Asianet Suvarna News Asianet Suvarna News

ಭಾರತಕ್ಕೆ ಬರುತ್ತಿದೆ ಚೀನಾದ CF ಮೋಟೋ ಬೈಕ್-ಜುಲೈನಲ್ಲಿ ಅನಾವರಣ!

ಚೀನಾದ CF ಮೋಟೋ ಬೈಕ್ ಕಂಪನಿ ಇದೀಗ ಭಾರತಕ್ಕೆ ಕಾಲಿಡುತ್ತಿದೆ. ಹೈದರಾಬಾದ್‌ನಲ್ಲಿ ಬೈಕ್ ನಿರ್ಮಾಣವಾಗಲಿದೆ. ಜುಲೈನಲ್ಲಿ ನೂತನ ಬೈಕ್ ಭಾರತ  ಪ್ರವೇಶಿಸಲಿದೆ. ಈ ಬೈಕ್ ಬೆಲೆ ಹಾಗೂ ವಿಶೇಷತೆ ಇಲ್ಲಿದೆ.

China base CF moto bike to enter india soon
Author
Bengaluru, First Published Jun 24, 2019, 8:23 PM IST

ನವದೆಹಲಿ(ಜೂ.24): ಭಾರತದ ಆಟೋಮೊಬೈಲ್ ಕ್ಷೇತ್ರ ಆಕ್ರಮಿಸಿಕೊಳ್ಳಲು ಇದೀಗ ಹಲವು ವಿದೇಶಿ  ಮೋಟಾರು ಕಂಪನಿಗಳು ಭಾರತಕ್ಕೆ ಕಾಲಿಟ್ಟಿದೆ. ಈಗಾಗಲೇ ಹಲವು ಕಂಪನಿಗಳು ಭಾರತದಲ್ಲಿ ವಾಹನ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಇದರ ಬೆನ್ನಲ್ಲೇ ಚೀನಾದ CF ಮೋಟೋ ಕಂಪನಿ ಭಾರತದಲ್ಲಿ ಬೈಕ್ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಮೂಲಕ ಇತರ ಬೈಕ್ ಕಂಪನಿಗಳಿಗೆ ಪೈಪೋಟಿ ನೀಡಲು ರೆಡಿಯಾಗಿದೆ.

China base CF moto bike to enter india soon

ಇದನ್ನೂ ಓದಿ: ಅಮೇಜಾನ್‌ನಲ್ಲಿ ಬುಕ್ ಮಾಡಿ ರಿವೋಲ್ಟ್ ಎಲೆಕ್ಟ್ರಿಕ್ ಬೈಕ್!

CF ಮೋಟೋ ಜುಲೈ ಆರಂಭದಲ್ಲಿ ಬೈಕ್ ಅನಾವರಣ ಮಾಡುತ್ತಿದೆ. 250NK, 400NK, 650MT ಹಾಗೂ 650NK ಬೈಕ್ ವೇರಿಯೆಂಟ್ ಬಿಡುಗಡೆ ಮಾಡಲಿದೆ. ಇದಕ್ಕಾಗಿ ಹೈದರಾಬಾದ್ ಮೂಲದ AMW ಮೋಟಾರ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿರುವ CF ಮೋಟೋ ಆಕರ್ಷಕ ಶೈಲಿ ಹಾಗೂ ಆಧುನಿಕ ತಂತ್ರಜ್ಞಾನ ಹೊಂದಿರುವ ಬೈಕ್ ಬಿಡುಗಡೆ ಮಾಡಲಿದೆ.

China base CF moto bike to enter india soon

ಇದನ್ನೂ ಓದಿ: ಹೆಲ್ಮೆಟ್ ಇಲ್ಲದ ಸವಾರರನ್ನು ಅಡ್ಡಹಾಕಬೇಡಿ, ದಂಡ ಹಾಕಿ-ಮುಖ್ಯಮಂತ್ರಿ!

ಚೀನಾದ CF ಮೋಟೋ ಕಂಪನಿ 1989ರಲ್ಲಿ ಆರಂಭಗೊಂಡಿತು. 2017ರಲ್ಲಿ KTM AG ಕಂಪನಿ ಸಹಭಾಗಿತ್ವದಲ್ಲಿ ಬೈಕ್ ಬಿಡುಗಡೆ ಮಾಡುತ್ತಿದೆ. ಇದೀಗ ಭಾರತಕ್ಕೂ ವಿಸ್ತರಿಸುತ್ತಿದೆ. ಮೊದಲ ಹಂತದಲ್ಲಿ ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ ಬೈಕ್ ಬಿಡುಗಡೆಯಾಗಲಿದೆ. ಬಳಿಕ ದೇಶದ ಎಲ್ಲಾ ನಗರ ಹಾಗೂ ಹಳ್ಳಿಗಳಿಗೆ ವಿಸ್ತರಿಸಲಿದೆ. CF ಮೋಟೋ  ಬಿಡುಗಡೆ ಮಾಡಲಿರುವ ಬೈಕ್ ಬೆಲೆ 2 ಲಕ್ಷ ರೂಪಾಯಿಯಿಂದ ಆರಂಭವಾಗಲಿದ್ದು ಗರಿಷ್ಠ 5 ಲಕ್ಷ ರೂಪಾಯಿವರೆಗಿರಲಿದೆ ಎಂದು ಅಂದಾಜಿಸಲಾಗಿದೆ. 
 

Follow Us:
Download App:
  • android
  • ios