ಬೆಂಗಳೂರು(ಜು.20):  ಒಮ್ಮೆ ನೋಡಿದರೆ ಥಟ್‌ ಅಂತ ಗಮನ ಸೆಳೆಯುವ ಆಕರ್ಷಕ ಬೈಕುಗಳನ್ನು ಬಿಡುಗಡೆ ಮಾಡುವ ಮೂಲಕ ಚೀನಾದ ಸಿಎಫ್‌ ಮೋಟೋ ಕಂಪನಿ ಭಾರತಕ್ಕೆ ಅದ್ದೂರಿ ಎಂಟ್ರಿ ಕೊಟ್ಟಿದೆ. ಬೆಂಗಳೂರು ಮೂಲದ ಎಎಂಡಬ್ಲ್ಯೂ ಮೋಟಾರ್‌ಸೈಕಲ್ಸ್‌ ಕಂಪನಿ ಜತೆ ಸೇರಿಕೊಂಡು ಸದ್ಯ ಸಿಎಫ್‌ ಮೋಟೋ 300ಎನ್‌ಕೆ, 650 ಎನ್‌ಕೆ, 650 ಎಂಟಿ ಮತ್ತು 650 ಜಿಟಿ ಎಂಬ ನಾಲ್ಕು ಬೈಕುಗಳನ್ನು ಬಿಡುಗಡೆ ಮಾಡಿದೆ. 300 ಸಿಸಿಯಿಂದ 600 ಸಿಸಿವರೆಗಿನ ಈ ಬೈಕುಗಳದು ಒಂದೊಂದರದು ಒಂದೊಂದು ವಿಶೇಷ.

ಇದನ್ನೂ ಓದಿ: ಇನ್ಮುಂದೆ ಎಥೆನಾಲ್ ಬೈಕ್; ಪೆಟ್ರೋಲ್ ದ್ವಿಚಕ್ರ ವಾಹನಕ್ಕೆ ಗುಡ್‌ಬೈ!

ಹೇಳಿಕೇಳಿ ಈಗ ಸ್ಪೋರ್ಟ್ಸ್ ಬೈಕುಗಳ ಯುಗ. ಹೊಸಹೊಸ ಬೈಕುಗಳಿಗೆ ತರುಣರು ಮೊರೆ ಹೋಗುತ್ತಿದ್ದಾರೆ. ಇಂಥಾ ಸಂದರ್ಭದಲ್ಲಿ ಸಿಎಫ್‌ ಮೋಟೋ ಭಾರತಕ್ಕೆ ಕಾಲಿಟ್ಟಿದೆ. ಈ ಕಂಪನಿ ಈಗಾಗಲೇ ಚೀನಾದಲ್ಲಿ ಫೇಮಸ್ಸು. ಈ ಕಂಪನಿ ಕ್ವಾಡ್‌ ಬೈಕುಗಳ ತಯಾರಿಕೆಯಲ್ಲೂ ಮುಂದಿದೆ. ಹಾಗಾಗಿ ಹೊಸ ತಂತ್ರಜ್ಞಾನಗಳನ್ನು ಬೈಕಿನಲ್ಲಿ ಅಳವಡಿಸಿಕೊಂಡಿದೆ. ಈ ಕುರಿತು ಎಎಂಡಬ್ಲ್ಯೂ ಮೋಟಾರ್‌ಸೈಕಲ್‌ ಕಂಪನಿ ಸಿಇಓ ವಂಶಿಕೃಷ್ಣ ಜಗನಿ, ‘ಈ ಅತ್ಯಾಧುನಿಕ ಬೈಕುಗಳನ್ನು ಭಾರತಕ್ಕೆ ತರುವುದಕ್ಕೆ ಖುಷಿಯಾಗುತ್ತಿದೆ’ ಎಂದರು. ಸಿಎಫ್‌ ಮೋಟೋ ಕಂಪನಿಯ ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌ ಕೆಂಟ್‌ ಚೆನ್‌, ‘ಭಾರತೀಯ ಗ್ರಾಹಕರಿಗೆ ನಮ್ಮ ಬೈಕುಗಳನ್ನು ನೀಡಲು ಹೆಮ್ಮೆಯಾಗುತ್ತಿದೆ’ ಎಂದರು.

ಇದನ್ನೂ ಓದಿ: ಆಗಸ್ಟ್ ಆರಂಭದಲ್ಲೇ ಬಜಾಜ್ ಪಲ್ಸಾರ್ 125NS ಬಿಡುಗಡೆ!

ಆಸ್ಟ್ರಿಯಾದಲ್ಲಿ ವಿನ್ಯಾಸಗೊಂಡ ಚೀನಾ ನಿರ್ಮಿತ ಈ ನಾಲ್ಕು ಬೈಕುಗಳ ಮಾಹಿತಿ ಇಲ್ಲಿದೆ.

