Asianet Suvarna News Asianet Suvarna News

ಆಕರ್ಷಕ ಫೀಚರ್ಸ್, ಐಷಾರಾಮಿ ಸ್ಪೋರ್ಟ್ ಸೆಡಾನ್ BMW 3 ಸೀರಿಸ್ ಕಾರು ಲಾಂಚ್!

ಮೊಬೈಲ್‌ನಲ್ಲಿರುವ ಫೀಚರ್ಸ್‌ಗಳೆಲ್ಲಾ ಈಗ ಕಾರಿನಲ್ಲೂ ಲಭ್ಯ. ಮೊಬೈಲ್ ಮೂಲಕವೇ ಕಾರನ್ನು ಕಂಟ್ರೋಲ್ ಮಾಡಬಲ್ಲ, ಆಧುನಿಕ ತಂತ್ರಜ್ಞಾನ ಹಾಗೂ ಐಷಾರಾಮಿ BMW 3 ಸೀರಿಸ್ ಸ್ಪೋರ್ಟ್ ಸೆಡಾನ್ ಕಾರು ಬಿಡುಗಡೆಯಾಗಿದೆ. ಈ ನೂತನ ಕಾರಿನ ಹೆಚ್ಚಿನ ವಿವರ ಇಲ್ಲಿದೆ.

BMW 3 Series sports sedan launched comes with voice recognition tool
Author
Bengaluru, First Published Aug 24, 2019, 1:44 PM IST

ದೆಹಲಿ(ಆ.24):  ಹೊಸ ಬಿಎಂಡಬ್ಲ್ಯೂ 3 ಸೀರೀಸ್‌ ಸೆಡಾನ್‌ ಕಾರಿನ ಡ್ರೈವಿಂಗ್‌ ಸೀಟ್‌ನಲ್ಲಿ ಕುಳಿತು ಹೀಗೆ ಹೇಳಿದರೆ ಸಾಕು ಹಾಡು ಪ್ರಸಾರವಾಗುತ್ತದೆ. ಮೊಬೈಲ್‌ನಲ್ಲಿ ಲಭ್ಯವಿದ್ದ ಗೆಶ್ಚರ್‌ ಕಂಟ್ರೋಲ್‌, ವರ್ಚುವಲ್‌ ಅಸಿಸ್ಟೆಂಟ್‌ ಫೀಚರ್‌ಗಳೆಲ್ಲಾ ಕಾರ್‌ಗಳಲ್ಲೂ ಬರತೊಡಗಿವೆ. ಈಗ ಐಷಾರಾಮಿ ಕಾರು ತಯಾರಿಕಾ ಕಂಪನಿಯಾದ ಬಿಎಂಡಬ್ಲ್ಯೂ ತಾವೂ ಒಂದು ಕೈನೋಡಿಯೇ ಬಿಡೋಣ ಅಂತ ಹೇಳಿ ಸದ್ಯ ಬಿಡುಗಡೆ ಮಾಡಿರುವ ಬಿಎಂಡಬ್ಲ್ಯೂ 3 ಸೀರೀಸ್‌ನಲ್ಲಿ ಇಂಥಾ ಅನೇಕ ಫೀಚರ್‌ಗಳನ್ನು ತಂದಿದ್ದಾರೆ. ಈ ಕಾರಿನ ರಿವರ್ಸ್‌ ಅಸಿಸ್ಟೆಂಟ್‌, ಪಾರ್ಕಿಂಗ್‌ ಅಸಿಸ್ಟೆಂಟ್‌ ಫೀಚರ್‌ಗಳು ಈ ಕಾರಿನ ಹೆಗ್ಗಳಿಕೆ. ರಿವರ್ಸ್‌ ಅಸಿಸ್ಟೆಂಟ್‌ ಆಯ್ಕೆ ಒತ್ತಿದರೆ ಸುಮಾರು 50 ಮೀಗಳಷ್ಟುದೂರ ನೀವು ಸ್ಟೇರಿಂಗ್‌ ಮುಟ್ಟದೆಯೇ ಕಾರು ರಿವರ್ಸ್‌ ಹೋಗುತ್ತದೆ. ಪಾರ್ಕಿಂಗ್‌ ಅಸಿಸ್ಟೆಂಟ್‌ ಆಯ್ಕೆ ಒತ್ತಿದರೆ ತನ್ನಿಂತಾನೇ ಪಾರ್ಕಿಂಗ್‌ ಜಾಗದಲ್ಲಿ ನಿಲ್ಲುತ್ತದೆ.

ಇದನ್ನೂ ಓದಿ: ನ್ಯೂಜನರೇಶನ್ BMW X5 ಕಾರು ಬಿಡುಗಡೆಗೆ!

