ಬೆಂಗಳೂರು(ಜು.07): ಎಲೆಕ್ಟ್ರಿಕ್ ಸನ್‌ರೂಫ್ ಇದೀಗ ಕಾರುಗಳಲ್ಲಿ ಸಾಮಾನ್ಯವಾಗಿದೆ. ಐಷಾರಾಮಿ ಹಾಗೂ ದುಬಾರಿ ಕಾರುಗಳಲ್ಲಿ ಮಾತ್ರ ಇದ್ದ ಬಹುತೇಕ ಫೀಚರ್ಸ್ ಇದೀಗ ಬಹುತೇಕ ಎಲ್ಲಾ ಕಾರುಗಳಿಗೆ ನೀಡಲಾಗುತ್ತಿದೆ. ಈ ರೀತಿ ಫೀಚರ್ಸ್‌ಗಳಲ್ಲಿ ಸನ್‌ರೂಫ್ ಪ್ರಮುಖ ಫೀಚರ್ಸ್. ಭಾರತದಲ್ಲಿ ಲಭ್ಯವಿರುವ ಕಡಿಮೆ ಬೆಲೆಯ ಸನ್‌ರೂಫ್ ಫೀಚರ್ಸ್ ಹೊಂದಿದ ಕಾರಿನ ವಿವರ ಇಲ್ಲಿದೆ.

50 ಸಾವಿರ ರೂಪಾಯಿಗೆ ಬುಕ್ ಮಾಡಿ MG ಹೆಕ್ಟರ್ ಪ್ಲಸ್ ಕಾರು!.

ಹ್ಯುಂಡೈ ಕ್ರೆಟಾ
ಹ್ಯುಂಡೈ ಕ್ರೆಟಾ ಆರಂಭಿಕ ಬೆಲೆ 9.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಗರಿಷ್ಠ ಬೆಲೆ 17.2 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಕ್ರೆಟಾ SX ವೇರಿಯೆಂಟ್(13.46 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಕಾರು ಸನ್‌ರೂಫ್ ಆಯ್ಕೆ ನೀಡುತ್ತಿದೆ. ಇದು ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯಲಿರುವ ಸನ್‌ರೂಫ್ ಕಾರಾಗಿದೆ.

MG ಹೆಕ್ಟರ್
ಟಾಟಾ ಹ್ಯಾರಿಯರ್, ಮಹೀಂದ್ರ XUV500 ಕಾರಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾದ MG ಹೆಕ್ಟರ್ ಕಾರಿನ ಟಾಪ್ ಮಾಡೆಲ್ ಶಾರ್ಪ್ ಟ್ರಿಮ್ ವೆರಿಯೆಂಟ್ ಸನ್‌ರೂಫ್ ಆಯ್ಕೆ ನೀಡುತ್ತಿದೆ. ಇದರ ಬೆಲೆ 16.63 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
 
ಟಾಟಾ ಹ್ಯಾರಿಯರ್
ಭಾರತದಲ್ಲಿ ಬಹುಬೇಡಿಕೆ SUV ಕಾರಾಗಿ ಮಾರ್ಪಟ್ಟಿರುವ ಟಾಟಾ ಹ್ಯಾರಿಯರ್ XZ+ ವೇರಿಯೆಂಟ್ ಸನ್‌ರೂಫ್ ಆಯ್ಕೆ ನೀಡುತ್ತಿದೆ. ಇದರ ಬೆಲೆ 18.75 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

ಫೋಕ್ಸ್‌ವ್ಯಾಗನ್ T ರಾಕ್
ಫೋಕ್ಸ್‌ವ್ಯಾಗನ್ ಟಿರಾಕ್ ಭಾರತದ ಎಂಟ್ರಿ ಲೆವೆಲ್ SUV ಕಾರಾಗಿದೆ. ಫುಲ್ಲಿ ಲೋಡೆಡ್ ಕಾರು ಪನರೋಮಿಕ್ ಸನ್‌ರೂಫ್ ನೀಡುತ್ತಿದೆ. ಇದರ ಬೆಲೆ 19.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

ಜೀಪ್ ಕಂಪಾಸ್
ಜೀಪ್ ಕಂಪಾಸ್  ಬೆಲೆ 16.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ನಿಂದ ಆರಂಭವಾಗಲಿದ್ದು, ಗರಿಷ್ಠ ಬೆಲೆ 24.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).