ಭಾರತದಲ್ಲಿ ನಡೆಯಲಿರುವ ಆಟೋ ಎಕ್ಸ್ಪೋ 2020ಗೆ ಕೊರೊನಾ ಭೀತಿ!

ಫೆ.7 ರಿಂದ ಗ್ರೇಟರ್ ನೋಯ್ಡಾದಲ್ಲಿ ಮೋಟಾರು ವಾಹನಗಳ ಶೋ ನಡೆಯಲಿದೆ. ಭಾರತದಲ್ಲಿ ನಡೆಯಲಿರುವ ಅತೀ ದೊಡ್ಡ ಅಟೋ ಎಕ್ಸ್ಪೋಗೆ ವಿಶ್ವದ ಆಟೋಮೊಬೈಲ್ ಕಂಪನಿಗಳು ಭಾಗವಹಿಸುತ್ತಿವೆ. ಇದೀಗ ಈ ಮೋಟಾರು ಶೋಗೆ ಕೊರೊನಾವೈರಸ್‌ ಭೀತಿ ಶುರುವಾಗಿದೆ.

Auto expo 2020 Siam take all precautions measure to protect from corona virus

ನವದೆಹಲಿ(ಜ.31): 2020ರ ಅತೀ ದೊಡ್ಡ ಆಟೋ ಎಕ್ಸ್ಪೋಗೆ ಭಾರತ ಸಕಲ ತಯಾರಿ ನಡೆಸಿದೆ. ಫೆಬ್ರವರಿ 7 ರಿಂದ 12ರ ವರೆಗೆ ಗ್ರೇಟರ್ ನೋಯ್ಡಾದಲ್ಲಿ ಆಟೋ ಎಕ್ಸ್ಪೋ 2020 ನಡೆಯಲಿದೆ. ಗ್ರೇಟರ್ ನೋಯ್ಡಾದಲ್ಲಿ ನಡೆಯಲಿರುವ ಮೋಟಾರು ಶೋಗೆ ಕೊರೊನಾ ಭೀತಿ ಆವರಿಸಿದೆ. 

ಇದನ್ನೂ ಓದಿ: ಬರೋಬ್ಬರಿ 26 ವಾಹನ ಪರಿಚಯಿಸಲು ಸಜ್ಜಾದ ಟಾಟಾ ಮೋಟಾರ್ಸ್

ಈ ಬಾರಿಯ ಆಟೋ ಎಕ್ಸ್ಪೋದಲ್ಲಿ ಚೀನಾದ ಹಲವು ಆಟೋ ಕಂಪನಿಗಳು ಭಾಗವಹಿಸುತ್ತಿವೆ. ಸದ್ಯ ಚೀನಾ ಕೊರೊನಾವೈರಸ್‌ನಿಂದ ಬೆಚ್ಚಿ ಬಿದ್ದಿದೆ. ಹೀಗಾಗಿ ಚೀನಾದಿಂದ ಆಟೋ ಎಕ್ಸ್ಪೋಗೆ ಆಗಮಿಸುವವರಿಂದ ಕೊರೊನಾವೈರಸ್ ಹರಡುವ ಸಾಧ್ಯತೆ ಇದೆ. ಈ ಕುರಿತು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮಾನ್ಯುಫ್ಯಾಕ್ಟರ್ಸ್(SIAM) ಮುನ್ನೆಚ್ಚರಿಕೆ ವಹಿಸಿದೆ.

ಇದನ್ನೂ ಓದಿ: ರೆನಾಲ್ಟ್ ಕ್ವಿಡ್ ಎಲೆಕ್ಟ್ರಿಕ್, SUV ಕಾರು ಅನಾವರಣಕ್ಕೆ ರೆಡಿ!

SIAM ಈಗಾಗಲೇ ಆರೋಗ್ಯ ಸಚಿವರ ಜೊತೆ ಮಾತುಕತೆ ನಡೆಸಿದೆ. ಕೊರೊನಾವೈರಸ್ ಹರದಂತೆ ತಡೆಯಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಭಾರತದ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊರೊನಾವೈರಸ್ ಪರೀಕ್ಷೆ ನಡೆಸಲಾಗುತ್ತಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಪಾಸಿಟಿವ್ ಪತ್ತೆಯಾದ ವರದಿಯಾಗಿದೆ.

ಆಟೋ ಎಕ್ಸ್ಪೋಗೆ ಯಾವುದೇ ಸಮಸ್ಯೆ ಇಲ್ಲ. ಕೊರೊನಾವೈರಸ್‌ನಿಂದ ಆಟೋ ಎಕ್ಸ್ಪೋ ದೂರವಿಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಆತಂಕ ಬೇಡ ಎಂದು SIAM ಸ್ಪಷ್ಟಪಡಿಸಿದೆ.


 

Latest Videos
Follow Us:
Download App:
  • android
  • ios