ಈ ಹೊಚ್ಚ ಹೊಸ ಐಷಾರಾಮಿ ಸ್ಪೋಟ್ಸ್‌ರ್‍ ಸೆಡಾನ್‌ ಬಿಎಂಡಬ್ಲ್ಯೂ 3 ಸೀರೀಸ್‌ ಕಾರು ಮೂರು ಮಾದರಿಯಲ್ಲಿ ಲಭ್ಯ. ಅದರಲ್ಲಿ ಎರಡು ಡೀಸೆಲ್‌ ಇಂಜಿನ್‌ಗಳು. 2 ಲೀಟರ್‌ನ 4 ಸಿಲಿಂಡರ್‌ ಇಂಜಿನ್‌ ಹೊಂದಿರುವ ಕಾರು 6.8 ಸೆಕೆಂಡಿನಲ್ಲೇ ಗಂಟೆಗೆ ನೂರು ಕಿಮೀ ವೇಗ ತಲುಪಬಲ್ಲದು. 2 ಲೀ 4 ಸಿಲಿಂಡರ್‌ ಪೆಟ್ರೋಲ್‌ ಇಂಜಿನ್‌ ಕಾರು ಗಂಟೆಗೆ ನೂರು ಕಿಮೀ ವೇಗ ತಲುಪಲು ತೆಗೆದುಕೊಳ್ಳುವ ಸಮಯ ಕೇವಲ 5.8 ಸೆಕೆಂಡುಗಳು.

ಇದನ್ನೂ ಓದಿ: BMW ಕಾರು ಗಿಫ್ಟ್ ನೀಡಿದ್ರೂ ಪೋಷಕರಿಗೆ ತಪ್ಪಲಿಲ್ಲ ತಲೆನೋವು!

ಬಿಎಂಡಬ್ಲ್ಯೂ ಎಂದರೆ ಅದರ ಹೆಸರಲ್ಲೇ ಒಂದು ತೂಕ ಇದೆ. ಅದಕ್ಕೆ ತಕ್ಕಂತೆ ಮೂರು ಮಾದರಿಯ ಕಾರುಗಳ ಬೆಲೆ ಇಲ್ಲಿದೆ. ಈ ಮೂರರಲ್ಲಿ ಮೊದಲೆರಡು ಡೀಸೆಲ್‌ ಇಂಜಿನ್‌ ಕಾರುಗಳು.

ಬಿಎಂಡಬ್ಲ್ಯೂ 320ಡಿ ಸ್ಪೋರ್ಟ್‌- 41.40 ಲಕ್ಷ
ಬಿಎಂಡಬ್ಲ್ಯೂ 320ಡಿ ಲಕ್ಸುರಿ ಲೈನ್‌- 46.90 ಲಕ್ಷ
ಬಿಎಂಡಬ್ಲ್ಯೂ 330ಐ ಎಂ ಸ್ಪೋರ್ಟ್‌- 47.90 ಲಕ್ಷ

ಈ ಕಾರನ್ನು ಬಿಡುಗಡೆ ಮಾಡಿದ್ದು ಬಿಎಂಡಬ್ಲ್ಯೂ ಇಂಡಿಯಾದ ಅಧ್ಯಕ್ಷ, ಸಿಇಓ ರುದ್ರತೇಜ್‌ ಸಿಂಗ್‌. ಒಂದು ತಿಂಗಳ ಮೊದಲು ಬಿಎಂಡಬ್ಲ್ಯೂ ಸಿಇಓ ಸ್ಥಾನ ವಹಿಸಿದ ಅವರು ತಮ್ಮ ಮೊದಲ ಕಾರು ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ‘ಬಿಎಂಡಬ್ಲ್ಯೂ 3 ಸೀರೀಸ್‌ ಕಾರು ಬಿಎಂಡಬ್ಲ್ಯೂ ಸಂಸ್ಥೆಯ ಹೃದಯ ಮತ್ತು ಆತ್ಮ ಇದ್ದಂತೆ. ಕಳೆದ ನಾಲ್ಕು ದಶಕಗಳಿಂದ 3 ಕಾರು ದೇಶದ ಜನರಿಗೆ ಅದ್ಭುತ ಡ್ರೈವಿಂಗ್‌ ಅನುಭವ ಒದಗಿಸುತ್ತಿದೆ. ಈಗ ಹೊಚ್ಚ ಹೊಸ ತಂತ್ರಜ್ಞಾನದ ಜೊತೆ ಬಿಎಂಡಬ್ಲ್ಯೂ 3 ಬಿಡುಗಡೆ ಮಾಡಲು ಸಂತೋಷವಾಗುತ್ತಿದೆ’ ಎಂದರು.

Follow Us:
Download App:
  • android
  • ios