ಚೆನ್ನೈ(ಆ.31): ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್, ಬುಲೆಟ್ ಸೇರಿದಂತೆ ಎಲ್ಲಾ ಬೈಕ್‌ಗಳ ಶೈಲಿಗಿಂತ ಭಿನ್ನವಾಗಿ ಹೊಚ್ಚ ಹೊಸ ಕ್ರೂಸರ್ ಬೈಕ್ ರಾಯಲ್ ಎನ್‌ಫೀಲ್ಡ್ ಬಿಡುಗಡೆ ಮಾಡುತ್ತಿದೆ. ಆಕರ್ಷಕ ಶೈಲಿ ಸೇರಿದಂತೆ ಹಲವು ಹೊಸತನಗಳು ಈ ಬೈಕ್‌ನಲ್ಲಿವೆ. ರೋಡ್ ಟೆಸ್ಟ್ ವೇಳೆ ಬೈಕ್ ಶೈಲಿ ಬಹಿರಂಗವಾಗಿದ್ದು, ಇದೀಗ ಎಲ್ಲರ ಕುತೂಹಲ ಇಮ್ಮಡಿಗೊಳಿಸಿದೆ.

ಒಂದೇ ದಿನ ಒಂದು ಸಾವಿರ ಬೈಕ್ ಡೆಲಿವರಿ; ದಾಖಲೆ ಬರೆದ ರಾಯಲ್ ಎನ್‌ಫೀಲ್ಡ್!

ನೂತನ ಕ್ರೂಸರ್ ರಾಯಲ್ ಎನ್‌ಫೀಲ್ಡ್ ಬೈಕ್ ಟ್ವಿನ್ ಎಕ್ಸಾಸ್ಟ್, ಹಾಗೂ ಟ್ವಿನ್ ಸಿಲಿಂಡರ್ ಹೊಂದಿರುವ ಸಾಧ್ಯತೆ ಇದೆ. ಹೆಚ್ಚು ಅಗ್ರೆಸ್ಸೀವ್ ಹಾಗೂ ಸ್ಪೊರ್ಟೀವ್ ಲುಕ್ ಹೊಂದಿರುವ ನೂತನ ಬೈಕ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈಗಾಗಲೇ ರಾಯಲ್ ಎನ್‌ಪೀಲ್ಡ್ 650 ಸಿಸಿ ಎಂಜಿನ್ ಬೈಕ್ ಬಿಡುಗಡೆ ಮಾಡಿದೆ. ಆದರೆ ನೂತನ ಕ್ರೂಸರ್ ಬೈಕ್ ಹೊಸ ಶೈಲಿಯಿಂದ ಕೂಡಿದ್ದು ಎಲ್ಲರ ಗಮನಸೆಳೆದಿದೆ.

ನೂತನ ಕ್ರೂಸರ್ 650 ಸಿಸಿ ಬೈಕ್ ಪ್ರಿಮಿಯಂ ಬೈಕ್ ಆಗಿದ್ದು ಮೆಟಲ್ ಟಬಿಂಗ್ ಹಾಗೂ ಟ್ವಿನ್ ರೇರ್ ಶಾಕ್ಸ್ ಹೊಂದಿದೆ. ಕ್ರೂಸರ್ ಬೈಕ್ ಆಗಿರುವ ಕಾರಣ ಹೆಚ್ಚು ಉದ್ದ ಹಾಗೂ ಗಾತ್ರದಲ್ಲಿ ಕೊಂಚ ಸಣ್ಣದಾಗಿದೆ. ಇತ್ತೀಚೆಗೆ ಕವಾಸಕಿ ವಾಲ್ಕನೊ ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಬೈಕ್‌ಗೆ ನೇರಸ್ಪರ್ಧಿಯಾಗಿ ನೂತನ ರಾಯಲ್ ಎನ್‌ಫೀಲ್ಡ್ ಬೈಕ್ ಬಿಡುಗಡೆಯಾಗಲಿದೆ.