ರೆಯೊ ಎಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ; ಬುಕಿಂಗ್ ಬೆಲೆ 1999 ರೂ!
ಬೆಂಗಳೂರಿನ ಎದರ್ ಸೇರಿದಂತೆ ಭಾರತದಲ್ಲಿ ಹಲವು ಎಲೆಕ್ಟ್ರಿಕ್ ಸ್ಕೂಟರ್‌ಗಳು ಅತ್ಯಂತ ಯಶಸ್ವಿಯಾಗಿದೆ. ಇದೀಗ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ಇತರ ಇ ಸ್ಕೂಟರ್‌ಗೆ ಹೋಲಿಸಿದರೆ ನೂತನ ರೆಯೊ ಎಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಕಡಿಮೆ ಬೆಲೆ ಹೊಂದಿದೆ.
ಬೆಂಗಳೂರು(ಡಿ.24): ಬೆಂಗಳೂರಿನಿಂದ ಬಿಡುಗಡೆಯಾದ ಎಲೆಕ್ಟ್ರಿಕ್ ಸ್ಕೂಟರ್ ಪಾಲಿಗೆ ಮತ್ತೊಂದು ಸೇರಿಕೊಂಡಿದೆ. ಇದೀಗ ಗ್ರೇವ್ಸ್ ಕಾಟನ್ ಲಿಮಿಟೆಡ್ ಕಂಪನಿಯ ಎಂಪೆರೆ ವೆಹಿಕಲ್ಸ್ ವಿಭಾಗ ನೂತನ ರೆಯೊ ಎಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ರೆಯೊ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 45,099 (ಎಕ್ಸ್ ಶೋ ರೂಂ ಬೆಂಗಳೂರು). 1,999 ರುಪಾಯಿ ಪಾವತಿಸಿ ನೂತನ ಎಲೆಕ್ಟ್ರಿಕ್ ಸ್ಕೂಟರ್ ಬುಕ್ ಮಾಡಬಹುದು.
ಇದನ್ನೂ ಓದಿ: ಮತ್ತಷ್ಟು ಆಕರ್ಷಕ ಲುಕ್; ಯಮಹಾ ಫ್ಯಾಸಿನೋ 125FI ಸ್ಕೂಟರ್ ಲಾಂಚ್!.
ರೆಯೊ ಎಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಬುಕ್ ಮಾಡುವ ಗ್ರಾಹಕರಿಗೆ ಕಂಪನಿ ಉಚಿತ ಹೆಲ್ಮೆಟ್ ನೀಡಲಿದೆ. ರೆಯೊ ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣ ಭಾರತದ ವಾಹನ. ಬ್ಯಾಟರಿ, ಬಿಡಿ ಭಾಗ ಸೇರಿದಂತೆ ಎಲ್ಲವೂ ಕೂಡ ಇಲ್ಲೇ ಉತ್ಪಾದಿಸಲಾಗಿದೆ. ಶೀಘ್ರದಲ್ಲೇ ಭಾರತದ ಎಲ್ಲಾ ನಗರಗಳಲ್ಲಿ ರೆಯೊ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಾಗಲಿದೆ ಎಂದು ಸ್ಕೂಟರ್ ಬಿಡುಗಡೆ ಬಳಿಕ MD & CEO ನಾಗೇಶ್ ಬಸವನಹಳ್ಳಿ ಹೇಳಿದರು.
ಇದನ್ನೂ ಓದಿ: 60 ಲಕ್ಷದ ಬೈಕ್‌ಗೆ 42 ಲಕ್ಷ ರೂ ದಂಡ; ವಾಹನಕ್ಕಾಗಿ 14 ತಿಂಗಳು ಕಾನೂನು ಹೋರಾಟ!
ರೆಯೊ ಎಲೆಕ್ಟ್ರಿಕ್ ಸ್ಕೂಟರ್ 250 ವ್ಯಾಟ್ ಮೋಟಾರ್ ಹಾಗೂ ಆ್ಯಸಿಡ್ ಬ್ಯಾಟರಿ ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 55 ರಿಂದ 65 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಸ್ಕೂಟರ್ ಕರ್ಬ್ ತೂಕ್ 86 ಕೆಜಿ ಇದ. ಫ್ರಂಟ್ ಹಾಗೂ ರೇರ್ 110 mm ಡ್ರಮ್ ಬ್ರೇಕ್ ಲಭ್ಯವಿದೆ.
LED ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, USB ಚಾರ್ಜಿಂಗ್ ಪಾಯಿಂಟ್ ಕೂಡ ಈ ಸ್ಕೂಟರ್‌ನಲ್ಲಿದೆ. ಕೆಂಪು, ಬಿಳಿ, ನೀಲಿ ಹಾಗೂ ಕಪ್ಪು ಬಣ್ಣಗಳಲ್ಲಿ ನೂತನ ಸ್ಕೂಟರ್ ಲಭ್ಯವಿದೆ.