ಏರ್ ಶೋ ಅಗ್ನಿ ಅವಘಡ: ಕಾರು ಕಳೆದುಕೊಂಡವರಿಗೆ ಚೆಕ್ ವಿತರಿಸಿದ ಗೃಹ ಸಚಿವ!

ಏರೋ ಇಂಡಿಯಾ ಶೋನಲ್ಲಿ ಬೆಂಕಿ ಅವಘಡಕ್ಕೆ 230 ಕಾರುಗಳು ಸುಟ್ಟು ಭಸ್ಮವಾಗಿದೆ. ಕಾರು ಕಳೆದುಕೊಂಡವರು ನೋವು ಹೇಳತೀರದು. ಸುಟ್ಟ ಕಾರಿನ ವಿಮೆ ಮೊತ್ತ ಬಿಡುಗಡೆಯಾಗಿದೆ. ಗೃಹ ಸಚಿವ ಎಂ.ಬಿ.ಪಾಟೀಲ್ ಚೆಕ್ ವಿತರಿಸಿದ್ದಾರೆ. ಇಲ್ಲಿದೆ ಹೆಚ್ಚಿನ ಮಾಹಿತಿ.

Aero India car parking fire Home minster MB patil delivered insurance check

ಬೆಂಗಳೂರು(ಮಾ.05): ಏರೋ ಇಂಡಿಯಾ ಶೋನಲ್ಲಿ ನಡೆದ ಬೆಂಕಿ ಅವಘಡದಲ್ಲಿ 230 ಕಾರುಗಳು ಸುಟ್ಟು ಕರಕಲಾಗಿತ್ತು. ಪಾರ್ಕಿಂಗ್ ಸ್ಥಳದಲ್ಲಿ ಹೊತ್ತಿಕೊಂಡ ಬೆಂಕಿಗೆ ನಿಲ್ಲಿಸಿದ್ದ ಕಾರುಗಳು ಭಸ್ಮವಾಗಿತ್ತು. ಕಾರು ಕಳೆದುಕೊಂಡವರಿಗೆ ಇದೀಗ ರಾಜ್ಯ ಗೃಹ ಸಚಿವ ಎಂ.ಬಿ.ಪಾಟೀಲ್ ವಿಮಾ ಮೊತ್ತವನ್ನು ವಿತರಿಸಿದ್ದಾರೆ.ವಿಧಾನಸೌಧದಲ್ಲಿ ಎಂ.ಬಿ.ಪಾಟೀಲ್ ಸುದ್ದಿಗೋಷ್ಠಿ ನಡೆಸಿ ಚೆಕ್ ವಿತರಿಸಿದರು. ಈ ದುರಂತ ಆದಾಗ ತಕ್ಷಣ,  ಇನ್ಶುರನ್ಸ್ ಕಂಪನಿ, ಆರ್ ಟಿ ಓ ಜೊತೆ ಮಾತಾಡಿ ಅಲ್ಲಿಯೆ ಕೌಂಟರ್ ತೆರೆದು ಕಾರು ಕಳೆದುಕೊಂಡವರಿಗೆ ನೆರವು ನೀಡಲಾಗಿತ್ತು ಎಂದು ಪಾಟೀಲ್ ಹೇಳಿದ್ದಾರೆ. 

ಇದನ್ನೂ ಓದಿ: ಏರೋ ಇಂಡಿಯಾ 2019: ಬೆಂಕಿಯಲ್ಲಿ ಬೆಂದ ಕಾರು - ಇನ್ಶೂರೆನ್ಸ್ ಕಂಪನಿ ಹೇಳೊದೇನು?

ಸುದ್ದೀಗೋಷ್ಠಿಯಲ್ಲಿ ಕಾರು ಕಳೆದುಕೊಂಡ ಮೂವರಿಗೆ ಸಾಂಕೇತಿಕವಾಗಿ ಚೆಕ್ ವಿತರಿಸಿದರು. ಕೋಲ್ಕತಾ ಮೂಲದ  ಮಾರುತಿ ಸ್ವಿಫ್ಟಾ ಕಾರು ಮಾಲೀಕರಿಗೆ ಓರಿಯೆಂಟಲ್ ಇನ್ಶುರೆನ್ಸ್ ಕಂಪೆನಿಯ 6 ಲಕ್ಷ 92 ಸಾವಿರ ರೂಪಾಯಿ ಚೆಕ್‌ನ್ನು ಪಾಟೀಲ್ ವಿತರಿಸಿದರು. ಒಡಿಸ್ಸಾ ಮೂಲದ ರಮಾಕಾಂತ್ ಅವರಿಗೆ 15 ಲಕ್ಷ 9 ಸಾವಿರ ರೂಪಾಯಿ ಹಾಗೂ  ಚಿತ್ರದುರ್ಗ ಮೂಲದ ಗಿರಿಜಮ್ಮ ಅವರಿಗೆ 3 ಲಕ್ಷ 95 ಸಾವಿರ ರೂಪಾಯಿ ಇನ್ಶೂರೆನ್ಸ್ ಕಂಪನಿ ಮೊತ್ತವನ್ನು ಚೆಕ್ ಮೂಲಕ ವಿತರಿಸಿದರು. 

ಇದನ್ನೂ ಓದಿ: ಪಾರ್ಕಿಂಗ್ ದುರಂತ: 158 ಕಾರು ಮಾಲೀಕರಿಗೆ ಸಿಗುತ್ತಿಲ್ಲ ತಮ್ಮ ಕಾರಿನ ಗುರುತು!

ಏರೋ ಇಂಡಿಯಾ ಶೋನಲ್ಲಿ  ಫೆ.23ರಂದು ಸಾರ್ವಜನಿಕರಿಗಾಗಿ ವೈಮಾನಿಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.  ಹೆಚ್ಚಿನ ಸಂಖ್ಯೆಲ್ಲಿ ಸಾರ್ವಜನಿಕರು ಆಗಮಿಸಿದ್ದರು. ಹೀಗಾಗಿ ಗೇಟ್ ನಂ.5ರಲ್ಲಿ ಸಾರ್ವಜನಿಕರ ಕಾರು ಪಾರ್ಕಿಂಗ್‌ಗೆ ಅವಕಾಶ ನೀಡಲಾಗಿತ್ತು. ಆದರೆ ಬಯಲು ಪ್ರದೇಶದಲ್ಲಿನ  ಏಕಾಏಕಿ ಬೆಂಕಿ ಹತ್ತಿಕೊಂಡು ಕಾರುಗಳು ಸುಟ್ಟು ಹೋಗಿತ್ತು. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

Latest Videos
Follow Us:
Download App:
  • android
  • ios