ಹಬ್ಬದ ಋತುವಿಗೆ ಏರ್‌ಏಷ್ಯಾ ಭರ್ಜರಿ ಆಫರ್ ಘೋಷಿಸಿದಿ. ಅಕ್ಟೋಬರ್ 15 ರಿಂದ ಜೂನ್ 30ರವರೆಗೆ ಈ ಆಫರ್ ನೀಡಲಾಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಪ್ರಯಾಣದ ಮೇಲೆ ಭಾರಿ ಕಡಿತ ನೀಡಲಾಗಿದೆ.

ಬೆಂಗಳೂರು(ಅ.16): ಹಬ್ಬದ ಋತುವಿಗೆ ಏರ್‌ಏಷ್ಯಾ ಶೇ.70ರ ರಿಯಾಯಿತಿ ದರಗಳ ವಿಶೇಷ ಪ್ರೊಮೊ ಕೊಡುಗೆ ಪ್ರಕಟಿಸಿದೆ. ಅತಿಥಿಗಳು ಅಕ್ಟೋಬರ್ 15ರಿಂದ ಜೂನ್ 30, 2019ರವರೆಗೆ ಪ್ರಯಾಣಿಸಲು ಅಕ್ಟೋಬರ್ 15ರಿಂದ ಅಕ್ಟೋಬರ್ 28, 2018ರವರೆಗೆ ಟಿಕೆಟ್ ಕಾಯ್ದಿರಿಸಬಹುದು.

ಈ ಕೊಡುಗೆ ಏರ್‌ಏಷ್ಯಾ ಗ್ರೂಪ್ ನೆಟ್‍ವರ್ಕ್‍ಗಳಾದ ಏರ್‌ಏಷ್ಯಾ ಇಂಡಿಯಾ(ಫ್ಲೈಟ್ ಕೋಡ್ ಐ5), ಏರ್‌ಏಷ್ಯಾ ಬರ್ಹಾದ್(ಫ್ಲೈಟ್ ಕೋಡ್ ಎಕೆ), ಥಾಯ್ ಏರ್‌ಏಷ್ಯಾ(ಫ್ಲೈಟ್ ಕೋಡ್ ಎಫ್‍ಡಿ) ಮತ್ತು ಏರ್‌ಏಷ್ಯಾ ಎಕ್ಸ್(ಫ್ಲೈಟ್ ಕೋಡ್ ಡಿ7)ಗಳಲ್ಲಿ ಹಾರಾಟ ನಡೆಸುವ ಎಲ್ಲ ವಿಮಾನಗಳಿಗೆ ಲಭ್ಯ.

ಅತಿಥಿಗಳು ಏರ್‌ಏಷ್ಯಾ ಇಂಡಿಯಾದಿಂದ 21 ಸ್ಥಳೀಯ ತಾಣಗಳಲ್ಲಿ ಅಂದರೆ ಬೆಂಗಳೂರು, ನವದೆಹಲಿ, ಕೊಲ್ಕತಾ, ಕೊಚ್ಚಿ, ಗೋವಾ, ಜೈಪುರ, ಚಂಡೀಗಢ, ಪುಣೆ, ಗೌಹಾಟಿ, ಇಂಫಾಲ್, ವಿಶಾಖಪಟ್ಟಣ, ಹೈದರಾಬಾದ್, ಶ್ರೀನಗರ, ಬಗ್ದೋರ, ರಾಂಚಿ, ಭುವನೇಶ್ವರ, ನಾಗ್ಪುರ, ಇಂದೋರ್, ಸೂರತ್, ಅಮೃತ್‍ಸರ್ ಮತ್ತು ಚೆನ್ನೈಗಳಿಗೆ ಆಯ್ಕೆ ಮಾಡಿಕೊಳ್ಳಬಹುದು.

ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಅತಿಥಿಗಳು ಕೌಲಾಲಂಪುರ್, ಬ್ಯಾಂಕಾಕ್, ಕ್ರೇಬಿ, ಸಿಡ್ನಿ, ಆಕ್ಲೆಂಡ್, ಮೆಲ್ಬೋರ್ನ್, ಸಿಂಗಪೂರ್, ಬಾಲಿ ಮತ್ತಿತರೆ ತಾಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಏರ್‌ಏಷ್ಯಾ ಬಿಗ್ ಸದಸ್ಯರು ಅವರ ಏರ್‍ಏಷ್ಯಾ ಬಿಗ್ ಪಾಯಿಂಟ್‍ಗಳನ್ನು ಹಿಂದಿರುಗಿಸಿ ಮಾರಾಟದ ಅನುಕೂಲ ಪಡೆಯಬಹುದು. ಏರ್‌ಏಷ್ಯಾದ ಅತ್ಯಾಧುನಿಕ ಆವಿಷ್ಕಾರಗಳು ಹಾಗೂ ಪ್ರೊಮೋಷನ್‍ಗಳು, ಚಟುವಟಿಕೆಗಳು ಮತ್ತು ಸ್ಪರ್ಧೆಗೆಳ ಕುರಿತು ಟ್ವಿಟ್ಟರ್‍ನಲ್ಲಿ ( https://twitter.com/airasia) ಅಥವಾ ಫೇಸ್‍ಬುಕ್‍ನಲ್ಲಿ (facebook.com/AirAsia) ಸಂಪರ್ಕಿಸಿ.