Asianet Suvarna News Asianet Suvarna News

ಶೀಘ್ರದಲ್ಲಿ ಬಜಾಜ್ ಪಲ್ಸರ್ 150 ಸ್ಪೆಷಲ್ ಎಡಿಶನ್ ಬಿಡುಗಡೆ!

ಬಜಾಜಾ ಆಟೋ ಕಂಪೆನಿ ಭಾರತದಲ್ಲಿ ಪಲ್ಸಾರ್ 150 ಬೈಕ್ ಬಿಡುಗಡೆಗೆ ಸಜ್ಜಾಗಿದೆ. ಕೆಲ ಬದಲಾವಣೆ, ಹಲವು ಫೀಚರ್ಸ್‌ನೊಂದಿಗೆ ಪಲ್ಸಾಲ್ ಸ್ಪೆಷಲ್ 150 ಬಿಡುಗಡೆಯಾಗುತ್ತಿದೆ. ಇದರ ವಿಶೇಷತೆ, ಬೆಲೆ ಕುರಿತು ವಿವರ ಇಲ್ಲಿದೆ.

Bajaj Pulsar 150 limited edition will launch soon
Author
Bengaluru, First Published Nov 3, 2018, 7:00 PM IST
  • Facebook
  • Twitter
  • Whatsapp

ಮುಂಬೈ(ನ.03): ಬಜಾಜ್ ಆಟೋ ಕಂಪೆನಿಯ ಪ್ರಸಿದ್ಧ ಪಲ್ಸರ್ ಬೈಕ್ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ಹಲವು ವಿಶೇಷತೆಗಳೊಂದಿಗೆ ಪಲ್ಸರ್ 150 ಸ್ಪೆಷಲ್ ಎಡಿಶನ್ ಬೈಕ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ನೂತನ ಪಲ್ಸರ್ ಬೈಕ್‌ನಲ್ಲಿ ವಿನ್ಯಾಸ ಹಾಗೂ ಕೆಲ ಬದಲಾವಣೆ ಮಾಡಲಾಗಿದೆ.

ಪೆಟ್ರೋಲ್ ಟ್ಯಾಂಕ್ ಮೇಲಿನ ಪಲ್ಸಾರ್ ಲೋಗೋ, ವೀಲ್ಹ್ ರಿಮ್ಸ್, ಸೆಂಟ್ರಲ್ ಪ್ಯಾನಲ್ ಹಾಗೂ 150 ಡೆಕಾಲ್ ಕೆಂಪು ಬಣ್ಣದಿಂದ ಕೂಡಿದೆ. ಹೊಸ ಬಣ್ಣದಿಂದ ಪಲ್ಸರ್ ಲುಕ್ ಬದಲಾಗಿದೆ. ಇದನ್ನ ಹೊರತು ಪಡಿಸಿದರೆ ಹೆಚ್ಚಿನ ಬದಲಾವಣೆಗಳಿಲ್ಲ.

ಎಂಜಿನ್‌ ಹಾಗೂ ಮೆಕಾನಿಕ್ ವಿಭಾಗದಲ್ಲಿ ಯಾವುದೇ ಬದಲಾವಣೆಗಳಿಲ್ಲ. 149 ಸಿಸಿ, ಸಿಂಗಲ್ ಸಿಲಿಂಡರ್, 14 ಬಿಹೆಚ್‌ಪಿ, 8000 ಆರ್‌ಪಿಎಂ, 13.4nm ಟಾರ್ಕ್ ಉತ್ಪಾದಿಸಲಿದೆ. 5 ಸ್ಪೀಡ್ ಗೇರ್ ಬಾಕ್ಸ್, ಫ್ರಂಟ್ ಹಾಗೂ ರೇರ್ ಡಿಸ್ಕ್ ಬ್ರೇಕ್ ಕೂಡ ಹೊಂದಿದೆ.

ಇದರ ಬೆಲೆ ಹಳೆ ಪಲ್ಸಾರ್ 150 ಬೈಕ್‌ಗಿಂತ ಸ್ವಲ್ಪ ದುಬಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರೋ ಪಲ್ಸಾರ್ 150 ಬೆಲೆ 66,086 ರೂಪಾಯಿ(ಎಕ್ಸ್ ಶೋ ರೂಂ). ಬಿಡುಗಡೆ ದಿನಾಂಕವನ್ನ ಕಂಪೆನಿ ಬಹಿರಂಗ ಪಡಿಸಿಲ್ಲ. 
 

Follow Us:
Download App:
  • android
  • ios