Asianet Suvarna News Asianet Suvarna News

ಹಳೆ ಟ್ರಕ್ ನ್ಯೂ ಲುಕ್: ಮಂಜೂಷಾ ಮ್ಯೂಸಿಯಂ ಸೇರಿದ 1960ರ ಟಾಟಾ ಗಾಡಿ

ಗುಜರಿಗೆ ಹೋಗಬೇಕಾಗಿದ್ದ 62 ವರ್ಷದ ಹಿಂದಿನ ಹಳೆ ಲಾರಿಯನ್ನು ವೀರೇಂದ್ರ ಹೆಗ್ಗಡೆಯವರ ವಿಶೇಷ ಮುತುವರ್ಜಿಯಿಂದ ಪುನರ್ ವಿನ್ಯಾಸಗೊಳಿಸಲಾಗಿದೆ. ಇದೀಗ  ತೆಕ್ಕಟ್ಟೆಯ ಮಲ್ಯಾಡಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪಿದೆ. 

A new look for an old truck: 1960's Tata 1210D model lorry joined Manjusha Museum in Dharmasthala akb
Author
First Published Oct 18, 2022, 4:37 PM IST

ವರದಿ: ಶಶಿಧರ್ ಮಾಸ್ತಿಬೈಲು ಉಡುಪಿ
ಉಡುಪಿ/ದಕ್ಷಿಣ ಕನ್ನಡ: ಆರು ದಶಕಗಳ ಹಿಂದೆ ಹೊಸನಗರ, ತೀರ್ಥಹಳ್ಳಿ, ಕುಂದಾಪುರ, ಉಡುಪಿ ಹಾಗೂ ಹಳ್ಳಿ ಪರಿಸರದಲ್ಲಿ ಸಂತೆ ನಡೆಯುವಲ್ಲಿ ಅಕ್ಕಿ ಮೂಟೆ, ದಿನಸಿ ವಸ್ತುಗಳು, ಒಡೆದ ಕಟ್ಟಿಗೆ, ತೆಂಗಿನಕಾಯಿ, ತರಕಾರಿ, ಬೈಹುಲ್ಲು ಸೇರಿದಂತೆ ಮೊದಲಾದವುಗಳನ್ನು ಸರಬರಾಜು ಮಾಡಿ ರಾಜನಂತೆ ಮೆರೆದ ಲಾರಿ ಇದು. ತನ್ನ ಶಕ್ತಿಯನ್ನು ಕಳೆದುಕೊಂಡ ಬಳಿಕ ಗುಜರಿಗೆ ಹೋಗಬೇಕಾಗಿದ್ದ 62 ವರ್ಷದ ಹಿಂದಿನ ಹಳೆ ಲಾರಿಯನ್ನು ವೀರೇಂದ್ರ ಹೆಗ್ಗಡೆಯವರ ವಿಶೇಷ ಮುತುವರ್ಜಿಯಿಂದ ಪುನರ್ ವಿನ್ಯಾಸಗೊಳಿಸಲಾಗಿದೆ. ಇದೀಗ  ತೆಕ್ಕಟ್ಟೆಯ ಮಲ್ಯಾಡಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ತಲುಪಿದೆ. 

