ನಿಲ್ಲಿಸಿದ್ದ ಬೈಕ್‌ಗೆ ಆಕಸ್ಮಿಕ ಬೆಂಕಿ -ಆತಂಕದಲ್ಲಿ ಹುಬ್ಬಳ್ಳಿ ಜನ!
ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್‌ಗೆ ದಿಢೀರ್ ಬೆಂಕಿ ಹೊತ್ತಿಕೊಂಡು ಉರಿದು ಹೋಗಿದೆ. ಬೈಕ್‌ಗೆ ದಿಢೀರ್ ಬೆಂಕಿ ಹತ್ತಿಕೊಳ್ಳಲು ಕಾರಣವೇನು? ಸ್ಥಳೀಯರು ಹೇಳುವುದೇನು? ಇಲ್ಲಿದೆ ವಿವರ.
ಹುಬ್ಭಳ್ಳಿ(ಏ.09): ಉರಿ ಬಿಸಿಲು, ತಾಪಮಾನ ಏರಿಕೆಯಿಂದ ಜನ ಜೀವನ ದುಸ್ತರವಾಗುತ್ತಿದೆ. ಇದರೊಂದಿಗೆ ವಾಹನಗಳು ಅಪಾಯದ ಸೂಚನೆ ನೀಡುತ್ತಿದೆ. ಬಿಸಿಲಿನ ಬೇಗೆಯಲ್ಲಿ ನಿಲ್ಲಿಸಿದ್ದ ವಾಹನಗಳು ಬೆಂಕಿಗೆ ಆಹುತಿಯಾಗುತ್ತಿದೆ. ಇದೀಗ ಹುಬ್ಬಳ್ಳಿಯ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.
ಇದನ್ನೂ ಓದಿ: ಏರ್ ಶೋ ಅಗ್ನಿ ಅವಘಡ: ಕಾರು ಕಳೆದುಕೊಂಡವರಿಗೆ ಚೆಕ್ ವಿತರಿಸಿದ ಗೃಹ ಸಚಿವ!
ಗಣೇಶ್ ಪೇಟೇ ಸರ್ಕಲ್ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಸವಾರ ಬೈಕ್ ನಿಲ್ಲಿಸಿ ಕಾರ್ಯನಿಮಿತ್ತ ತೆರಳಿದ್ದ. ಈ ವೇಳೆ ಬೈಕ್‌ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಆದರೆ ಪರಿಸ್ಥಿತಿ ನಿಯಂತ್ರಣ ಮೀರಿಸಿತ್ತು. ಹೀಗಾಗಿ ಸಂಪೂರ್ಣ ಬೈಕ್ ಸುಟ್ಟು ಕರಕಲಾಗಿದೆ.
"
ಇದನ್ನೂ ಓದಿ: ಏರೋ ಇಂಡಿಯಾ 2019: ಬೆಂಕಿಯಲ್ಲಿ ಬೆಂದ ಕಾರು - ಇನ್ಶೂರೆನ್ಸ್ ಕಂಪನಿ ಹೇಳೊದೇನು?
ಬೈಕ್‌ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿರುವುದು ಇದೀಗ ಹುಬ್ಬಳ್ಳಿ ಜನರ ಆತಂಕಕ್ಕೆ ಕಾರಣವಾಗಿದೆ. ಪೆಟ್ರೋಲ್ ಲೀಕ್ ಆದ ಕಾರಣ ಬೆಂಕಿ ಅನಾಹುತ ಸಂಭಿವಿಸಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಈ ಸಂಬಂಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.