ಮುಂಬೈ(ಜ.12): ಭಾರತದ ಉದ್ಯಮಿ ರತನ್ ಟಾಟಾ ವಿಶ್ವದ ಶ್ರೀಮಂತರ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ. ರತನ್ ಟಾಟಾ ಒಡೆತನದ ಟಾಟಾ ಮೋಟಾರ್ಸ್ ದೇಶ ವಿದೇಶಗಳಲ್ಲಿ ಮಾರುಕಟ್ಟೆ ಹೊಂದಿದೆ. ಟಾಟಾ ಕಾರು, ಲಾರಿ, ಬಸ್‌ ಸೇರಿದಂತೆ ಎಲ್ಲಾ ರೀತಿಯ ವಾಹನಗಳೂ ಭಾರಿ ಜನಪ್ರಿಯವಾಗಿದೆ. ವಿದೇಶದ ಲ್ಯಾಂಡ್ ರೋವರ್ ರೇಂಜ್ ರೋವರ್ ಹಾಗೂ ಜಾಗ್ವಾರ್ ಕಂಪನಿಯನ್ನ ಖರೀದಿಸಿರುವ ಟಾಟಾ ಗ್ರೂಪ್ ವಿಶ್ವದ ಅತೀ ದೊಡ್ಡ ಕಂಪೆನಿ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.

ಟಾಟಾ ಗ್ರೂಪ್ ಆಫ್ ಕಂಪನಿ ಒಡೆಯ ರತನ್ ಟಾಟಾ ಯಾವ ಕಾರು ಬಳಸುತ್ತಾರೆ ಅನ್ನೋ ಕುತೂಹಲ ಹಲವರಲ್ಲಿದೆ. ರತನ್ ಟಾಟಾ ಬಳಿ ತಮ್ಮದೆ ಒಡೆತನದ ಕಾರುಗಳ ಜೊತೆಗೆ ಇತರ ದುಬಾರಿಗಳು ಇವೆ. ಇಲ್ಲಿದೆ ರತನ್ ಟಾಟಾ ಬಳಸೋ ಕಾರುಗಳ ವಿವರ.

ಟಾಟಾ ಇಂಡಿಗೋ ಮರಿನಾ
ಟಾಟಾ ನೆಕ್ಸಾನ್
ಫೆರಾರಿ ಕ್ಯಾಲಿಫೋರ್ನಿಯಾ
ಹೊಂಡಾ ಸಿವಿಕ್
ಮರ್ಸಡಿಸ್ ಬೆಂಜ್ 500SL
ಲ್ಯಾಂಡ್ ರೋವರ್ ಫ್ರಿಲ್ಯಾಂಡರ್
ಮರ್ಸಡಿಸ್ ಬೆಂಜ್ W124
ಕ್ಯಾಡಲಾಕ್ XLR
ಕ್ರಿಸ್ಲರ್ ಸೆಬ್ರಿಂಗ್