ಸತತ 40 ವರ್ಷಗಳಿಂದ ಟ್ರಕ್ ಬಾಡಿ ಬಿಲ್ಡ್ (Body Build) ಮಾಡಿ ಅನುಭವಿ ಕೆಲಸಗಾರರಾಗಿರುವ ಮಲ್ಯಾಡಿ ಶ್ರೀ ಗಜಾನನ ಟ್ರಕ್ ಬಾಡಿ ಬಿಲ್ಡರ್ಸ್ (Gajanana Truck Body Builders) ಮತ್ತು ವೆಲ್ಡಿಂಗ್ ವರ್ಕಸ್ ನ (Welding workers) ಮಾಲಿಕ ಮಂಜುನಾಥ್ ಆಚಾರ್ (Manjunath Achar) ಇವರ ನೇತೃತ್ವದ ತಂಡ 1960ನೇ ಇಸವಿಯ ಟಾಟಾ 1210 ಡಿ ಮಾಡೆಲ್ ನ  62 ವರ್ಷದ ಹಳೆ ಲಾರಿಗೆ ಸತತ 5 ತಿಂಗಳ ಕಾಲ ಶ್ರಮವಹಿಸಿ ಹೊಸ ಲುಕ್ ನೀಡಿದ್ದಾರೆ. ಕಾವ್ರಾಡಿ ಲೀಲಾವತಿ ವಾಸುದೇವ ಶೇಟ್ (Leelavathi Vasudev Shet)ಕುಟುಂಬದವರು 2021 ನ.10ರಂದು ವಾಹನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನೀಡಿದ್ದರು. ಕಳೆದ 5 ತಿಂಗಳ ಹಿಂದೆ ಖಾವಂದರ ಸೂಚನೆ ಮೇರೆಗೆ ಈ ಹಳೆ ಲಾರಿಯನ್ನು ಪುನರ್ ವಿನ್ಯಾಸಕ್ಕೆ ನೀಡಲಾಗಿತ್ತು.

ಕ್ಷೇತ್ರದಿಂದ 2ನೇ ಲಾರಿಗೆ ಅವಕಾಶ 
ಈ ಹಿಂದೆ ತೆಕ್ಕಟ್ಟೆ ಸಮೀಪದ ಉದ್ಯಮಿ, ಸಮಾಜ ಸೇವಕ ಮಲ್ಯಾಡಿ ಶಿವರಾಮ ಶೆಟ್ಟಿ (Malyadi Shivarama Shetty) ಇವರ ಒಡೆತನದ 1973ನೇ ಇಸವಿಯ ಟಾಟಾ ಕಂಪನಿಯ 1210ಡಿ ಲಾರಿಯನ್ನು ಕ್ಷೇತ್ರಕ್ಕೆ ನೀಡುವಾಗ ಆ ಸಮಯದಲ್ಲಿ ಮಂಜುನಾಥ್ ಆಚಾರ್ ಅವರ ವಾಹನಗಳ ಮರು ವಿನ್ಯಾಸದ ಕೈಚಳಕವನ್ನು ಖಾವಂದರು ಗಮನಿಸಿದ್ದರು. ಈ ನೆಲೆಯಲ್ಲಿ ಶಿವರಾಮ ಶೆಟ್ಟಿಯವರ ಲಾರಿಯನ್ನು ಪುನರ್ ವಿನ್ಯಾಸಗೊಳಿಸಲು ಆಚಾರ್ ಗೆ ಅವಕಾಶ ನೀಡಿದ್ದರು. ಆ ಲಾರಿಯ ಮರು ವಿನ್ಯಾಸವನ್ನು ನೋಡಿದ ಖಾವಂದರರು ಖುಷಿಪಟ್ಟು  2ನೇ ಬಾರಿಗೆ ಹಳೆ ಗುಜುರಿ ಲಾರಿಯನ್ನು ನೀಡಿ ಮರು ವಿನ್ಯಾಸಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದರು. 
  