ಸಿಎಫ್‌ ಮೋಟೋ 300NK
292 ಸಿಸಿ ಇಂಜಿನ್ನಿನ ಬೈಕು ಇದು. 151 ಕೆಜಿ ಭಾರ ಇದೆ. ಕೇವಲ 9.3 ಸೆಕೆಂಡಲ್ಲಿ 0 ದಿಂದ 200 ಮೀ ದೂರ ತಲುಪಬಲ್ಲ ಸಾಮರ್ಥ್ಯ ಇರುವ ಈ ಬೈಕು ಆರು ಗೇರ್‌ ಹೊಂದಿದೆ. ನೋಡುವುದಕ್ಕೆ ಚೆಂದ ಕಾಣಿಸುವ ಬೈಕು ಆಕರ್ಷಕ ಬಣ್ಣಗಳಲ್ಲಿ ಲಭ್ಯ. ಟಿಎಫ್‌ಟಿ ಕಲರ್‌ ಡಿಸ್‌ಪ್ಲೇ, ಎಲ್‌ಇಡಿ ಲೈಟು, ರೇರ್‌ ಮಡ್‌ಗಾರ್ಡ್‌ ಇದರ ವಿಶೇಷ ಫೀಚರ್‌ಗಳು. ಬೆಲೆ ರು.2.29 ಲಕ್ಷ.

ಸಿಎಫ್‌ ಮೋಟೋ 650NK
650 ಸಿಸಿ ಇಂಜಿನ್‌ ಹೊಂದಿರುವ, ಸ್ಟ್ರೀಟ್‌ ಬೈಕ್‌ ಎಂದೇ ಕರೆಯಲ್ಪಡುವ ಈ ಬೈಕು ಪ್ಯಾಶನೇಟ್‌ ಬೈಕ್‌ ರೈಡರ್‌ಗಳನ್ನು ಆಕರ್ಷಿಸುವುದು ನಿಶ್ಚಿತ ಎನ್ನುವುದು ಸಿಎಫ್‌ ಮೋಟೋ ನಂಬಿಕೆ. ಡಿಸೈನು ಡಿಫರೆಂಟಾಗಿದೆ. ಪಲ್‌ರ್‍ ವೈಟ್‌ ಮತ್ತು ಅಥೆನ್ಸ್‌ ಬ್ಲೂ ಬಣ್ಣಗಳಲ್ಲಿ ದೊರೆಯಲಿದೆ. 6 ಸ್ಪೀಡ್‌ ಗೇರ್‌ ಇದೆ. ಬೆಲೆ 3.99 ಲಕ್ಷ.

ಸಿಎಫ್‌ ಮೋಟೋ 650MT
ಬೈಕು ಹತ್ತಿಕೊಂಡು ಲಾಂಗ್‌ ರೈಡು ಹೋಗುವವರಿಗೆ ಸೂಕ್ತ ಅನ್ನಿಸುವ ಈ ಬೈಕು 650 ಸಿಸಿ ಇಂಜಿನ್‌ದು. 18 ಲೀಟರ್‌ನ ಪೆಟ್ರೋಲ್‌ ಟ್ಯಾಂಕ್‌ ಹೊಂದಿರುವ ಈ ಬೈಕು 6 ಸ್ಪೀಡ್‌ ಗೇರ್‌ ಹೊಂದಿದೆ. ಇದರ ಗರಿಷ್ಠ ವೇಗ ಗಂಟೆಗೆ 170 ಕಿಮೀ. ಪಲ್‌ರ್‍ ವೈಟ್‌, ರಾಯಲ್‌ ಬ್ಲೂ ಎರಡು ಬಣ್ಣಗಳಲ್ಲಿ ಲಭ್ಯ. ಬೆಲೆ ರು.4.99 ಲಕ್ಷ.

ಸಿಎಫ್‌ ಮೋಟೋ 650GT
ಸಿಎಫ್‌ ಮೋಟೋ ಬೈಕುಗಳಲ್ಲೇ ಟಾಪ್‌ ಎಂಡ್‌ ಬೈಕ್‌ ಇದು. ಊರೂರಿಗೆ ಬೈಕಿನಲ್ಲಿ ಸವಾರಿ ಮಾಡುವವರಿಗೆ ತಕ್ಕದಾದ ಬೈಕು. 650 ಸಿಸಿ ಇಂಜಿನ್‌ ಇದೆ. ಡಿಸೈನ್‌ ಮನಸೆಳೆಯುವಂತಿದೆ. ಇದರ ಪೆಟ್ರೋಲ್‌ ಟ್ಯಾಂಕ್‌ ಸಾಮರ್ಥ್ಯ 19 ಲೀ. ಆರು ಗೇರ್‌ ಇದೆ. ಇದರ ಬೆಲೆ ರು.5.49 ಲಕ್ಷ.