ನವದೆಹಲಿ(ಅ.06): ಬೆನೆಲ್ಲಿ ಬೈಕ್ ಪ್ರಿಯರಿಗೆ ಸಿಹಿ ಸುದ್ದಿ. ಇದೀಗ ಬೆನೆಲ್ಲಿ ಎಂಟ್ರಿ ಲೆವೆಲ್ ಬೈಕ್ ಬಿಡುಗಡೆ ಮಾಡಿದೆ. ಬೆನೆಲ್ಲಿ ಲಿಯೊನ್ಸಿನೊ 250 ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಬೆನೆಲ್ಲಿ TNT25 ಬೈಕ್ 2018ರಲ್ಲಿ ನಿರ್ಮಾಣ ಸ್ಥಗಿತಗೊಂಡಿತ್ತು. ಇದರ ಬದಲಾಗಿ ಬೆನೆಲ್ಲಿ ಲಿಯೊನ್ಸಿನೊ 250 ಬೈಕ್ ಲಾಂಚ್ ಆಗಿದೆ.

ಇದನ್ನೂ ಓದಿ: ಶೀಘ್ರದಲ್ಲೇ ಜಾವಾದಿಂದ ಮತ್ತೆ 3 ಹೊಸ ಬೈಕ್ ಬಿಡುಗಡೆ!

ಬೆನೆಲ್ಲಿ ಲಿಯೊನ್ಸಿನೊ 250 ಬೈಕ್ ಹಾಗೂ 500 ಬೈಕ್‌ ಲುಕ್‌ನಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. 12.5 li ಇಂಧನ ಟ್ಯಾಂಕ್ ಹೊಂದಿರುವ ನೂತನ ಬೈಕ್,  280mm ಫ್ರಂಟ್ ಡಿಸ್ಕ್ ಹಾಗೂ 240mm ರೇರ್ ಡಿಸ್ಕ್ ಹೊಂದಿದೆ. ಡ್ಯುಯೆಲ್ ಚಾನೆಲ್ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ.

ಇದನ್ನೂ ಓದಿ: ಲೈಸೆನ್ಸ್, ದಾಖಲೆ ಯಾವುದೂ ಬೇಡ; ಬಿಡುಗಡೆಯಾಗಿದೆ 35,000 ರೂಪಾಯಿ ಬೈಕ್!

ಬೆನೆಲ್ಲಿ ಲಿಯೊನ್ಸಿನೊ 250 ಬೈಕ್ 249cc, ಲಿಕ್ಪಿಡ್ ಕೂಲ್‌ಡ್,ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 25.8PS ಗರಿಷ್ಠ ಪವರ್ ಹಾಗೂ 21.2Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ನೂತನ ಬೈಕ್ ಬೆಲೆ 2.50 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಇದು ಬೆನೆಲ್ಲಿ ಬೈಕ್‌ಗಳ ಪೈಕಿ ಅತ್ಯಂತ ಕಡಿಮೆ ಬೆಲೆ ಎಂಟ್ರಿ ಲೆವೆಲ್ ಬೈಕಿ ಆಗಿದೆ.