ಶಿವರಾಮ ಶೆಟ್ಟಿ ಇವರ ಒಡೆತನದ 1973ನೇ ಇಸವಿಯ ಟಾಟಾ ಕಂಪನಿಯ 1210ಡಿ ಲಾರಿಯನ್ನು ಕರಾವಳಿ ಭಾಗಗಳಲ್ಲಿ ಹಿಂದೆ ಇರುತ್ತಿದ್ದ ಹಳೆ ಲಾರಿಯ ಶೈಲಿಯಲ್ಲಿಯೇ ಪುನರ್ ನಿರ್ಮಾಣ ಮಾಡಲಾಗಿತ್ತು. ಈ ಬಾರಿ ನೀಡಲಾದ 62 ವರ್ಷಗಳ ಹಿಂದಿನ ಲಾರಿಗೆ ಪೂಜ್ಯ ಖಾಂವದರೇ ಸ್ಕೇಚ್ ತಯಾರಿಸಿ ಲಾರಿ ಸಂಪೂರ್ಣವಾಗಿ ಈ ಬಾರಿ ಕೇರಳ ಶೈಲಿಯಲ್ಲಿ ಹಳೆ ಲಾರಿಗಳಂತೆ ಸಿದ್ದಪಡಿಸಲು ನೀಲನಕ್ಷೆ ತಯಾರಿಸಿಕೊಟ್ಟರು.

ಈ ಮನೆಯಲ್ಲಿ ಎಲ್ಲಿ ನೋಡಿದ್ರೂ ವಿಘ್ನ ವಿನಾಯಕನ ಮೂರ್ತಿಗಳೇ: ಗಣೇಶನ ಮ್ಯೂಸಿಯಂನಂತಿರೋ ಸ್ಪೆಷಲ್‌ ಹೋಮ್..!

ಬಿಡಿಭಾಗಗಳ ಕೊರತೆ
ಈ ಲಾರಿಯನ್ನು ಸಂಪೂರ್ಣವಾಗಿ ರಿಪೇರಿ ಮಾಡಲು 1 ತಿಂಗಳ ಕಾಲಾವಕಾಶ ಬೇಕಾಗಿದ್ದರೂ ಲಾರಿಯ ಬಿಡಿಭಾಗಗಳು ಸಿಗದೇ ಇರುವ ಕಾರಣದಿಂದ 5 ತಿಂಗಳ ಅವಧಿಯಲ್ಲಿ ಕೆಲಸ ಮಾಡಿ ಲಾರಿಯನ್ನು ಹೊಸ ಲುಕ್‌ನೊಂದಿಗೆ ನಿರ್ಮಿಸಲಾಗಿದೆ. ಮಾರುಕಟ್ಟೆಯಲ್ಲಿ 3 ತಿಂಗಳ ಕಾಲ ಕಾಯಲಾಗಿದೆ.  ಈಗಾಗಲೇ ಲಾರಿಯನ್ನು ಸಂಪೂರ್ಣ ರೀ ಫಿಟಿಂಗ್ ಮಾಡಲಾಗಿದ್ದು ಸೈಡ್ ಮಡ್ಗಾರ್ಡ್, ಮುಂಭಾಗದ ಬಂಪರ್, ಫ್ಲಾಟ್ಫಾರಂ, ಗ್ಲಾಸ್ ಪ್ರೇಮ್‌ಗಳು ಮಾರುಕಟ್ಟೆಯಲ್ಲಿ ಸಿಗದೇ ಇರುವುದರಿಂದ ಇವರೇ ತಯಾರಿಸಿ ಲಾರಿಗೆ ಅಳವಡಿಸಿದ್ದಾರೆ. ಲಾರಿಯ ಟಿಂಕರಿಂಗ್ ಕೆಲಸ ಸಂಪೂರ್ಣವಾಗಿ ಮಾಡಲಾಗಿದ್ದು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತಾರೆ ನಿತೀಶ್ ಆಚಾರ್ ಮಲ್ಯಾಡಿ.  

