ಬೆಂಗಳೂರು(ಡಿ.15): ಹೊಸ ವರ್ಷ ಬರ ಮಾಡಿಕೊಳ್ಳಲು ಎಲ್ಲರು ತುದಿಗಾಲಲ್ಲಿ ನಿಂತಿದ್ದಾರೆ. 2019ಕ್ಕೆ ಗುಡ್ ಬೈ ಹೇಳಲು ಕೆಲ ದಿನಗಳು ಮಾತ್ರ ಬಾಕಿ. 2019ರಲ್ಲಿ ಭಾರತ ಹಲವು ಏಳು ಬೀಳುಗಳನ್ನು ಕಂಡಿದೆ. ಇದರಲ್ಲಿ ಆಟೋಮೊಬೈಲ್ ಕ್ಷೇತ್ರಕ್ಕೆ ಸಿಹಿಗಿಂತ ಕಹಿಯೇ ಹೆಚ್ಚು. ಆರ್ಥಿಕ ಹಿಂಜರಿತ, ವಾಹನ ಮಾರಾಟ ಕುಸಿತದಿಂದ ಭಾರತದ ಆಟೋಮೊಬೈಲ್ ಕ್ಷೇತ್ರ ಹಿಂದೆಂದು ಕಾಣದಂತ ಕುಸಿತ ಕಂಡಿತ್ತು. ಹಿನ್ನಡೆ ನಡುವೆಯೂ ಬಿಡುಗಡೆಯಾದ  ಕೆಲ SUV ಕಾರುಗಳು ಭಾರತದಲ್ಲಿ ಸಂಚಲನ ಸೃಷ್ಟಿಸಿತು.

ಇದನ್ನೂ ಓದಿ: ಜ.22ಕ್ಕೆ ಟಾಟಾ ಅಲ್ಟ್ರೋಝ್ ಕಾರು ಬಿಡುಗಡೆ; ಬುಕಿಂಗ್ ಬೆಲೆ 21 ಸಾವಿರ!

2019ರ ವಾಹನ ಮಾರಟ ಕುಸಿತ ಆಟೋಮೊಬೈಲ್ ಕ್ಷೇತ್ರವನ್ನು ತಲ್ಲಣಗೊಳಿಸಿತ್ತು. ವಾಹನ ಘಟಗಳು ಸ್ಥಗಿತಗೊಂಡವು, ಉದ್ಯೋಗ ಕಡಿತ ಸೇರಿದಂತೆ ಆರ್ಥಿಕ ಸಂಕಷ್ಟಕ್ಕೆ ಕಾರಣವಾಯಿತು. ಆದರೆ ಕೆಲ SUV ಕಾರುಗಳು ಕಂಪನಿಯ ಕೈಹಿಡಿದಿಯಿತು. ಹೀಗೆ 2019ರಲ್ಲಿ ಮಿಂಚಿದ SUV ಕಾರುಗಳ ವಿವರ ಇಲ್ಲಿದೆ. 

ಇದನ್ನೂ ಓದಿ: ಕಾರು ಖರೀದಿಗೆ ಇದು ಸೂಕ್ತ ಕಾಲ, ಸಿಗಲಿದೆ ಭರ್ಜರಿ ಡಿಸ್ಕೌಂಟ್!

ಕಿಯಾ ಸೆಲ್ಟೋಸ್


2019ರಲ್ಲಿ ಬಿಡುಗಡೆಯಾಗ SUV ಕಾರುಗಳ ಪೈಕಿ ಕಿಯಾ ಸೆಲ್ಟೋಸ್ ಹೆಚ್ಚು ಸದ್ದು ಮಾಡಿತು. ಸೌತ್ ಕೊರಿಯಾ ಮೂಲದ ಕಿಯಾ ಭಾರತದಲ್ಲಿ ಮೊದಲ ಕಾರು ಬಿಡುಗಡೆ ಮಾಡಿತು. ಆಕರ್ಷಕ ವಿನ್ಯಾಸ, ಎಂಜಿನ್ ಹಾಗೂ ಬೆಲೆ ಗ್ರಾಹಕನ್ನು ಸೆಳೆಯಿತು. ಹೀಗಾಗಿ ದಾಖಲೆ. ಮಾರಾಟ ಕಂಡಿತು. 9.62 ಲಕ್ಷ ರೂಪಾಯಿಂದ ಆರಂಭವಾಗುವ ಕಿಯಾ ಸೆಲ್ಟೋಸ್ ಕಾರು ಈಗಲೂ ಗರಿಷ್ಠ ಮಾರಾಟ ಕಾಣುತ್ತಿದೆ.

ಇದನ್ನೂ ಓದಿ: MG ಮೋಟಾರ್ಸ್‌ನಿಂದ ಹೆಕ್ಟರ್ ಬಳಿಕ ಹೊಸ ಎಲೆಕ್ಟ್ರಿಕ್ ಕಾರು ಅನಾವರಣ!

