Asianet Suvarna News Asianet Suvarna News

ಈ ವಾರ ಹೇಗಿದೆ ನಿಮ್ಮ ಭವಿಷ್ಯ?

ಈ ವಾರ ಹೇಗಿದೆ ನಿಮ್ಮ ಭವಿಷ್ಯ?

Weekly Horoscope September
Author
Bengaluru, First Published Sep 9, 2018, 7:10 AM IST

ಮೇಷ

ಅನಿರೀಕ್ಷಿತ ಘಟನೆಗಳು ದೀರ್ಘ ಕಾಲದವರೆಗೂ
ಒಳಿತು ಮಾಡಲಿವೆ. ಹೊಸ ವ್ಯಕ್ತಿಯ ಪರಿಚಯದಿಂದ
ಸಂತಸಗೊಳ್ಳುವಿರಿ. ಹಳೆಯ ಸಾಲಗಳಿಂದ ಮುಕ್ತಿ
ದೊರೆಯಲಿದೆ. ಉದ್ಯೋಗಸ್ಥರಿಗೆ ಆದಾಯದಲ್ಲಿ ಏರಿಕೆ. ಪೋಷ
ಕರ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಒತ್ತಡದಲ್ಲಿ ಕೆಲಸ ನಿರ್ವ
ಹಿಸಬೇಕಾದ ಅನಿವಾರ್ಯತೆ ಇದೆ. ಖರ್ಚಿ ಕಡಿಮೆ ಮಾಡಿ.

 

ವೃಷಭ

ಔದ್ಯೋಗಿಕ ಪ್ರಗತಿ. ಹೆಂಡತಿಯ ಸಾಧನೆಗೆ ಹೆಗಲು
ಕೊಟ್ಟು ನಿಲ್ಲುವಿರಿ. ಶುಭ ಕಾರ್ಯಗಳು ಸನ್ನಿಹಿತ
ವಾಗಲಿವೆ. ಬಂಧು ಬಳಗದಿಂದ ನಿಮ್ಮ ಬೆಳವಣಿಗೆಗೆ
ಪ್ರೋತ್ಸಾಹ ದೊರೆಯಲಿದೆ. ಸೂಕ್ತ ನಿರ್ಧಾರಗಳಿಂದ ಮುಂದು
ವರೆಯಿರಿ. ಹೊಸ ಸ್ನೇಹಿತರಿಂದ ಆರ್ಥಿಕ ಸಹಾಯವಾಗಿದೆ.
ಉದ್ದಿಮೆ ಸ್ಥಾಪಿಸುವವರಿಗೆ ಇದು ಒಳ್ಳೆಯ ಕಾಲ.

ಮಿಥುನ

ಒಳ್ಳೆಯ ಚಿಂತನೆಗಳು ಹೆಚ್ಚಾಗಲಿವೆ. ಮನೆಯಲ್ಲಿ
ಧಾರ್ಮಿಕ ಚಟುವಟಿಕೆಗಳಿಂದ ಶಾಂತಿ ನೆಲೆಯಾಗ
ಲಿದೆ. ಕೈಹಾಕಿದ ಕೆಲಸಗಳೆಲ್ಲಕ್ಕೂ ಒಳ್ಳೆಯ ಫಲಿತಾಂಶ
ಸಿಗಲಿದೆ. ಮಕ್ಕಳ ಬಗ್ಗೆ ಅನಾವಶ್ಯಕ ಅನುಮಾನ ಬೇಡ. ಓದುವ
ಹವ್ಯಾಸ ಹೆಚ್ಚಾಗಲಿದೆ. ಅಗತ್ಯದ ಖರ್ಚುಗಳಿಗೆ ಮಾತ್ರ ಪ್ರಾಧಾ
ನ್ಯತೆ ನೀಡಿ. ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ.

