Asianet News kannada - Editor’s Team
Roopa Hegde
Roopa Hegde ಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
Gowthami K
ಒನ್ ಇಂಡಿಯಾ, ಡೈಲಿಹಂಟ್, ವಿಜಯ ಕರ್ನಾಟಕ ವೆಬ್, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
Ganesh Mabla Gowda
ಪತ್ರಿಕೋದ್ಯಮದ ಕನಸು ಕಟ್ಟಿಕೊಟ್ಟಿದ್ದು ಕುವೆಂಪು ವಿವಿ. ʼಕನ್ನಡ ಜನಾಂತರಂಗʼ ಮತ್ತು ʼಕರಾವಳಿ ಅಲೆʼ ಮೂಲಕ ವೃತ್ತಿ ಆರಂಭ. ಅದಕ್ಕೆ ರೆಕ್ಕುಪುಕ್ಕ ಕೊಟ್ಟಿದ್ದು ಪಬ್ಲಿಕ್ ಟಿವಿ, ಟಿವಿ9 ಹಾಗೂ ನ್ಯೂಸ್‌ಫಸ್ಟ್ ಕನ್ನಡ. ಒಂದಷ್ಟು ಅನುಭವ. ಪ್ರಸ್ತುತ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತನಾಗಿ ಮುಂದುವರಿದಿದ್ದೇನೆ. ಬದುಕು ನಿರಂತರ ಕಲಿಕೆ. ಅದಕ್ಕೆ ಈಗ ʼನೇರ ದಿಟ್ಟ ನಿರಂತರʼ! ಪುಸ್ತಕ ಓದೋದು ನನ್ನ ಅಭ್ಯಾಸ. ಕವನ ಬರೆಯೋದು ನನ್ನಿಷ್ಟ. ರಾಜಕೀಯ ಹಾಗೂ ಕ್ರಿಕೆಟ್ ಸುದ್ದಿಗಳ ಮೇಲೆ ಹೆಚ್ಚು ಆಸಕ್ತಿ. ಹಾಂ.. ಅಂದ್ಯಾಗೆ ನನ್ನ ಊರು ಉತ್ತರ ಕನ್ನಡ ಜಿಲ್ಲೆ ದೊಡ್ಮನೆ ಬಳಿಯ ಕೆರೆಕುಳಿ ಎಂಬ ಪುಟ್ಟ ಊರು!
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್, ರೋಟರಿ ಎಕ್ಸಲೆನ್ಸ್ ಅವಾರ್ಡ್ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲ್ಯಾನ್ಸರ್ ಆಗಿ ಕೆಲಸ ನಿರ್ವಹಣೆ.
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್, ಒನ್ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.