ಮತ್ತೊಂದು ಕಾರು ಡಿಸೈನ್ ಕದ್ದ ಚೀನಾ, ನಕಲು ಕಾರು ಪಾಕಿಸ್ತಾನದಲ್ಲಿ ಮಾರಾಟ!
ಚೀನಾ ಆಟೋಮೊಬೈಲ್ ಕಂಪನಿಗಳಿರಲಿ, ಮೊಬೈಲ್ ಕಂಪನಿಗಳೇ ಇರಲಿ, ಒರಿಜಿನಲ್ ಉತ್ಪನ್ನಗಳಿಗೆ ಒಂದಿಂಚು ವ್ಯತ್ಯಾಸ ಬರದಂತೆ ನಕಲು ಮಾಡಿ ಮಾರಾಟ ಮಾಡುತ್ತಾರೆ. ಕಾಪಿ ಮಾಡುವ ಕಲೆಯಲ್ಲಿ ಚೀನಾ ಮೀರಿಸುವವರು ಯಾರೂ ಇಲ್ಲ. ಈಗಾಗಲೇ ಈ ನಕಲು ಬುದ್ದಿಯಿಂದ ಸಾಕಷ್ಟು ಹೊಡೆತ ತಿಂದಿರುವ ಚೀನಾ ಇದೀಗ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದೆ
ಚೀನಾ(ಸೆ.26): ಕಾರಿನ ಡೈಸನ್ ಕದಿಯುವ ಚೀನಾ ಹಲವು ಬಾರಿ ನ್ಯಾಯಾಲಯದಿಂದ ತೀವ್ರ ಹೊಡೆತ ತಿಂದಿದೆ. ಇತ್ತೀಚೆಗಷ್ಟೇ ಭಾರತ ಟಾಟಾ ನೆಕ್ಸಾನ್ ಕಾರಿನ ಡಿಸೈನ್ ಕದ್ದು ಚೀನಾ ಆಟೋಮೊಬೈಲ್ ಕಂಪನಿ ನಕಲು ಕಾರನ್ನು ಬಿಡುಗಡೆ ಮಾಡಿತ್ತು. ಇದೀಗ ಚೀನಾದ BAIC ಆಟೋಮೊಬೈಲ್ ಕಂಪನಿ, ಜನಪ್ರಿಯ ಜೀಪ್ ರಾಂಗ್ಲರ್ ಡೈಸನ್ ಕದ್ದು ವಿವಾದ ಸೃಷ್ಟಿಸಿದೆ.
ಛೀಮಾರಿ ಹಾಕಿಸಿಕೊಂಡ್ರೂ ಬುದ್ದಿ ಕಲಿತಿಲ್ಲ ಚೀನಾ, ಟಾಟಾ ನೆಕ್ಸಾನ್ ಡಿಸೈನ್ ಕಾಪಿ!.
BAIC ಕಂಪನಿ ಜೀಪ್ ರಾಂಗ್ಲರ್ ಮಾದರಿಯನ್ನೇ ಹೋಲುವ SUV ಕಾರು ನಿರ್ಮಾಣ ಮಾಡಿದೆ. ಕೇವಲ ಡಿಸೈನ್ ಮಾತ್ರವಲ್ಲ, ಅಲೋಯ್ ವೀಲ್ಹ್, ಕ್ಯಾಬಿನ್, ಫೀಚರ್ಸ್ ಎಲ್ಲವೂ ಜೀಪ್ ರಾಂಗ್ಲರ್ SUV ಕಾರನ್ನು ಹೋಲುತ್ತಿದೆ. ರಾಂಗ್ಲರ್ ಜೀಪ್‌ನ ಜನಪ್ರಿಯ ಹೆಡ್ ಲ್ಯಾಂಪ್ಸ್ ಕೂಡ ಕಾಪಿ ಮಾಡಲಾಗಿದೆ. ಈ ಕಾರನ್ನು BAIC ಕಂಪನಿ ಪಾಕಿಸ್ತಾನದಲ್ಲಿ ಮಾರಾಟ ಮಾಡಲಿದೆ.
BJ40 ಪ್ಲಸ್ ಅನ್ನೋ SUV ಕಾರ ಶೀಘ್ರದಲ್ಲಿ ಪಾಕಿಸ್ತಾನದಲ್ಲಿ ಬಿಡುಗಡೆ ಮಾಡಿಲಿದೆ. ಇನ್ನು ಪಾಕ್ ಕಾರು ಪ್ರಿಯರು ಅತ್ಯುತ್ತಮ ಡಿಸೈನ್, ಬಲಿಷ್ಠ ಎಂಜಿನ್ ಹಾಗೂ ಅತ್ಯಂತ ದಕ್ಷ ಕಾರನ್ನು ಚೀನಾ ಬಿಡುಗಡೆ ಮಾಡುತ್ತಿದೆ ಎಂದು ಕೊಂಡಾಡಿದ್ದಾರೆ