ಕಟಕ

ಆಸಕ್ತಿಯ ಕ್ಷೇತ್ರ ಆಯ್ಕೆ ಮಾಡಿಕೊಳ್ಳಿ. ಹಿಂದೆ ಮಾಡಿದ
ಕೆಲಸಕ್ಕೆ ಒಳ್ಳೆಯ ಫಲ ದೊರಕಲಿದೆ. ಮಿತವ್ಯಯಕ್ಕೆ
ಹೆಚ್ಚು ಪ್ರಾಮುಖ್ಯತೆ ನೀಡಿ. ಮನೆಯವರೊಂದಿಗೆ
ದೂರದ ಪ್ರಯಾಣ ಸಾಧ್ಯವಾಗಲಿದೆ. ಸ್ವಂತ ಮನೆಯ ಆಸೆಗೆ
ಜೀವ ಬರಲಿದೆ. ನಿಧಾನವಾಗಿ ಮುಂದುವರೆಯಿರಿ. ರೈತಾಪಿ
ವರ್ಗಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಶುಭಫಲ ದೊರೆಯಲಿದೆ.

ಸಿಂಹ

ರಾಜಕೀಯದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಅನಾವಶ್ಯಕ
ವಾಗಿ ಯಾವುದೇ ವಿಚಾರಗಳಲ್ಲಿ ಸಕ್ರಿಯವಾಗು
ವುದು ಬೇಡ. ಮನೆಯಲ್ಲಿ ಶುಭಕಾರ್ಯಗಳು
ನೆರವೇರಲಿವೆ. ತಂದೆ-ತಾಯಿಗಳ ಬೆಂಬಲದಿಂದ ನೂತನ
ಉದ್ಯಮವನ್ನು ಆರಂಭಮಾಡುವಿರಿ. ಸ್ನೇಹಿತರೊಂದಿಗೆ ಆರ್ಥಿಕ
ವ್ಯವಹಾರ ಬೇಡ. ಅಳೆದು ತೂಗಿ ನಿರ್ಧಾರ ಕೈಗೊಳ್ಳಿ.

ಕನ್ಯಾ

ಅಧಿಕಾರದ ಸ್ಥಾನದಲ್ಲಿರುವವರು ಒತ್ತಡಕ್ಕೆ
ಸಿಲುಕಬೇಕಾಗುತ್ತದೆ. ಗೆಳೆಯರ ಮಾತಿಗೆ ಹೆಚ್ಚು ಬೆಲೆ
ನೀಡುವಿರಿ. ಆರೋಗ್ಯದ ಕಡೆ ಗಮನವಿರಲಿ.
ಬಂಧುಗಳಿಗೆ ಆರ್ಥಿಕ ಸಹಾಯ ಮಾಡುವಿರಿ. ವಿನಾಕಾರಣ
ಕೋಪ ಬೇಡ. ಸರಕಾರಿ ನೌಕರಿ ಸಿಕ್ಕುವ ಅವಕಾಶಗಳು
ಅಧಿಕವಾಗಿವೆ. ಮಾತಿನ ಮೇಲೆ ಹೆಚ್ಚು ಹಿಡಿತ ಸಾಧಿಸಿ.

ತುಲಾ

ಎಲ್ಲರೊಂದಿಗೂ ಅತಿಯಾದ ಸಲುಗೆ ಬೇಡ. ದೂರದ
ಪ್ರಯಾಣದಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ.
ಅತಿ ಭಾವುಕತೆ ಒಳ್ಳೆಯದಲ್ಲ. ತಂದೆ ತಾಯಿ
ಆರೋಗ್ಯದಲ್ಲಿ ಸುಧಾರಣೆ. ಸಿನಿಮಾ ಕ್ಷೇತ್ರದಲ್ಲಿ ಇರುವವರಿಗೆ
ಒಳ್ಳೆಯ ಅವಕಾಶಗಳು ಸಿಗಲಿವೆ. ಕೆಲಸದಲ್ಲಿ ನಿರೀಕ್ಷಿತ
ಪ್ರಗತಿಯಾಗಲಿದೆ. ವಿದ್ಯಾರ್ಥಿಗಳ ಪಾಲಿಗೆ ಒಳ್ಳೆಯ ದಿನಗಳಿವು.

