BS6 ಫೋರ್ಸ್ ಟ್ರಾಕ್ಸ್ ಕ್ರೂಸರ್ ಹಾಗೂ ತೂಫಾನ್ ಬಿಡುಗಡೆ!

BS6 ನಿಯಮ ಹಾಗೂ ಕೊರೋನಾ ವೈರಸ್ ಕಾರಣ ಹಲವು ವಾಹಗಳು ಸ್ಥಗಿತಗೊಂಡಿತು. ಕೆಲ ವಾಹನಗಳು ಇದೀಗ BS6 ಅಪ್‌ಗ್ರೇಡ್‌ನೊಂದಿಗೆ ಬಿಡುಗಡೆಯಾಗುತ್ತಿದೆ. ಫೋರ್ಸ್ ತನ್ನ  ಟ್ರಾಕ್ಸ್ ಕ್ರೂಸರ್ ಹಾಗೂ ತೂಫಾನ್ BS6 ಎಂಜಿನ್ ಮೂಲಕ ಬಿಡುಗಡೆ ಮಾಡಿದೆ.  

BS6 Force trax cruiser and toofan launched in India

ನವದೆಹಲಿ(ಸೆ.10): ಆಟೋ ಎಕ್ಸ್‌ಪೋ 2020ಯಲ್ಲಿ ಫೋರ್ಸ್ ತನ್ನ BS6 ಟ್ರಾಕ್ಸ್ ಅನಾವರಣ ಮಾಡಿತ್ತು. ಆದರೆ ಕೊರೋನಾ ವೈರಸ್ ಹೊಡೆತದಿಂದ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ಫೋರ್ಸ್ ಟ್ರಾಕ್ಸ್ ಕ್ರೂಸರ್ ಹಾಗೂ ತೂಫಾನ್ ವಾಹನ ಬಿಡುಗಡೆ ಮುಂದೂಡಲ್ಪಟ್ಟಿತ್ತು. ಇದೀಗ ಹೊಚ್ಚ ಹೊಸ BS6 ಎಂಜಿನ್ ಟ್ರಾಕ್ಸ್ ಕ್ರೂಸರ್ ಹಾಗೂ ತೂಫಾನ್ ಬಿಡುಗಡೆಯಾಗಿದೆ.

ಸನ್ನಿ ಲಿಯೋನ್ ಖರೀದಿಸಿದ ಮಸರಾಟಿ ಘಿಬ್ಲಿ ಕಾರಿನ ವಿಶೇಷತೆ ಏನು?

6 ವೇರಿಯೆಂಟ್‌ಗಳಲ್ಲಿ ಫೋರ್ಸ್ ಟ್ರಾಕ್ಸ್ ವಾಹನ ಬಿಡುಗಡೆಯಾಗಿದೆ. ಫೋರ್ಸ್ ಟ್ರಾಕ್ಸ್ ವಾಹನದ ಆರಂಭಿಕ ಬೆಲೆ 10.9 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). BS6 ಎಂಜಿನ್ ಜೊತೆ ಪವರ್‌ಫುಲ್ ಎಂಜಿನ್, ವಾಹನ ಗಾತ್ರದಲ್ಲೂ ಹೆಚ್ಚಳ, ಸುರಕ್ಷತಾ ಫೀಚರ್ಸ್‌ಗಳಾದ ABS ಹಾಗೂ EBD ಹೊಂದಿದೆ. 

ಕೊರೋನೊತ್ತರ ಜಗತ್ತಿನಲ್ಲಿ ಸಂಚಾರ: ವೈಯುಕ್ತಿ ಸಾರಿಗೆಯತ್ತ ಒಲವು ತೋರಿದ ಜನ!

ಫೋರ್ಸ್ ಟ್ರಾಕ್ಸ್ ವೇರಿಯೆಂಟ್ ಹಾಗೂ ಬೆಲೆ (ಎಕ್ಸ್ ಶೋ ರೂಂ)
1 – ಕ್ರೂಸರ್ (9+D)  10.9 ಲಕ್ಷ ರೂಪಾಯಿ 
2 – ಕ್ರೂಸರ್ Deluxe (9+D) - 12.68 ಲಕ್ಷ ರೂಪಾಯಿ 
3 – ಕ್ರೂಸರ್ (12+D) –  11.08 ಲಕ್ಷ ರೂಪಾಯಿ 
4 – ಕ್ರೂಸರ್ Deluxe (12+D) - 12.78 ಲಕ್ಷ ರೂಪಾಯಿ 
5 – ತೂಫಾನ್ (11+D) –10.96 ಲಕ್ಷ ರೂಪಾಯಿ 
6 – ತೂಫಾನ್ Deluxe (11+D) –  12.73 ಲಕ್ಷ ರೂಪಾಯಿ 

2.6 ಲೀಟರ್,  4 ಸಿಲಿಂಡರ್, ರೈಲ್ ಡೀಸೆಲ್ ಎಂಜಿನ್ ಹೊಂದಿದ್ದು, 90HP ಹಾಗೂ 250NM ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ.

Latest Videos
Follow Us:
Download App:
  • android
  • ios