ಬೆಂಗಳೂರು(ಡಿ.13): ಬಜಾಜಾ ಡೊಮಿನಾರ್ ಬೈಕ್ ಖರೀದಿಸುವವರಿಗೆ ಇದೀಗ ಡೀಲರ್‌ಗಳು ಉಚಿತ ಜಾಕೆಟ್ ಆಫರ್ ಘೋಷಿಸಿದ್ದಾರೆ. 2019ರಿಂದ ನೂತನ ಡೊಮಿನಾರ್ ಬಿಡುಗಡೆಯಾಗಲಿದೆ. ಹೀಗಾಗಿ ಇದೀಗ 2018ರ ಡೊಮಿನಾರ್ ಬೈಕ್ ಸ್ಟಾಕ್ ಕ್ಲೀಯರ್‌ಗಾಗಿ ಉಚಿತ ಜಾಕೆಟ್ ಆಫರ್ ನೀಡಲಾಗಿದೆ.

ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವವರಿಗೆ ಇಲ್ಲಿದೆ 5 ಟಿಪ್ಸ್!

ಬರೋಬ್ಬಿರಿ 10,000 ರೂಪಾಯಿ ಮೌಲ್ಯದ ಜಾಕೆಟ್ ಉಚಿತವಾಗಿ ಪಡೆಯಬಹುದು. ಇದರ ಜೊತೆಗೆ ಈ ಹಿಂದೆ ಘೋಷಿಸಿದ್ದ 5 ವರ್ಷ ಡ್ಯಾಮೇಜ್ ವಿಮೆ, 5 ವರ್ಷ ವಾರೆಂಟ್ ಆಫರ್ ಡಿಸೆಂಬರ್ 31, 2018ರ ವರೆಗೆ ಮುಂದುವರಿಯಲಿದೆ.

ಇದನ್ನೂ ಓದಿ: ಗರಿಷ್ಠ ಮೈಲೇಜ್ ನೀಡುವ ಭಾರತದ ಟಾಪ್ 5 ಬೈಕ್!

ಕಳೆದೆರಡು ತಿಂಗಳಲ್ಲಿ ಬಜಾಜಾ ಡೊಮಿನಾರ್ 400 ಬೈಕ್  ಮಾರಾಟ ಕಡಿಮೆಯಾಗಿತ್ತು. ಹೀಗಾಗಿ ಮಾರಾಟ ಹೆಚ್ಚಿಸಲು ಹಲವು ಆಫರ್ ಘೋಷಿಸಿದೆ. ಇನ್ನು 2019ರಲ್ಲಿ ನೂತನ ಡೊಮಿನಾರ್ ಬೈಕ್ ಮಾರುಕಟ್ಟೆ ಪ್ರವೇಶಿಸುತ್ತಿದೆ. ಇದಕ್ಕೂ ಮೊದಲು ಈ ಹಿಂದಿನ ಡೊಮಿನಾರ್ ಬೈಕ್ ಮಾರಾಟ ಮಾಡಲು ಡೀಲರ್‌ಗಳು ಹೊಸ ಹೊಸ ಆಫರ್ ನೀಡಿದ್ದಾರೆ. ಬೆಂಗಳೂರಿನ ಕೆಲ ಡೀಲರ್‌ಗಳು ಈ ಆಫರ್ ಘೋಷಿಸಿದ್ದಾರೆ.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: