ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ: ಕೆನಡಾದಲ್ಲಿ ತಿರಂಗ ಕಾರು ರ‍್ಯಾಲಿ!
74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಭಾರತದಲ್ಲಿ ಸಂಭ್ರಮದಿಂದ ಆಚರಿಸಲಾಗಿದೆ. ಭಾರತದಲ್ಲಿ ಮಾತ್ರವಲ್ಲ, ಅಮೆರಿಕ, ಇಟಲಿ, ಕೆನಡ ಸೇರಿದಂತೆ ಇತರ ಹಲವು ದೇಶಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿದೆ. ಕೆನಡಾದಲ್ಲಿ ಭಾರತದ 74ನೇ ಸ್ವಾತಂತ್ರ್ಯವನ್ನು ಕಾರು ರ‍್ಯಾಲಿ ಮೂಲಕ ಆಚರಿಸಲಾಗಿದೆ. ಈ ವಿಶೇಷವಾಗಿ ಆಯೋಜಿಸಲಾಗಿದ್ದ ಈ ಕಾರು ರ‍್ಯಾಲಿ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಕೆನಡ(ಆ.16): 74ನೇ ಸ್ವಾತಂತ್ರ್ಯ ದಿನಾಚರಣೆಗೆ ಭಾರತದಲ್ಲಿ ಮಾರ್ಗಸೂಚಿ ಪ್ರಕಟಿಸಲಾಗಿತ್ತು. ಹೀಗಾಗಿ ಅದ್ಧೂರಿ ಸ್ವಾತಂತ್ರ್ಯ ದಿನಾಚರೆ ಸಾಧ್ಯವಾಗಿಲ್ಲ. ಕೊರೋನಾ ವೈರಸ್ ಕಾರಣ ನಿಯಮ ಮೀರದಂತೆ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗಿದೆ. ಇನ್ನು ವಿದೇಶಗಳಲ್ಲೂ ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗಿದೆ. ಅದರಲ್ಲೂ ಕೆನಡಾದಲ್ಲಿ ತಿರಂಗ ಕಾರು ರ‍್ಯಾಲಿ ಮೂಲಕ ಆಚರಿಸಲಾಗಿದೆ.
ಫ್ರೀಡಂ ಡ್ರೈವ್; ಸ್ವಾತಂತ್ರ್ಯ ದಿನಾಚರಣೆಗೆ ಹ್ಯುಂಡೈ ವಿಶೇಷ ಆಫರ್!
ಕೆನಡದಲ್ಲಿನ ಭಾರತೀಯರು ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ತಿರಂಗ ಕಾರು ರ‍್ಯಾಲಿ ಆಯೋಜಿಸಿದ್ದರು. ಈ ತಿರಂಗ ರ‍್ಯಾಲಿಯಲ್ಲಿ 200ಕ್ಕೂ ಹೆಚ್ಚಿನ ಕಾರುಗಳು ಪಾಲ್ಗೊಂಡಿತ್ತು. ಧ್ವಜಾರೋಹಣ ಬಳಿಕ ಕಾರು ರ‍್ಯಾಲಿಗೆ ಚಾಲನೆ ನೀಡಲಾಯಿತು. ಪ್ರತಿ ಕಾರುಗಳಲ್ಲಿ ಭಾರತದ ರಾಷ್ಟ್ರ ಧ್ವಜ ಹಾಗೂ ಕೆನಡಾ ಧ್ವಜ ಕಟ್ಟಲಾಗಿತ್ತು.
ಕೆನಡಾದ ರೇಡಿಯೋ ಇಂಡಿಯಾ(ಯಾರ್ಕರ್ ಬಿಸಿನೆಸ್ ಸೆಂಟರ್) ಸರ್ರೆಯಿಂದ ವ್ಯಾಕವರ್ ವರೆಗೆ ರ‍್ಯಾಲಿ ಆಯೋಜಿಸಲಾಗಿತ್ತು. ರ‍್ಯಾಲಿಗೂ ಮುನ್ನ ಸರಳ ಕಾರ್ಯಕ್ರಮದಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರ ಸ್ಮರಣೆ ಮಾಡಲಾಯಿತು. ಸರಳ ಕಾರ್ಯಕ್ರಮ ಕೆನಡದಲ್ಲಿ ಎಲ್ಲರ ಗಮನಸೆಳೆದಿತ್ತು. ಬಳಿಕ ರ‍್ಯಾಲಿ ಆರಂಭಗೊಂಡಿತ್ತು.