ಹ್ಯುಂಡೈ ವೆನ್ಯೂ


ಮಾರುತಿ ಬ್ರೆಜ್ಜಾ, ಟಾಟಾ ನೆಕ್ಸಾನ್, ಫೋರ್ಡ್ ಇಕೋಸ್ಪೋರ್ಟ್, ಮಹೀಂದ್ರ xuv300 ಸೇರಿದಂತೆ ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಹ್ಯಿಂಡೈ ವೆನ್ಯೂ ಕಾರು ಮಾರುಕಟ್ಟೆ ಪ್ರವೇಶಿಸಿತು. ಸಬ್ ಕಾಂಪಾಕ್ಟ್ SUV ಕಾರುಗಳ ಪೈಕಿ ಕಡಿಮೆ ಬೆಲೆ ಕಾರು ಅನ್ನೋ ಹೆಗ್ಗಳಿಕೆಗೆ ಈ ಕಾರಿಗಿದೆ. ಜೊತೆಗೆ ಆಕರ್ಷಕ ಲುಕ್ ಗ್ರಾಹಕನ್ನು ಸೆಳೆಯಿತು.  ಹೀಗಾಗಿ ಬಿಡುಗಡೆಯಾದ ಕೆಲವೇ ತಿಂಗಳಲ್ಲಿ ಮಾರಾಟದಲ್ಲಿ ಬ್ರೆಜ್ಜಾ ಹಿಂದಿಕ್ಕಿದ ವೆನ್ಯೂ ಅಗ್ರಸ್ಥಾನಕ್ಕೇರಿತು. ವೆನ್ಯೂ ಕಾರಿನ ಬೆಲೆ 6.50 ಲಕ್ಷ ರೂಪಾಯಿಯಿಂದ ಆರಂಭವಾಗಲಿದೆ.

ಟಾಟಾ ಹ್ಯಾರಿಯರ್


ಟಾಟಾ ಮೋಟಾರ್ಸ್ ಕಂಪನಿಯ ಬಹುನಿರೀಕ್ಷಿತ ಟಾಟಾ ಹ್ಯಾರಿಯರ್ ಕಾರು ಜನವರಿ 23ಕ್ಕೆ ಬಿಡುಗಡೆಯಾಯಿತು. ಮಹೀಂದ್ರ xUV 500, ಜೀಪ್ ಕಂಪಾಸ್,  MG ಹೆಕ್ಟರ್ ಸೇರಿದಂತೆ SUV ಕಾರುಗಳಿಗೆ ಪ್ರತಿಸ್ಪರ್ದಿಯಾಗಿರುವ ಹ್ಯಾರಿಯರ್ ಆಕರ್ಷಕ ವಿನ್ಯಾಸದಿಂದ ಎಲ್ಲರ ಗಮನಸೆಳೆಯಿತು. ಟಾಟಾ ಗ್ರೂಪ್ ಮಾಲೀಕತ್ವದ ಲ್ಯಾಂಡ್ ರೋವರ್ ಜಾಗ್ವಾರ್ ಡಿಸೈನ್ ಹೋಲುವ ಹ್ಯಾರಿಯರ್ ಮಾರಾಟದಲ್ಲಿ ಅಗ್ರಸ್ಥಾನಕ್ಕೇರಿತು. ಸದ್ಯ ಟಾಟಾ ಹ್ಯಾರಿಯರ್ ಬೆಲೆ 12.99 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. 2019ರಲ್ಲಿ ಬಿಡುಗಡೆಯಾಗ ಕಾರುಗಳ ಪೈಕಿ ಹ್ಯಾರಿಯರ್ ಗರಿಷ್ಠ ಕಾರು ಪ್ರೀಯರ ಮನಸ್ಸು ಗೆದ್ದಿದೆ.

MG ಹೆಕ್ಟರ್


ಬ್ರಿಟೀಷ್ ಮೂಲದ MG ಮೋಟಾರ್ಸ್ ಭಾರತದಲ್ಲಿ ಮೊದಲ ಕಾರಾಗಿ ಹೆಕ್ಟರ್ ಬಿಡುಗಡೆ ಮಾಡಿತು.  ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಹೆಕ್ಟರ್ ಕಾರು ಗಮನಸೆಳೆಯಿತು. ಐ ಸ್ಮಾರ್ಟ್ ಕೆನಕ್ಟೆಡ್ ಕಾರಾಗಿರುವ ಹೆಕ್ಟರ್, ಹಲವು ವಿಶೇಷ ಫೀಚರ್ಸ್ ಹೊಂದಿದೆ. ಟಾಟಾ ಹ್ಯಾರಿಯರ್‌ಗೆ ನೇರ ಪ್ರತಿಸ್ಪರ್ಧಿಯಾಗಿರುವ ಹೆಕ್ಟರ್ ಬೆಲೆ 12.48 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. 2019ರಲ್ಲಿ ಹೆಕ್ಟರ್ ಕಾರು ಸಂಚಲನ ಮೂಡಿಸಿದೆ.

