ಮುಂಬೈ(ನ.04): ಉದ್ಯಮಿ ಮುಕೇಶ್ ಅಂಬಾನಿ ಭಾರತದ ಮಾತ್ರವಲ್ಲ, ವಿಶ್ವದ ಶ್ರೀಮಂತ ಉದ್ಯಮಿ. ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿಗೆ ಅಗ್ರಸ್ಥಾನವಿದೆ. ನಿಮಿಷಕ್ಕೆ ಕೋಟಿ ಕೋಟಿ ಆದಾಯಗಳಿಸೋ ಮುಕೇಶ್ ಅಂಬಾನಿ ಹಾಗೂ ಕುಟುಂಬಕ್ಕೆ Z+ ಭದ್ರತೆ ನೀಡಲಾಗಿದೆ.

ಅಂಬಾನಿ ರಸ್ತೆ ಮೂಲಕ ಎಲ್ಲೇ ಪ್ರಯಾಣ ಮಾಡುವಾಗ ಈ ಬಾಡಿಗಾರ್ಡ್ ಅಂಬಾನಿಯ ಕಾರಿನ ಸುತ್ತ ಸುತ್ತುವರೆದಿರುತ್ತಾರೆ. ವಿಶೇಷ ಅಂದರೆ ಅಂಬಾನಿ ಬಾಡಿಗಾರ್ಡ್ಸ್ ಬಳಸೋ ಕಾರು BMW X5.ಇದು ದುಬಾರಿ SUV ಕಾರು.

ಮುಕೇಶ್ ಅಂಬಾನಿ ಗರಿಷ್ಠ ಸುರಕ್ಷತೆಯ ಮರ್ಸಡೀಸ್ ಬೆಂಜ್ ಎಸ್ ಕ್ಲಾಸ್ ಹಾಗೂ BMW 7 ಸೀರಿಸ್ ಕಾರು ಬಳಸುತ್ತಾರೆ. ಜೊತೆಗೆ  Z+ ಭದ್ರತೆ ಕೂಡ ಇದೆ. ಅಂಬಾನಿಗೆ Z+ ಭದದ್ರತೆ ನೀಡೋ ಪೊಲೀಸರು ಇದೇ BMW X5 ಕಾರಿನಲ್ಲಿ ಎಸ್ಕಾರ್ಟ್ ಮಾಡುತ್ತಾರೆ.

ಈ BMW X5 ಕಾರನ್ನ ಅಂಬಾನಿ ಖರೀದಿಸಿ ತಮಗೆ ಭದ್ರತೆ ನೀಡೋ ಪೊಲೀಸರಿಗೆ ನೀಡಿದ್ದಾರೆ. ಈ ಕಾರಿನ ಬೆಲೆ 70 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 3.0 ಲೀಟರ್ ಇನ್‌ಲೈನ್ 6 ಸಿಲಿಂಡರ್ ಎಂಜಿನ್ ಹೊಂದಿದೆ. 258 bhp ಪವರ್ ಹಾಗೂ 560nm ಟಾರ್ಕ್ ಉತ್ಪಾದಿಸುತ್ತೆ. ಈ ಶಕ್ತಿಶಾಲಿ ಕಾರು ಅಂಬಾನಿಗೆ ಎಸ್ಕಾರ್ಟ್ ಮಾಡುತ್ತೆ.