಜಿನ್ ಹಾಗು ಕೆಲ ಬಿಡಿಭಾಗಗಳಲ್ಲಿ ಬದಲಾವಣೆ ಮಾಡಲಾಗಿದೆ. 

ಇದನ್ನೂ ಓದಿ: ಮತ್ತೆ ರಸ್ತೆಗಿಳಿಯುತ್ತಿದೆ ಬಜಾಜ್ ಸ್ಕೂಟರ್!

ಸ್ಪೀಡ್ ಅಪ್‌ಗ್ರೇಡ್ ಜೊತೆಗೆ BS-VI ಇಂಜಿನ್‌ ಸೇರಿದಂತೆ ಸಣ್ಣ ಬದಲಾಣೆಗಳೊಂದಿಗೆ ಬಿಡುಗಡೆಯಾಗುತ್ತಿದೆ. 373cc ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್‌ಡ್ ಎಂಜಿನ್ ಹೊಂದಿದೆ. 35 Bhp ಪವರ್ 35nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಹೆಚ್ಚುವರಿ ಫೀಚರ್ಸ್‌ನಿಂದ  ಬೆಲೆ ಅಲ್ಪ ಏರಿಕೆಯಾಗಿದೆ. ಹೀಗಾಗಿ ನೂತನ ಬಜಾಜ್ ಡೊಮಿನಾರ್ ಬೆಲೆ 1.65 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಅಂದಾಜಿಸಲಾಗಿದೆ.