Asianet Suvarna News Asianet Suvarna News

ಬಡಾ ದೋಸ್ತ್ ಲೈಟ್ ಕಮರ್ಷಿಯಲ್ ವಾಹನ ಬಿಡುಗಡೆ ಮಾಡಿದ ಅಶೋಕ್ ಲೈಲ್ಯಾಂಡ್!

ಟ್ರಕ್ ಸೇರಿದಂತೆ ಕಮರ್ಷಿಯಲ್ ವಾಹನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಅಶೋಕ್ ಲೈಲ್ಯಾಂಡ್ ಇದೀಗ ಬಡಾ ದೋಸ್ತ್ ಎಂಬು ಲೈಟ್ ಕಮರ್ಷಿಯಲ್ ವಾಹನ ಬಿಡುಗಡೆ ಮಾಡಿದೆ. ಈ ವಾಹನದ ಬೆಲೆ ಸೇರಿದಂತೆ ಇತರ ಮಾಹಿತಿ ವಿವರ ಇಲ್ಲಿವೆ.

Ashok Leyland Bada Dost Light Commercial Vehicle Launched in India
Author
Bengaluru, First Published Sep 15, 2020, 3:34 PM IST

ನವದೆಹಲಿ(ಸೆ.15): ಅನ್‌ಲಾಕ್ ಪ್ರಕ್ರಿಯೆಯಲ್ಲಿ ಹಲವು ವಾಹನಗಳು ಬಿಡುಗಡೆಯಾಗಿದೆ. ಇದೀಗ ಕಮರ್ಷಿಯಲ್ ವಾಹನಗಳು ಕೂಡ ಹೆಚ್ಚಾಗಿ ಬಿಡುಗಡೆಯಾಗುತ್ತಿದೆ. ಇದೀಗ ಅಶೋಕ್ ಲೈಲ್ಯಾಂಡ್ ಬಡಾ ದೋಸ್ತ್ ಲೈಟ್ ಕಮರ್ಷಿಯಲ್ ವಾಹನ ಬಿಡುಗಡೆ ಮಾಡಿದೆ. ಎರಡು ವೇರಿಯೆಂಟ್‌ಗಳಲ್ಲಿ ನೂತನ ಕಮರ್ಷಿಯಲ್ ವಾಹನ ಲಭ್ಯವಿದೆ.

ಆಧುನಿಕ ತಂತ್ರಜ್ಞಾನ, ಗರಿಷ್ಠ ಮೈಲೇಜ್; ಭಾರತದ ಸಾರಿಗೆಯನ್ನು ಮರುವ್ಯಾಖ್ಯಾನಿಸಿದ ಟಾಟಾ ಮೋಟಾರ್ಸ್

ಬಡಾ ದೋಸ್ತ್ i3 ಹಾಗೂ i4 ಎಂಬ ಎರಡು ವೇರಿಯೆಂಟ್ ಲಬ್ಯವಿದೆ. ವಿಶೇಷ ಅಂದರೆ ಅಶೋಕ್ ಲೈಲ್ಯಾಂಡ್ ಬಡಾ ದೋಸ್ತ್ ವಾಹನ ಭಾರತ ಹಾಗೂ ಇತರರ ದೇಶಗಳಿಗೂ ರಫ್ತಾಗಲಿದೆ. ಇದಕ್ಕಾಗಿ ರೈಟ್ ಹಾಗೂ ಲೆಫ್ಟ್ ಡ್ರೈವಿಂಗ್ ಸ್ಟೇರಿಂಗ್ ಹೊಂದಿರುವ ವಾಹನ ಉತ್ಪಾದನೆ ಮಾಡಲಾಗಿದೆ.

ಬಡಾ ದೋಸ್ತ್ ಲೈಟ್ ಕಮರ್ಷಿಯಲ್ ವಾಹನದ ಬೆಲೆ 7.75 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ.  BS-VI ಎಂಜಿನ್ ಹೊಂದಿರುವ ನೂತನ i4 ವೇರಿಯೆಂಟ್ 1,860 kg ತೂಕ ಹೊತ್ತೊಯ್ಯಬಲ್ಲ ಸಾಮರ್ಥ್ಯ  ಹಾಗೂ i3 ವಾಹನ 1,405 kg ಸಾಮರ್ಥ್ಯ ಹೊಂದಿದೆ. 

ವಾಹನ ವೇರಿಯೆಂಟ್ ಹಾಗೂ ಬೆಲೆ(ಎಕ್ಸ್ ಶೋ ರೂಂ)
ಬಡಾ ದೋಸ್ತ್ -ಆರಂಬಿಕ ಬೆಲೆ 7.75 ಲಕ್ಷ ರೂಪಾಯಿ
ಬಡಾ ದೋಸ್ತ್ i3 LS and LX ಬೆಲೆ 7.95 ಲಕ್ಷ ರೂಪಾಯಿ ಹಾಗೂ  7.79 ಲಕ್ಷ ರೂಪಾಯಿ
ಬಡಾ ದೋಸ್ತ್ i4 LS and LX ಬೆಲೆ Rs 7.99 ಲಕ್ಷ ರೂಪಾಯಿ

Follow Us:
Download App:
  • android
  • ios