ಮಾರುತಿ ಸುಜುಕಿ ಎರ್ಟಿಗಾ ಕಾರು ಬುಕಿಂಗ್ ಆರಂಭ! ಬೆಲೆ ಎಷ್ಟು?
ಮಾರುತಿ ಸುಜುಕಿ ನೂತನ ಎರ್ಟಿಗಾ ಕಾರು ಬಿಡುಗಡೆ ಮಾಡುತ್ತಿದೆ. ಬುಕಿಂಗ್ ಆರಂಭಿಸಿರುವ ಎರ್ಟಿಗಾ ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಹಲವು ವಿಶೇಷತೆಗಳೊಂದಿಗೆ ಬಿಡುಗಡೆಯಾಗುತ್ತಿರುವ ಎರ್ಟಿಗಾ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
ಬೆಂಗಳೂರು(ಅ.23): ಮಾರುತಿ ಸುಜುಕಿ ಇದೀಗ ನೂತನ ಎರ್ಟಿಗಾ ಬಿಡುಗಡೆ ಮಾಡಲು ಸಜ್ಜಾಗಿದೆ. ನವೆಂಬರ್ 21 ರಂದು ನೂತನ ಎರ್ಟಿಗಾ ಕಾರು ಲಾಂಚ್ ಆಗಲಿದೆ. ಆದರೆ ಇದಕ್ಕೂ ಮುನ್ನವೇ ಎರ್ಟಿಗಾ ಕಾರಿನ ಬುಕಿಂಗ್ ಆರಂಭಗೊಂಡಿದೆ.
ನೂನತ ಎರ್ಟಿಗಾ ಹಲವು ಬದಲಾವಣೆಯೊಂದಿಗೆ ರಸ್ತೆಗಿಳಿಯುತ್ತಿದೆ. ಮುಂಭಾಗದ ಗ್ರಿಲ್, ಹೆಡ್‌ಲ್ಯಾಂಪ್ಸ್ ಹೊಸ ಟಚ್ ನೀಡಲಾಗಿದೆ. ಇನ್ನು ವಿನ್ಯಾಸದಲ್ಲೂ ಹೆಚ್ಚು ಆಕರ್ಷಕಣೀಯವಾಗಿದೆ.
ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹೊಂದಿದೆ. ಇನ್ನು ಡ್ಯುಯೆಲ್ ಫ್ರಂಟ್ ಏರ್‌ಬ್ಯಾಗ್, ಪಾರ್ಕಿಂಗ್ ಸೆನ್ಸಾರ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಹಾಗೂ ರಿವರ್ಸ್ ಕ್ಯಾಮರ ಕೂಡ ಹೊಂದಿದೆ.
1.5 ಲೀಟರ್ K15B 4 ಸಿಲಿಂಡರ್ SHVS ಎಂಜಿನ್ 104 ಬಿಹೆಚ್‌ಪಿ ಗರಿಷ್ಠ ಪವರ್ ಹಾಗೂ 138 Nm ಟಾರ್ಕ್ ಉತ್ಪಾದಿಸಲಿದೆ. ಇನ್ನು ಡೀಸೆಲ್ ವೇರಿಯೆಂಟ್ 1.3 ಲೀಟರ್ ಎಂಜಿನ್ ಹಾಗೂ 89 ಬಿಹೆಚ್‌ಪಿ ಗರಿಷ್ಠ ಪವರ್, 200Nm ಟಾರ್ಕ್ ಉತ್ಪಾದಿಸಲಿದೆ.
ಮಾರುತಿ ಸುಜುಕಿ ನೂತನ ಎರ್ಟಿಗಾ ಬೆಲೆ 6.4 ಲಕ್ಷ (ಎಕ್ಸ್ ಶೋ ರೂಂ)ರೂಪಾಯಿಂದ 10.8 ಲಕ್ಷ(ಎಕ್ಸ್ ಶೋ ರೂಂ) ಇರಲಿದೆ ಎಂದು ಅಂದಾಜಿಸಲಾಗಿದೆ. ಹೊಸ ಕಾರಿನಿಂದ ಮಾರುತಿ ಸುಜುಕಿ ಸಂಸ್ಥೆ ಕಾರು ಮಾರಾಟದಲ್ಲಿ ಗಣನೀಯ ಏರಿಕೆಯಾಗಲಿದೆ ಎಂದು ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.