ವಿಘ್ನೇಶ್ ಆಚಾರ್, ನಿತೀಶ್ ಆಚಾರ್, ಹರೀಶ್, ಲಾರೆನ್ಸ್ ಬೆರೆಟ್ಟೂ, ರಮೇಶ್, ಕೃಷ್ಣಯ್ಯ ಆಚಾರ್ ಇವರ ಕೈಚಳಕದಲ್ಲಿ ಹಳೆ ಲಾರಿ ಹೊಸ ವಿನ್ಯಾಸ ಪಡೆದಿದೆ. ಸದಾಶಿವ ಪೈಂಟರ್ ಗೋಪಾಡಿ ಇವರ ಬಳಗ ಅಂದವಾದ ಬಣ್ಣವನ್ನು ಬಳಿದು ಲಾರಿಯ ಸೊಬಗನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಕುಂಭಾಸಿಯ ಗೋಪಾಲ್ ಇವರು ಲಾರಿಯ ಎಲೆಕ್ಟ್ರಿಕಲ್ ಕೆಲಸವನ್ನು ನಿರ್ವಹಿಸಿದ್ದು ಎಲ್ಲಾ ಎಲೆಕ್ಟ್ರಿಕಲ್ ವಿದ್ಯುತ್ ಲೈಟ್ ಗಳು ಸೇರಿದಂತೆ ಇಂಡಿಕೇಟರ್ ಮತ್ತು ವೈಪರ್‌ಗಳು ಕಾರ್ಯನಿರ್ವಹಿಸುತ್ತಿದೆ. 1960ನೇ ಇಸವಿಯ ಟಾಟಾ 1210ಡಿ ಮಾಡೆಲ್ ಹಳೆ ಲಾರಿಯು ಇನ್ನೂ ಮುಂದೆ ಹೊಸ ಗೆಟಪ್ ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜೂಷಾ ಮ್ಯೂಸಿಯಂನಲ್ಲಿ ಕಾಣಸಿಗಲಿದೆ.

ಅರಸಾಳು ರೈಲ್ವೇ ನಿಲ್ದಾಣದಲ್ಲಿ 'ಮಾಲ್ಗುಡಿ ಡೇಸ್' ನೆನಪಿಸುವ ಮ್ಯೂಸಿಯಂ
ಇದು ನಮ್ಮ ಭಾಗ್ಯವೆಂಬಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 2ನೇ ಬಾರಿಗೆ ಮತ್ತೊಂದು ಲಾರಿಯ ಪುನರ್ ನಿರ್ಮಾಣಕ್ಕೆ ಪೂಜ್ಯ ಖಾವಂದರು ಅವಕಾಶ ಮಾಡಿಕೊಟ್ಟಿದ್ದಾರೆ. ಬಹಳಷ್ಟು ಖುಷಿ ತಂದಿದೆ. ಪೂಜ್ಯ ಖಾವಂದರ ಮಾರ್ಗದರ್ಶನದಲ್ಲಿ ಅವರ ಇಚ್ಛೆಯಂತೆ ವಿಶೇಷವಾಗಿ ಅಂದವಾಗಿ ಪುನರ್ ನಿರ್ಮಾಣ ಮಾಡಿದ್ದೇವೆ. ಇದೊಂದು ನಮ್ಮ ಸೌಭಾಗ್ಯ ಎಂದು ಗ್ಯಾರೇಜು ಮಾಲಿಕರಾದ ಮಂಜುನಾಥ್ ಆಚಾರ್ ಮಲ್ಯಾಡಿ  ಹೇಳಿದ್ದಾರೆ. ಕ್ಷೇತ್ರದ ಅಭಿಮಾನದ ಮೇರೆಗೆ ಲಾರಿ ಕ್ಷೇತ್ರಕ್ಕೆ ಹೊರಡುವ ವಿಷಯ ತಿಳಿದ ಸ್ಥಳೀಯ ಭಕ್ತರು ತಾವು ಬೆಳೆದ ಹಾಗೂ ಸ್ಥಳೀಯ ಭಕ್ತರಿಂದ ಶೇಖರಿಸಿದ ಹೊರೆ ಕಾಣಿಕೆಯನ್ನು ಇದೇ ಲಾರಿಯಲ್ಲಿ ತೆಗೆದುಕೊಂಡು ಕ್ಷೇತ್ರಕ್ಕೆ ನೀಡಲಾಯಿತು.

Follow Us:
Download App:
  • android
  • ios