ಬೆಂಗಳೂರಿನ ಟೊಯೊಟಾ ಘಟಕದಲ್ಲಿ ಮಾರುತಿ ಬ್ರೆಜಾ ಕಾರು ಉತ್ಪಾದನೆ!
ಬೆಂಗಳೂರಿನ ಟೊಯೊಟಾ ಕಾರು ಘಟಕದಲ್ಲಿ ಮಾರುತಿ ಬ್ರೆಜಾ ಕಾರು ನಿರ್ಮಾಣವಾಗಲಿದೆ. ಬೆಂಗಳೂರಿನಲ್ಲೇ ಕಾರು ನಿರ್ಮಾಣವಾಗುವುದರಿಂದ ಬೆಲೆ ಕಡಿಮೆಯಾಗಲಿದೆಯಾ? ಇಲ್ಲಿದೆ ಹೆಚ್ಚಿನ ವಿವರ.
ಬೆಂಗಳೂರು(ಏ.28): ಜಪಾನ್ ಮೂಲದ ಮಾರುತಿ ಸುಜುಕಿ ಹಾಗೂ ಟೊಯೊಟಾ ಕಾರು ಕಂಪನಿ ಕ್ರಾಸ್ ಬ್ಯಾಡ್ಜಿಂಗ್ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಪ್ರಕಾರ, ಮಾರುತಿ ಸುಜುಕಿ ಸಂಸ್ಥೆ ಆಯ್ದ ಕಾರುಗಳನ್ನು ಟೊಯೊಟಾ ನಿರ್ಮಾಣ ಮಾಡಿ ಮಾರಾಟ ಮಾಡಲಿದೆ. ಈಗಾಗಲೇ ಮಾರುತಿ ಬಲೆನೊ ಕಾರು, ಟೊಯೊಟಾ ಗ್ಲಾಂಝಾ ಕಾರಾಗಿ ಬಿಡುಗಡೆಯಾಗುತ್ತಿದೆ. ಇದೀಗ ಮಾರುತಿ ಬ್ರೆಜಾ ಕಾರು ಟೊಯೊಟಾ ಕಾರಾಗಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಹ್ಯುಂಡೈ ವೆನ್ಯೂ SUV ಕಾರು- ಬುಕಿಂಗ್ ದಿನಾಂಕ ಪ್ರಕಟ!
ವಿಶೇಷ ಅಂದರೆ ಟೊಯೊಟಾ ಬಿಡುಗಡೆ ಮಾಡಲಿರುವ ಮಾರುತಿ ಬ್ರೆಜಾ ಕಾರು ಉತ್ಪಾದನೆ ಬೆಂಗಳೂರಿನಲ್ಲಿ ಆಗಲಿದೆ. ಬಿಡದಿ ಸಮೀಪವಿರುವ ಟೊಯೊಟಾ ಕಿರ್ಲೋಸ್ಕರ್ ಉತ್ಪಾದನಾ ಘಟಕದಲ್ಲಿ ಈ ಕಾರು ನಿರ್ಮಾಣವಾಗಲಿದೆ. 2022ರಿಂದ ಟೊಯೊಟಾ ಬ್ರೆಜಾ ಕಾರು ಉತ್ಪಾದನೆ ಆರಂಭಿಸಲಿದೆ.
ಇದನ್ನೂ ಓದಿ: ಅಕ್ಷಯ್ ಕುಮಾರ್ to ಜಾಕ್ವೆಲಿನ್: ಸೆಲೆಬ್ರೆಟಿಗಳಿಗೆ ಜೀಪ್ ಮೇಲೆ ಪ್ರೀತಿ ಯಾಕೆ?
ಮಾರುತಿ ಬ್ರೆಜಾ ಕಾರು 2016ರಲ್ಲಿ ಬಿಡುಗಡೆಯಾಗಿದೆ. ಇಲ್ಲೀವರೆಗೆ ಬರೋಬ್ಬರಿ 4 ಲಕ್ಷ ಕಾರುಗಳು ಮಾರಾಟವಾಗಿದೆ. SUV ವಿಭಾಗದಲ್ಲಿ ಗರಿಷ್ಠ ಮಾರಾಟವಾದ ಕಾರು ಅನ್ನೋ ಹೆಗ್ಗಳಿಕೆಗೆ ಮಾರುತಿ ಬ್ರೆಜಾ ಕಾರು ಪಾತ್ರವಾಗಿದೆ. ಮಾರುತಿ ಬ್ರೆಜಾ ಕಾರು 1.3 ಲೀಟರ್, 4 ಸಿಲಿಂಡರ್, ಡೀಸೆಲ್ ಎಂಜಿನ್ ಹೊಂದಿದ್ದು, 90 bhp ಪವರ್ ಹಾಗೂ 200 Nm ಪೀಕ್ ಟಾರ್ಕ್ ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ. ಇನ್ನು ನೂತನ ಟೊಯೊಟಾ ಬ್ರೆಜಾ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಬಹಿರಂಗವಾಗಿಲ್ಲ.