ಬೆಂಗಳೂರು(ಡಿ.23): ರಸ್ತೆ ನಿಯಮ ಪಾಲನೆ, ಸುರಕ್ಷತೆಗೆ ಆದ್ಯತೆ ನೀಡುವುದರಲ್ಲಿ ಭಾರತೀಯರು ತುಸು ಹಿಂದೆ ಇದ್ದಾರೆ.  ಅದರಲ್ಲೂ ಸುರಕ್ಷತೆಯನ್ನ ಸಂಪೂರ್ಣ ನಿರ್ಲಕ್ಷ್ಯಿಸುವುದರಲ್ಲಿ ನಾವು ಮುಂದಿದ್ದೇವೆ. ಫೋರ್ಡ್ ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ಭಾರತದ ನಗರವಾಸಿಗಳ ಅಸಡ್ಡೆ ಬಹಿರಂಗವಾಗಿದೆ.

ಇದನ್ನೂ ಓದಿ: ಬಜಾಜ್-ಮಹೀಂದ್ರಾಗೆ ಪೈಪೋಟಿ- ಶೀಘ್ರದಲ್ಲೇ ಬರಲಿದೆ ಕೆಟೋ ಆಟೋ ರಿಕ್ಷಾ!

ಬೆಂಗಳೂರು ಸೇರಿದಂತೆ ಭಾರತದ  ಪ್ರಮುಖ 10 ನಗರಗಳಲ್ಲಿ ಫೋರ್ಡ್ ಇಂಡಿಯಾ ಸರ್ವೆ ನಡೆಸಿದೆ. ಈ ಸಮೀಕ್ಷೆ ಪ್ರಕಾರ ಭಾರತದಲ್ಲಿ ಸೀಟ್ ಬೆಲ್ಟ್ ಹಾಕದೇ ವಾಹನ ಚಲಾಯಿಸುವವರ ಸಂಖ್ಯೆ ಶೇಕಡಾ 51 ರಷ್ಟಿದೆ. ಇಷ್ಟೇ ಅಲ್ಲ ಸೀಟ್ ಬೆಲ್ಟ್ ಸುರಕ್ಷತೆಗೆ ಬಹು ಮುಖ್ಯ ಅನ್ನೋದನ್ನ ಬಹುತೇಕರು  ಒಪ್ಪಿಕೊಂಡೇ ಇಲ್ಲ.

ಇದನ್ನೂ ಓದಿ: ಭಾರತದಲ್ಲಿ ಮತ್ತೆ ಬಿಡುಗಡೆಯಾಗುತ್ತಿದೆ ಲ್ಯಾಂಬಿ ಸ್ಕೂಟರ್!

ಶೇಕಡಾ 22 ರಷ್ಟು ಮಂದಿ ವಾಹನ ಚಲಾಯಿಸುವಾಗ ಫೋನ್ ಬಳಕೆ ಮಾಡುತ್ತಾರೆ. ಫೋನ್ ಬಂದಾಗ ವಾಹನ ನಿಲ್ಲಿಸಿ ರಿಸೀವ್ ಮಾಡೋ ಜಾಯಮಾನ ಇವರದ್ದಲ್ಲ. ನಗರದ ಶೇಕಡಾ 33 ರಷ್ಟು ಮಂದಿ 18 ವರ್ಷಕ್ಕಿಂತ ಕೆಳಗಿನವರು ವಾಹನ ಚಲಾವಣೆ ಮಾಡುತ್ತಿದ್ದಾರೆ. ಇನ್ನು ಶೇಕಡಾ 41 ರಷ್ಟು ಮಂದಿ ಅಪಘಾತಕ್ಕೊಳಗಾದವರನ್ನ ಆಸ್ಪತ್ರೆಗೆ ಸೇರಿಸುವ ಅಥವಾ ಅವರಿಗೆ ಪ್ರಥಮ ಚಿಕಿತ್ಸೆ ನೀಡುವು ಗೋಜಿಗೆ ಹೋಗುವುದಿಲ್ಲ.  ನಮಗ್ಯಾಗೆ ಬೇಕು ಉಸಾಬರಿ ಅಂದುಕೊಂಡು ಹೋಗುವವರೇ ಹೆಚ್ಚು.

ಇದನ್ನೂ ಓದಿ: ಪೆಟ್ರೋಲ್-ಡೀಸೆಲ್ ಕಾರುಗಳಿಗೆ ಪೈಪೋಟಿ- ಬಿಡುಗಡೆಯಾಗಲಿದೆ 4 ಎಲೆಕ್ಟ್ರಿಕ್ ಕಾರು!

ನಗರದ ಶೇಕಡಾ 32 ರಷ್ಟು ಮಂದಿ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸುವುದಿಲ್ಲ. ಇನ್ನು ಶೇಕಡಾ 48 ರಷ್ಟು ಮಂದಿ ಪಾದಾಚಾರಿ ರಸ್ತೆ ಮೇಲೆ ವಾಹನ ಪಾರ್ಕ್ ಮಾಡುತ್ತಾರೆ. ಇನ್ನು ಪುರುಷರು ಚಲ್ತಾ ಹೇ ಜಾಯಮಾನ. ಆದರೆ ಮಹಿಳೆಯರು ಹೆಚ್ಚು ಜಾಗರೂಕತೆಯಿಂದ ವಾಹನ ಚಲಾಯಿಸುತ್ತಾರೆ ಅನ್ನೋದು ಸಮೀಕ್ಷೆಯಿಂದ ಬಹಿರಂಗವಾಗಿದೆ. ಫೋರ್ಡ್ ಇಂಡಿಯಾ ಸಮೀಕ್ಷೆಗಾಗಿ 10 ನಗರಗಳ 1613 ಮಂದಿಯನ್ನ ಸಂದರ್ಶನ ನಡೆಸಿತ್ತು.