ನವದಹೆಲಿ(ಜು.05): ಬಜಾಜ್ ಕಂಪನಿ ನೂತನ ಪಲ್ಸಾರ್ ಬೈಕ್ ಬಿಡುಗಡೆ ಮಾಡುತ್ತಿದೆ. ಪಲ್ಸಾರ್ 125 NS ಬೈಕ್ ಆಗಸ್ಟ್ ಆರಂಭದಲ್ಲಿ ಬಿಡುಗಡೆಯಾಗಲಿದೆ. ಪೊಲೆಂಡ್ ಹಾಗೂ ಕೊಲಂಬಿಯಾದಲ್ಲಿ ಈಗಾಗಲೇ ಪಲ್ಸಾರ್ 125 NS ಬೈಕ್ ಬಿಡುಗಡೆಯಾಗಿದೆ. 125CC ಬೈಕ್‌ಗಳಿಗೆ ಭಾರತದಲ್ಲಿ ಹೆಚ್ಚಿನ ಮಾರುಕಟ್ಟೆ ಇದೆ. ಪಲ್ಸಾರ್ ವೇರಿಯೆಂಟ್ ಭಾರತದಲ್ಲಿ ಜನಪ್ರಿಯವಾಗಿದೆ. ಹೀಗಾಗಿ ಬಜಾಜ್ ಪಲ್ಸಾರ್ 125NS ಬಿಡುಗಡೆಗೆ ಸಜ್ಜಾಗಿದೆ.

ಇದನ್ನೂ ಓದಿ: ರೈಡಿಂಗ್‌ನಲ್ಲಿ ಮ್ಯೂಸಿಕ್ ಕೇಳಿದರೆ ಕಟ್ಟಲೇ ಬೇಕು ದಂಡ!

ಬಜಾಜ್ ಪಲ್ಸಾರ್ 125NS ಬೈಕ್ ಬೆಲೆ 60,000 ರೂಪಾಯಿ(ಎಕ್ಸ್ ಶೋ ರೂಂ). 124.45cc, ಏರ್ ಕೂಲ್ಡ್,ಸಿಂಗಲ್ ಸಿಲಿಂಡರ್, ಫ್ಯುಯೆಲ್ ಇಂಜೆಕ್ಟ್ ಎಂಜಿನ್ ಹೊಂದಿದ್ದು,  12 bhp ಪವರ್ (@8,500 rpm) ಹಾಗೂ 11 Nm ಪೀಕ್ ಟಾರ್ಕ್ (@6,000 rpm) ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಬಜಾಜ್ ಪಲ್ಸಾರ್ 125NS ಬೈಕ್ 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. 

ಇದನ್ನೂ ಓದಿ: ಚೆನ್ನೈ ಮೂಲದ ಬ್ಲಾಕ್‌ಸ್ಮಿತ್ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಸದ್ಯದಲ್ಲೇ ಬಿಡುಗಡೆ !

 ಮುಂಭಾಗದಲ್ಲಿ 240mm ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ130mm ಡ್ರಂ ಬ್ರೇಕ್ ಹೊಂದಿದೆ. ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ನಿಟ್ರಾಕ್ ಶಾಕ್ ಅಬ್ಸಾರ್ಬರ್ ಹೊಂದಿದೆ. ಎಂದಿನಂತ ಪಲ್ಸಾರ್ ಡ್ಯುಯೆಲ್ ಟೋನ್ ಕಲರ್‌ಗಳಲ್ಲಿ ನೂತನ ಬೈಕ್ ಲಭ್ಯವಿದೆ.