ಗ್ರೇಟರ್ ನೋಯ್ಡಾ(ಫೆ.13): ಈ ಭಾರಿಯ ಆಟೋ ಎಕ್ಸ್ಪೋ 2020 ಸಾಕಷ್ಟು ಕುತೂಹಲಗಳ ಕೇಂದ್ರ ಬಿಂದುವಾಗಿತ್ತು. ಗರಿಷ್ಠ ವಾಹನಗಳು ಪ್ರದರ್ಶನಗೊಂಡಿವೆ. ಭಾರತದ ದಿಕ್ಕು ಬದಲಿಸಬಲ್ಲ ಎಲೆಕ್ಟ್ರಿಕ್ ವಾಹನಗಳು ಎಲ್ಲರ ಗಮನಸೆಳೆದಿದೆ. 108 ವಿವಿಧ ಕಂಪನಿಗಳು 352 ವಾಹನಗಳನ್ನು ಪ್ರದರ್ಶನಕ್ಕಿಟ್ಟಿದ್ದರು.

ಇದನ್ನೂ ಓದಿ: ಬೆಲೆ 6 ಲಕ್ಷ, ಚೀನಾದ R1 ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಅನಾವರಣ!

70 ವಾಹನಗಳು ಬಿಡುಗಡೆಯಾಗಿದೆ. 8 ದಿನದಲ್ಲಿ ಬರೋಬ್ಬರಿ 6.08 ಲಕ್ಷ ಮಂದಿ ಆಟೋ ಎಕ್ಸ್ಪೋ 2020 ವೀಕ್ಷಿಸಿದ್ದಾರೆ. 35 ಎಲೆಕ್ಟ್ರಿಕ್ ವಾಹನಗಳು ಹಾಗೂ 15 ಕಾನ್ಸೆಪ್ಟ್ ವಾಹನಗಳು ಅನಾವರಣಗೊಂಡಿದೆ. ಚೀನಾದ ಗ್ರೇಟ್ ವಾಲ್ ಮೋಟಾರ್ಸ್, ಹೈಮಾ ಹಾಗೂ ಒಲೆಕ್ಟ್ರಾ ಕಂಪನಿಗಳು ಇದೇ ಮೊದಲ ಬಾರಿಗೆ ದೆಹಲಿ ಆಟೋ ಎಕ್ಸ್ಪೋ 2020ರಲ್ಲಿ ಕಾಣಿಸಿಕೊಂಡಿತು.

ಇದನ್ನೂ ಓದಿ: ಭಾರತದಲ್ಲಿ ಅನಾವರಣಗೊಂಡಿತು ಚೀನಾ ಕಾರು, ಶುರುವಾಯ್ತು ದರ್ಬಾರು!

ಟೊಯೊಟಾ, ಹೊಂಡಾ, BMW, ಆಡಿ ಹಾಗೂ ದ್ವಿಚಕ್ರ ವಾಹನಗಳಾದ ಹೀರೋ  ಮೋಟಾರ್ ಕಾರ್ಪ್, ಬಜಾಜ್ ಅಟೋ ಮತ್ತು ಟಿವಿಎಸ್ ಈ ಬಾರಿಯ ಆಟೋ ಎಕ್ಸ್ಪೋ 2020 ಮೋಟಾರು ಶೋನಿಂದ ದೂರ ಉಳಿಯಿತು. ಕೆಲ ಚೀನಾ ಕಂಪನಿಗಳು ಹಾಗೂ ಅಧಿಕಾರಿಗಳು ಕೊರೋನಾ ವೈರಸ್ ಕಾರಣದಿಂದ  ಆಟೋ ಎಕ್ಸ್ಪೋ ಶೋನಿಂದ ದೂರ ಉಳಿದರು. 

ಇದನ್ನೂ ಓದಿ: ಅತ್ಯುತ್ತಮ ವಿನ್ಯಾಸದ ಮಾರುತಿ ಸುಜುಕಿ ಫ್ಯೂಚರೋ ಇ ಕಾರು ಅನಾವರಣ!

ಬಾಲಿವುಡ್‌ನ ಶಾರುಖ್ ಖಾನ್, ಹುಮಾ ಖುರೇಶಿ, ಗುಲ್ ಪನಾಗ್, ನಾರಾಯನ್ ಕಾರ್ತಿಕೇಯನ್, ದಲೇರ್ ಮೆಹನ್ದಿ, ಅಂಗಡ್ ಬೇಡಿ, ನಫಿಸಾ ಅಲಿ, ಸೊಹಾ ಆಲಿ ಖಾನ್, ಡಿಸೈನರ್ ಗೌರಿ ಹಾಗೂ ನೈನಿಕಾ, ಕುಶಾ ಕಪಿಲ, ರಾಹುಲ್ ಸಿಂಗ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಪಾಲ್ಗೊಂಡಿದ್ದರು.