ಹೊಸ ವರ್ಷ ಹೊಂಡಾ  ಕಾರು ಕಂಪನಿಗೆ ಸಿಹಿ ನೀಡಿದರೆ, ಟಾಟಾ ಮೋಟಾರ್ಸ್‌ಗೆ ಕಹಿ ಅನುಭವ ನೀಡಿದೆ. 2019ರ ಜನವರಿಯಲ್ಲಿ ಮಾರಾಟವಾದ ಕಾರುಗಳ ಲಿಸ್ಟ್ ಬಿಡುಗಡೆಯಾಗಿದೆ. ಯಾವ ಬ್ರ್ಯಾಂಡ್ ಕಾರು ಹೆಚ್ಚು ಮಾರಾಟವಾಗಿದೆ. ಯಾರು ನಿರಾಸೆ ಅನುಭವಿಸಿದ್ದಾರೆ. ಇಲ್ಲಿದೆ ಮಾಹಿತಿ.

ನವದೆಹಲಿ(ಫೆ.02): ಹೊಸ ವರ್ಷದಲ್ಲಿ ಕಾರು ಮಾರಾಟದಲ್ಲಿ ಹೆಚ್ಚಿನ ಏರಿಕೆಯಾಗಿಲ್ಲ. ಆದರೆ ಆಟೋಮೊಬೈಲ್ ಕಂಪೆನಿಗಳಿಗೆ ಸಮಾಧಾನ ತಂದಿದೆ. ವಿಶೇಷ ಅಂದರೆ ಹೊಂಡಾ ಕಾರುಗಳ ಮಾರಾಟದಲ್ಲಿ ಗಣನೀಯವಾದ ಏರಿಕೆಯಾಗಿದ್ದರೆ, ಟಾಟಾ ಮೋಟಾರ್ಸ್ ಇಳಿಮುಖವಾಗಿದೆ.

ಇದನ್ನೂ ಓದಿ: 3 ಲಕ್ಷ ರೂಪಾಯಿಗೆ ಖರೀದಿಸಬಹುದಾದ ಟಾಪ್ 3 ಕಾರು!

ಎಂದಿನಂತೆ ಮಾರುತಿ ಸುಜುಕಿ ಕಾರುಗಳು ಗರಿಷ್ಠ ಮಾರಾಟದೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದ್ದರೆ, 5ನೇ ಸ್ಥಾನದಲ್ಲಿದ್ದ ಹೊಂಡಾ ಮೋಟಾರ್ಸ್ ಟಾಟಾ ಮೋಟಾರ್ಸ್ ಹಿಂದಿಕ್ಕಿ ನಾಲ್ಕನೇ ಸ್ಥಾನ ಅಕ್ರಮಿಸಿಕೊಂಡಿದೆ. ಈ ಮೂಲಕ ಹೊಂಡಾ 23% ಏರಿಕೆ ಕಂಡಿದ್ದರೆ, ಟಾಟಾ -13% ಇಳಿಕೆಯಾಗಿದೆ.

2019ರ ಜನವರಿಯಲ್ಲಿ ಕಾರು ಮಾರಾಟ

ರ‍್ಯಾಂಕ್ಬ್ರ್ಯಾಂಡ್ಜ.2019ಜ.2018
1ಮಾರುತಿ ಸುಜುಕಿ1,42,1501,40,600
2ಹ್ಯುಂಡೈ45,80345,508
3ಮಹೀಂದ್ರ22,39922,360
4ಹೊಂಡಾ18,26114,838
5ಟಾಟಾ17,82620,055