ಬೆಂಗಳೂರು(ಮಾ.22): ಅವನ್ ಮೋಟಾರ್ಸ್ ನೂತನ ಟ್ರೆಂಡ್ ಇ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಅವನ್ ಮೋಟಾರ್ಸ್ ಈಗಾಗಲೇ Xero ಹಾಗೂ Xero+ ಸ್ಕೂಟರ್ ಬಿಡುಗಡೆ ಮಾಡಿದೆ. ಇದೀಗ ಟ್ರೆಂಡ್ ಸ್ಕೂಟರ್ ಲಾಂಚ್ ಮಾಡಿದೆ. ನೂತನ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 56,900 ರೂಪಾಯಿ.

 

 

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ಅಲೋಯ್ ವೀಲ್ಹ್ -ಬೆಲೆ ಬಹಿರಂಗ!

ಬೇಸ್ ವೆರಿಯೆಂಟ್ ಬೆಲೆ 56,900 ರೂಪಾಯಿ. ಇನ್ನು ಟಾಪ್ ಮಾಡೆಲ್ ಬೆಲೆ 81,269 ರೂಪಾಯಿ. 16 ಇಂಚಿನ ಅಲೋಯ್ ವೀಲ್ಹ್, ಫ್ರಂಟ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ವಿಶೇಷತೆಗಳು ಈ ಸ್ಕೂಟರ್‌ನಲ್ಲಿದೆ. ಟ್ರೆಂಡ್ ಸ್ಕೂಟರ್‌ನಲ್ಲಿ ಎರಡು ಬ್ಯಾಟರಿ ಬಳಲಸಾಗಿದೆ. ಮೊದಲ ಬ್ಯಾಟರಿಯಿಂದ 60 ಕಿ.ಮೀ ಹಾಗೂ ಎರಡನೇ ಬ್ಯಾಟರಿ ಸೇರಿ ಒಟ್ಟು 110 ಕಿ.ಮೀ ರೇಂಜ್ ಪ್ರಯಾಣ ಮಾಡಬಹುದು. ಗರಿಷ್ಠ ವೇಗ 45KMPH. 

 

 

ಇದನ್ನೂ ಓದಿ: ಬೈಕ್-ಸ್ಕೂಟರ್ ಬದಲಾಯಿಸುತ್ತೀರಾ?- ಇಲ್ಲಿದೆ ಅತ್ಯುತ್ತಮ ಆಯ್ಕೆ!

ಪುಣೆ ಮೂಲದ ಅವನ್ ಮೋಟಾರ್ಸ್ ಕರ್ನಾಟಕ ಸೇರಿದಂತೆ 11 ರಾಜ್ಯಗಳಲ್ಲಿ ಅವನ್ ಮೋಟಾರ್ಸ್  ಡೀಲರ್‌ಶಿಪ್ ಹೊಂದಿದೆ. ಮಹಾರಾಷ್ಟ್ರದಲ್ಲೇ 30 ಡೀಲರ್‌ಶಿಪ್ ಹೊಂದಿದೆ. ಪ್ರತಿ ತಿಂಗಳು 1,000 ಸ್ಕೂಟರ್ ಮಾರಾಟ ಮಾಡುವ ಗುರಿ ಇಟ್ಟುಕೊಂಡಿದೆ.