GST ಕಡಿತದಿಂದ ದ್ವಿಚಕ್ರ ವಾಹನ ಬೆಲೆಯಲ್ಲಿ ಇಳಿಕೆ; ಕೈಗೆಟುವ ದರದಲ್ಲಿ ಬೈಕ್, ಸ್ಕೂಟರ್ !

ಕೊರೋನಾ ವೈರಸ್ ಕಾರಣ ಸಂಪೂರ್ಣ ಕುಸಿತ ಕಂಡಿರುವ ಆಟೋಮೊಬೈಲ್ ಮಾರುಕಟ್ಟೆಗೆ ಚೇತರಿಕೆ ನೀಡಲು ಕೇಂದ್ರ ಸರ್ಕಾರ ಇದೀಗ ದ್ವಿಚಕ್ರ ವಾಹನಗಳ ಮೇಲಿನ GST(ತೆರಿಗೆ) ಕಡಿತಗೊಳಿಸಲು ನಿರ್ಧರಿದೆ. ಇದರಿಂದ ಬೈಕ್ ಹಾಗೂ ಸ್ಕೂಟರ್ ಬೆಲೆಯಲ್ಲಿ ಭಾರೀ ಇಳಿಕೆಯಾಗಲಿದೆ. ಇದರ ಲಾಭ ಪಡೆಯಲು ಹೀರೋ ಮೋಟಾರ್ ಕಾರ್ಪ್ ಮುಂದಾಗಿದೆ.

Central government ready to cut GST rate from 28 to 18 percent can bring down prices of two wheelers

ನವದೆಹಲಿ(ಆ.27): ದ್ವಿಚಕ್ರ ವಾಹಗಳು ಐಷಾರಾಮಿ ವಸ್ತುಗಳಲ್ಲ. ಹೀಗಾಗಿ ದ್ವಿಚಕ್ರ ವಾಹನಗಳ ಮೇಲಿನ GST(ತೆರಿಗೆ) ಕಡಿತಕ್ಕೆ ಕೇಂದ್ರ ಮುಂದಾಗಿದೆ. ಸದ್ಯ ದ್ವಿಚಕ್ರ ವಾಹನಗಳ ಮೇಲಿನ GST ತೆರಿಗೆ 28%. ಈ ತೆರಿಗೆಯನ್ನು ಶೇಕಡಾ 18ಕ್ಕೆ ಇಳಿಸಲು ಕೇಂದ್ರ ನಿರ್ಧರಿಸಿದೆ. ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಈ ಪ್ರಸ್ತಾವನೆ ಮುಂದಿಟ್ಟ ಬೆನ್ನಲ್ಲೇ ಹೀರೋ ಮೋಟಾರ್ ಕಾರ್ಪ್, ಬಜಾಜ್ ಹಾಗೂ ಟಿವಿಎಸ್ ಮೋಟಾರ್ ಷೇರುಗಳ ಬೆಲೆ ಶೇಕಡಾ 2 ರಿಂದ 6 ಕ್ಕೆ ಏರಿಕೆಯಾಗಿದೆ.

ಜಿಎಸ್‌ಟಿ ತೆರಿಗೆ ದರ ಇಳಿಕೆ: 1.24 ಕೋಟಿ ತೆರಿಗೆದಾರರು ಸೇರ್ಪಡೆ!

ಶೇಕಡಾ 28 ರಿಂದ 18ಕ್ಕೆ GST ತೆರಿಗೆ ಇಳಿಕೆ ಮಾಡುವ ನಿರ್ಧಾರದಿಂದ ದ್ವಿಚಕ್ರ ವಾಹನ ಬೆಲೆಯಲ್ಲಿ ಭಾರೀ ಇಳಿಕೆಯಾಗಲಿದೆ. ಇದರಿಂದ ಗ್ರಾಹಕರಿಗೆ ನೆರವಾಗಲಿದೆ. ಇದು ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲಿದೆ. ಕಾರಣ ಇತ್ತೀಚೆಗೆ ಆಟೋಮೊಬೈಲ್ ಮಾರುಕಟ್ಟೆ ಸರ್ವೆ ಪ್ರಕಾರ, ಕೊರೋನಾ ವೈರಸ್ ಕಾರಣ ಜನರು ವಾಹನ ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ. ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ.  ಆದರೆ ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕಾರಣ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ವರದಿ ಬಹರಿಂಗವಾಗಿತ್ತು.

ಕೇಂದ್ರದ GST ಕಡಿತ ನಿರ್ಧಾರದಿಂದ ಹೀರೋ ಮೋಟಾರ್ ಕಾರ್ಪ್ ತನ್ನು ದ್ವಿಚಕ್ರ ವಾಹನ ಬೆಲೆಯಲ್ಲಿ ಭಾರಿ ಇಳಿಕೆ ಮಾಡಲು ಮುಂದಾಗಿದೆ. ಈ ಮೂಲಕ ಕೊರೋನಾ ಕಾರಣ ಕುಸಿದ ಮಾರುಕಟ್ಟೆ ಹಾಗೂ ನಷ್ಟವನ್ನು ಸರಿದೂಗಿಸಲು ಮುಂದಾಗಿದೆ. 

125 ಸಿಸಿ ಎಂಜಿನ್ ದ್ವಿಚಕ್ರ ವಾಹನ ಬೆಲೆಯಲ್ಲಿ ಇಳಿಕೆಯಾಗಲಿದೆ. ಕಾರಣ 125ಸಿಸಿ ಎಂಜಿನ್ ವಾಹನಗಳು ಅಗತ್ಯ ವಸ್ತುಗಳ ಸೇವೆ ಅಡಿಯಲ್ಲಿ ಬರಲಿದೆ. ಹೀಗಾಗಿ ಇದರ ಮೇಲಿನ ಐಷಾರಾಮಿ GST ತೆರಿಗೆ ಕಡಿತವಾಗಲಿದೆ. ಹೀಗಾಗಿ ದ್ವಿಚಕ್ರ ವಾಹನ ಬೆಲೆ ಇಳಿಕೆಯಾಗಲಿದೆ. ಹೀರೋ ಮೋಟಾರ್ ಕಾರ್ಪ್ ನಗರ ಹಾಗೂ ಹಳ್ಳಿಗಳಲ್ಲಿ ಹೆಚ್ಚಾಗಿ 125 ಸಿಸಿ ದ್ವಿಚಕ್ರ ವಾಹನದ ಮಾರಾಟದಲ್ಲಿ ಮುಂಚೂಣಿಯಲ್ಲಿದೆ. ಹೀಗಾಗಿ ಕೇಂದ್ರ GST ನಿರ್ಧಾರದಿಂದ ಸಂಪೂರ್ಣ ಲಾಭ ಪಡೆಯಲು ಮುಂದಾಗಿದೆ.

ಮತ್ತೆ ಎರಡು ಸಾವಿರ ರೂ ನೋಟು ಬ್ಯಾನ್?: ಸೆಂಟ್ರಲ್ ಬ್ಯಾಂಕ್ ಬಿಚ್ಚಿಟ್ಟ ಅಚ್ಚರಿಯ ಸಂಗತಿ!.

"

Latest Videos
Follow Us:
Download App:
  • android
  • ios