ವೃಶ್ಚಿಕ

ನೆಮ್ಮದಿಯ ನಾಳೆಗಾಗಿ ಇಂದಿನಿಂದಲೇ ತಯಾರಿ
ಮಾಡಿಕೊಳ್ಳಿ. ಒತ್ತಡದಿಂದ ಹೊರಗೆ ಬರುವಿರಿ.
ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ. ಮಕ್ಕಳ
ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಲಿದೆ. ಸಿಕ್ಕ ಅವಕಾಶಗಳನ್ನು
ಸರಿಯಾಗಿ ಬಳಕೆ ಮಾಡಿಕೊಳ್ಳಿ. ಅಪರಿಚಿತ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ
ಇರಲಿ. ದೂರದ ಪ್ರಯಾಣ ಮಾಡುವ ಅಗತ್ಯ ಬರಲಿದೆ

ಧನಸ್ಸು

ಅಂದುಕೊಂಡಿದ್ದರ ಕಡೆಗೆ ಗಮನ ಹರಿಸಲು
ಸಾಧ್ಯವಾಗುವುದಿಲ್ಲ. ನಿಮ್ಮ ಹತ್ತಿರದವರೊಂದಿಗೆ
ಮೃದುವಾಗಿ ವರ್ತಿಸಿ, ಆರ್ಥಿಕವಾಗಿ
ಲಾಭವಾಗಲಿದೆ. ಮಾಡುವ ಕೆಲಸದಲ್ಲಿ ಶ್ರದ್ಧೆ ಮುಖ್ಯ. ಮದುವೆ
ವಿಚಾರದಲ್ಲಿ ಒಳ್ಳೆಯದಾಗಲಿದೆ. ಹಿತೈಷಿಗಳ ಮಾತಿಗೆ ಬೆಲೆ ನೀಡಿ.

ಮಕರ

ವ್ಯಾಪಾರಕ್ಕೆ ಸಂಬಂಧಿಸಿದಂತೆ ದುಡುಕು ಬೇಡ.
ಮಕ್ಕಳ ಪ್ರೀತಿಯಿಂದ ಹೆಚ್ಚು ಸಂತೋಷಪಡುವಿರಿ.
ಅಂದುಕೊಂಡಂತೆ ಮಹತ್ವದ ಘಟನೆಗಳು
ನೆರವೇರಲಿವೆ. ಒಂದೇ ದಿನದಲ್ಲಿ ಹೆಚ್ಚು ಓಡಾಟ ಮಾಡಬೇಕಾದ
ಅನಿವಾರ್ಯತೆ ಸೃಷ್ಟಿಯಾಗಲಿದೆ. ಆರೋಗ್ಯದಲ್ಲಿ ಏರುಪೇರು.

ಕುಂಭ

ಅಗತ್ಯವಾದ ವಿಚಾರಗಳ ಕಡೆಗೆ ಮಾತ್ರ ನಿಮ್ಮ
ಗಮನವಿರಲಿ. ಖರ್ಚು ಕಡಿಮೆ ಮಾಡಿಕೊಳ್ಳಿ.
ಕೋರ್ಟ್ ವ್ಯಾಜ್ಯಗಳಲ್ಲಿ ಮುನ್ನಡೆ ಸಿಗಲಿದೆ. ಓದಿನಲ್ಲಿ
ಆಸಕ್ತಿ ಹೆಚ್ಚಾಗಲಿದೆ. ನೂತನ ಸಂಬಂಧಗಳಿಂದ ಹೆಚ್ಚು
ಉಪಯೋಗವಾಗಲಿದೆ. ಸ್ನೇಹಿತರಿಗೆ ಸಹಾಯ ಮಾಡುವಿರಿ.
ಆತ್ಮೀಯರೊಂದಿಗೆ ಕಠಿಣವಾಗಿ ವರ್ತಿಸುವುದು ಬೇ

ಮೀನ

ಶುಭ ಸಂದರ್ಭಗಳಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವಿರಿ.
ಕೆಲಸ ಕಾರ್ಯಗಳಲ್ಲಿ ಒತ್ತಡ ಹೆಚ್ಚಾಗಲಿದೆ.
ಎಲ್ಲವನ್ನೂ ಶಾಂತ ಚಿತ್ತದಿಂದ ಎದುರಿಸಿದರೆ ಒಳ್ಳೆಯ
ಫಲ ದೊರಕಲಿದೆ. ಆಸ್ತಿ ಖರೀದಿ ವಿಚಾರದಲ್ಲಿ ಆತುರ ಬೇಡ.
ತಂದೆ-ತಾಯಿ ಆರೋಗ್ಯದಲ್ಲಿ ನಿಧಾನಗತಿಯ ಚೇತರಿಕೆ.

Follow Us:
Download App:
  • android
  • ios