ಹ್ಯುಂಡೈ ಕೋನಾ


2019ರಲ್ಲಿ ಬಿಡುಗಡೆಯಾದ ಮೊದಲ ಹಾಗೂ ಏಕೈಕ SUV ಎಲೆಕ್ಟ್ರಿಕ್ ಕಾರು ಹ್ಯುಂಡೈ ಕೋನಾ. 25 ಲಕ್ಷ ರೂಪಾಯಿ ಬೆಲೆಯ ಕೋನಾ ಒಂದು ಬಾರಿ ಚಾರ್ಜ್ ಮಾಡಿದರೆ 452 ಕಿ.ಮೀ ಪ್ರಯಾಣದ ರೇಂಜ್ ನೀಡಲಿದೆ. ಕೇಂದ್ರ ಸರ್ಕಾರದ ಎಲೆಕ್ಟ್ರಿಕ್ ಕಾರುಗಳಿಗೆ ಹೆಚ್ಚಿನ ಒತ್ತು ನೀಡುತ್ತಿರವ ಬೆನ್ನಲ್ಲೇ ಕೋನಾ ಭವಿಷ್ಯದ ಕಾರು ಎಂದೇ ಬಿಂಬಿತವಾಗಿದೆ. ಆದರೆ ದುಬಾರಿ ಬೆಲೆಯಿಂದ ಇಂಧನ ಕಾರುಗಳಿಗೆ ಪೈಪೋಟಿ ನೀಡುವಲ್ಲಿ ವಿಫಲವಾಯಿತು.

ಮಾರುತಿ ಸುಜುಕಿ ಎಸ್ ಪ್ರೆಸ್ಸೋ
ಮಾರುತಿ ಸುಜುಕಿ ಸಣ್ಣ ಕಾರು ವಿಭಾಗದಲ್ಲಿ ಎಸ್ ಪ್ರೆಸ್ಸೋ ಕಾರು ಬಿಡುಗಡೆ ಮಾಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. 1.0 ಲೀಟರ್ ಎಂಜಿನ್ ಹೊಂದಿರುವ ಎಸ್ ಪ್ರೆಸ್ಸೋ ಬೆಲೆ 3.69 ಲಕ್ಷ ರೂಪಾಯಿಂದ ಆರಂಭಗೊಳ್ಳುತ್ತಿದೆ. 2019ರಲ್ಲಿ ಬಿಡುಗಡೆಯಾದ S ಪ್ರೆಸ್ಸೋ, ಸಣ್ಣ ಕಾರು ವಿಭಾಗದಲ್ಲಿ ಹೊಸ ಅಲೆ ಎಬ್ಬಿಸಿದೆ.

ಮಹೀಂದ್ರ XUV300

2019ರ ಫೆಬ್ರವರಿಯಲ್ಲಿ ಬಿಡುಗಡೆಯಾದ ಮಹೀಂದ್ರ XUV300 ಕಾರು ಕಾಂಪಾಕ್ಟ್ SUV ಕಾರುಗಳ ಪೈಕಿ ಗಾತ್ರದಲ್ಲಿ ಕೊಂಚ ದೊಡ್ಡದಿದೆ. ಜೊತೆಗೆ ಹೆಚ್ಚು ಬಲಿಷ್ಠವಾಗಿದೆ. ಆದರೆ  ವೆನ್ಯೂ ಕಾರಿಗಿಂತ ಬೆಲೆ ಜಾಸ್ತಿ.  ಮಹೀಂದ್ರ SUV ಕಾರುಗಳ ಪೈಕಿ ಮಹೀಂದ್ರ XUV300 ಅತೀ ಹೆಚ್ಚು ಮಾರಾಟವಾಗೋ ಮೂಲಕ ದಾಖಲೆ ಬರೆದಿದೆ. 

ಜೀಪ್ ಕಂಪಾಸ್ ಅಪ್‌ಗ್ರೇಡ್ ಹಾಗೂ ಲಿಮಿಟೆಡ್ ಎಡಿಶನ್ ಟ್ರೈಲ್‍‌ವಾಕ್ ಬಿಡುಗಡೆ ಮಾಡಿತ್ತು. ಆದರೆ ಭಾರತದಲ್ಲಿ ನಿರೀಕ್ಷಿತ ಯಶಸ್ಸು  ಕಂಡಿಲ್ಲ. ಇದೀಗ 2020ರಲ್ಲಿ ಬಿಡುಗಡೆಯಾಗುವ ಕಾರಿನ ಮೇಲೆ ಗ್ರಾಹಕರ ಕಣ್ಣು ನೆಟ್ಟಿದೆ.